ADVERTISEMENT

Video | ಅಮೀರ್ ಖಾನ್ ಭೇಟಿಯಾದ ಉಪೇಂದ್ರ: UI ಚಿತ್ರಕ್ಕೆ ಶುಭ ಕೋರಿದ ಬಾಲಿವುಡ್ ನಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಡಿಸೆಂಬರ್ 2024, 2:28 IST
Last Updated 12 ಡಿಸೆಂಬರ್ 2024, 2:28 IST
<div class="paragraphs"><p>ಅಮೀರ್ ಖಾನ್ ಭೇಟಿಯಾದ ಉಪೇಂದ್ರ</p></div>

ಅಮೀರ್ ಖಾನ್ ಭೇಟಿಯಾದ ಉಪೇಂದ್ರ

   

ಬೆಂಗಳೂರು: ಚಂದನವನದ ನಟ ರಿಯಲ್‌ ಸ್ಟಾರ್‌ ಉಪೇಂದ್ರ ನಟನೆಯ ಯುಐ (UI) ಚಿತ್ರದ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಬಾಲಿವುಡ್‌ ನಟ ಅಮೀರ್ ಖಾನ್‌, ಚಿತ್ರ ಖಂಡಿತವಾಗಿಯೂ ಯಶಸ್ಸು ಕಾಣಲಿದೆ ಎಂದು ಶುಭಹಾರೈಸಿದ್ದಾರೆ.

ಅಮೀರ್ ಖಾನ್‌ ಅವರನ್ನು ಭೇಟಿ ಮಾಡಿರುವ ಬಗ್ಗೆ ಉಪೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ಅಮೀರ್‌ ಖಾನ್‌ ಅವರು, ‘ಉಪೇಂದ್ರ ನನ್ನ ಉತ್ತಮ ಗೆಳೆಯ. ಅವರ ಯುಐ ಚಿತ್ರ ಇದೇ 20 ರಂದು ತೆರೆ ಕಾಣುತ್ತಿದೆ. ಚಿತ್ರದ ಟ್ರೇಲರ್‌ ಅನ್ನು ನೋಡಿರುವೆ, ಅದ್ಭುತವಾಗಿದೆ. ಸಿನಿಮಾ ಖಂಡಿತವಾಗಿಯೂ ಹಿಟ್‌ ಆಗಲಿದೆ. ಹಿಂದಿ ಪ್ರೇಕ್ಷಕರೂ ಸಿನಿಮಾವನ್ನು ಇಷ್ಟಪಡಲಿದ್ದಾರೆ, ಆಲ್‌ ದಿ ಬೆಸ್ಟ್‌’ ಎಂದಿದ್ದಾರೆ.

ADVERTISEMENT

ಈ ಕುರಿತು ಉಪೇಂದ್ರ ಅವರು ಅಮೀರ್‌ ಅವರಿಗೆ ಧನ್ಯವಾದ ಹೇಳಿದ್ದು, ‘ಯುಐ ಚಿತ್ರಕ್ಕೆ ನಿಮ್ಮ ಆಶೀರ್ವಾದ ಪಡೆಯುವ ಕನಸು ನನಸಾಗಿದೆ’ ಎಂದು ಬರೆದುಕೊಂಡಿದ್ದಾರೆ.

ಜಿ.ಮನೋಹರನ್ ಮತ್ತು ಕೆ.ಪಿ.ಶ್ರೀಕಾಂತ್ ನಿರ್ಮಾಣದಲ್ಲಿ, ಉಪೇಂದ್ರ ಅವರೇ ನಿರ್ದೇಶಿಸಿ, ನಟಿಸಿರುವ ‘ಯುಐ’ ಸಿನಿಮಾ ಡಿ.20ರಂದು ಬಿಡುಗಡೆಯಾಗುತ್ತಿದೆ. ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ವಿಶ್ವದಾದ್ಯಂತ ತೆರೆ ತೆರೆಕಾಣುತ್ತಿದೆ. 2024ರ ಬಹು ನಿರೀಕ್ಷಿತ ಸಿನಿಮಾಗಳ ಪೈಕಿ ಯುಐ ಕೂಡ ಆಗಿದ್ದು, ವೀನಸ್ ಎಂಟರ್‌ಟೈನ್‌ಮೆಂಟ್ ಮತ್ತು ಲಹರಿ ಫಿಲ್ಮ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ.

ನಟ ಉಪೇಂದ್ರ ಅವರು ಹಲವು ವರ್ಷಗಳ ಬಳಿಕ ನಿರ್ದೇಶಕನ ಕ್ಯಾಪ್‌ ತೊಟ್ಟಿರುವ ಚಿತ್ರ ಇದಾಗಿದೆ. ನಟ ಸಾಧು ಕೋಕಿಲಾ ಅವರೂ ಪ್ರಮುಖ ಪಾತ್ರದಲ್ಲಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.