ADVERTISEMENT

Toxic Vs Dhurandhar 2|ಎರಡು ಸಂಸ್ಕೃತಿಗಳ ನಡುವಿನ ಘರ್ಷಣೆ: ರಾಮ್ ಗೋಪಾಲ್ ವರ್ಮಾ

ಪಿಟಿಐ
Published 22 ಫೆಬ್ರುವರಿ 2026, 11:25 IST
Last Updated 22 ಫೆಬ್ರುವರಿ 2026, 11:25 IST
<div class="paragraphs"><p>ನಟ ಯಶ್‌ ಹಾಗೂ ನಟ ರಣವೀರ್ ಸಿಂಗ್</p></div>

ನಟ ಯಶ್‌ ಹಾಗೂ ನಟ ರಣವೀರ್ ಸಿಂಗ್

   

ಚಿತ್ರ ಕೃಪೆ; ಯೂಟ್ಯೂಬ್

ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಹಾಗೂ ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2’ ಸಿನಿಮಾಗಳು ಇದೇ ಮಾರ್ಚ್ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿವೆ. ಈ ಸಿನಿಮಾಗಳ ಬಿಡುಗಡೆ ‘ಎರಡು ಸಂಸ್ಕೃತಿಗಳ ನಡುವಿನ ಘರ್ಷಣೆ’ ಎಂದು ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.  

ADVERTISEMENT

ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್ 2’ ಸಿನಿಮಾದಲ್ಲಿ ರಣವೀರ್ ಸಿಂಗ್ ನಟಿಸಿದ್ದಾರೆ. ಗೀತು ಮೋಹನ್ ದಾಸ್ ನಿರ್ದೇಶನದ ಯಶ್ ನಟನೆಯ ‘ಟಾಕ್ಸಿಕ್’ ಇದೇ ಮಾರ್ಚ್ 19ರಂದು ಬಿಡುಗಡೆಯಾಗಲಿದೆ. 

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಧುರಂಧರ್ 2 ಮತ್ತು ಟಾ‌ಕ್ಸಿಕ್ ಸಿನಿಮಾಗಳ ಬಿಡುಗಡೆ ಕುರಿತು ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಸುದೀರ್ಘ ಟಿಪ್ಪಣಿಯನ್ನು ಬರೆದಿದ್ದಾರೆ. ಟಿಪ್ಪಣಿಯಲ್ಲಿ ‘ಮಾರ್ಚ್ 19ರಂದು ಎರಡು ದೊಡ್ಡ ಚಲನಚಿತ್ರಗಳಾದ ಧುರಂಧರ್ 2 ಮತ್ತು ಟಾಕ್ಸಿಕ್ ಬಿಡುಗಡೆಯಾಗುತ್ತಿವೆ. ಇದು ಭಾರತೀಯ ಸಿನಿಮಾದ ಇತಿಹಾಸದಲ್ಲಿ ಹಿಂದೆಂದೂ ನೋಡಿರದ ಅಥವಾ ಅನುಭವಿಸದ ಐತಿಹಾಸಿಕ ಸಿನಿಮಾಗಳಗಲಿವೆ. ಇದು ಡೇವಿಡ್ ಮತ್ತು ಗೋಲಿಯಾತ್ ನಡುವಿನ ಯುದ್ಧ‘ ಎಂದು ಬರೆದಿದ್ದಾರೆ.

’ಇದು ಉತ್ತರ ಮತ್ತು ದಕ್ಷಿಣ ಅಥವಾ ಬಾಲಿವುಡ್ ಮತ್ತು ಸ್ಯಾಂಡಲ್‌ವುಡ್ ನಡುವಿನ ಸಂಘರ್ಷವಲ್ಲ ಎಂದು ನಾನು ಬಲವಾಗಿ ನಂಬುತ್ತೇನೆ. ಇದು ವಾಸ್ತವವಾಗಿ ಎರಡು ಸಂಸ್ಕೃತಿಗಳ ನಡುವಿನ ಕ್ರೂರ ಘರ್ಷಣೆಯಾಗಿದೆ. ಇದು ಪ್ರದೇಶಗಳದ್ದಲ್ಲ, ಸಿನಿಮಾಗಳದ್ದು ಅಲ್ಲ. ಈ ‌ಎರಡು ಸಿನಿಮಾಗಳ ನಡುವಿನ ವ್ಯತ್ಯಾಸವೆಂದರೆ, ಧುರಂಧರ್‌ 2 ಪ್ರೇಕ್ಷಕರ ಬುದ್ಧಿಮತ್ತೆಯನ್ನು ಗೌರವಿಸುತ್ತದೆ. ಟಾಕ್ಸಿಕ್‌ ಪ್ರೇಕ್ಷಕರ ಮೂರ್ಖತನವನ್ನು ಊಹಿಸುತ್ತದೆ’. ಎರಡು ಸಿನಿಮಾಗಳನ್ನು ನೋಡಲು ಉಸಿರು ಬಿಗಿಹಿಡಿದುಕೊಂಡು ಕಾಯುತ್ತಿದ್ದೇನೆ’ ಎಂದು ನಿರ್ಮಾಪಕ  ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ. 

ಧುರಂಧರ್‌ ಸಿನಿಮಾದಲ್ಲಿ ಅಕ್ಷಯ್ ಖನ್ನಾ, ಸಂಜಯ್ ದತ್, ಸಾರಾ ಅರ್ಜುನ್, ಆರ್ ಮಾಧವನ್ ಮತ್ತು ಅರ್ಜುನ್ ರಾಂಪಾಲ್ ಸೇರಿದಂತೆ ಇತರರು ನಟಿಸಿದ್ದಾರೆ. ಟಾಕ್ಸಿಕ್‌ ಸಿನಿಮಾದಲ್ಲಿ ಸ್ಟಾರ್ ನಟಿಯರ ದೊಡ್ಡ ಸಮೂಹವೇ ಇದೆ. ನಯನತಾರಾ, ರುಕ್ಷ್ಮಿಣಿ ವಸಂತ್, ಹುಮಾ ಖುರೇಷಿ, ಕಿಯಾರಾ ಅಡ್ವಾಣಿ ಹಾಗೂ ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.