ADVERTISEMENT

ಹೃದಯಾಘಾತ: ಖ್ಯಾತ ನಟ, ಬಾಡಿ ಬಿಲ್ಡರ್ ವರೀಂದರ್ ಘುಮಾನ್ ನಿಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಅಕ್ಟೋಬರ್ 2025, 7:55 IST
Last Updated 10 ಅಕ್ಟೋಬರ್ 2025, 7:55 IST
<div class="paragraphs"><p>ನಟ,&nbsp;ಬಾಡಿ ಬಿಲ್ಡರ್ ವರೀಂದರ್ ಘುಮಾನ್&nbsp;</p></div>

ನಟ, ಬಾಡಿ ಬಿಲ್ಡರ್ ವರೀಂದರ್ ಘುಮಾನ್ 

   

ಚಿತ್ರ: ಇನ್‌ಸ್ಟಾಗ್ರಾಮ್

ಬಾಲಿವುಡ್ ನಟ, ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟು ವರೀಂದರ್ ಸಿಂಗ್ ಘುಮಾನ್ (42) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಲ್ಮಾನ್ ಖಾನ್ ನಟನೆಯ ಟೈಗರ್ 3 ಸೇರಿದಂತೆ ಹಲವಾರು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದ ವರೀಂದರ್ ಘುಮಾನ್ ಗುರುವಾರ ನಿಧನರಾಗಿದ್ದಾರೆ.

ADVERTISEMENT

ನಟ, ಬಾಡಿ ಬಿಲ್ಡರ್ ವರೀಂದರ್ ಘುಮಾನ್ 

ಬೈಸೆಪ್ಸ್ ಗಾಯದಿಂದಾಗಿ ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವರೀಂದರ್ ಅವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಈ ಸುದ್ದಿ ಕೇಳಿದೆ ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದಾರೆ.

42ನೇ ವಯಸ್ಸಿನಲ್ಲಿ ನಿಧನರಾದ ವರೀಂದರ್ ಘುಮಾನ್ ಮೂಲತಃ ಪಂಜಾಬ್ ಮೂಲದವರು. ನಟ ಸಲ್ಮಾನ್ ಖಾನ್ ಅಭಿನಯದ ಟೈಗರ್ 3 ಸೇರಿದಂತೆ ಹಲವು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ, ಜನಪ್ರಿಯರಾಗಿದ್ದರು.

ಇನ್ನು, ವರೀಂದರ್ ಘುಮಾನ್ ನಿಧನಕ್ಕೆ ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಸುಖಜಿಂದರ್ ಸಿಂಗ್ ರಾಂಧವ ಸಂತಾಪ ಸೂಚಿಸಿದ್ದಾರೆ.

‘ಪಂಜಾಬ್‌ನ ಪ್ರಸಿದ್ಧ ದೇಹದಾರ್ಢ್ಯ ಪಟು ಮತ್ತು ನಟ ವರೀಂದರ್ ಸಿಂಗ್ ಘುಮಾನ್ ಅವರ ಹಠಾತ್ ನಿಧನದ ಸುದ್ದಿ ಕೇಳಿ ನಾನು ದುಃಖಿತನಾಗಿದ್ದೇನೆ. ಕಠಿಣ ಪರಿಶ್ರಮ, ಶಿಸ್ತು ಮತ್ತು ಸಾಮರ್ಥ್ಯದಿಂದ ಅವರು ಪಂಜಾಬ್‌ನ ಹೆಸರನ್ನು ಪ್ರಪಂಚದಾದ್ಯಂತ ಬೆಳಗಿಸಿದ್ದರು. ಅವರ ಕುಟುಂಬಕ್ಕೆ ಈ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ನೀಡಲಿ’ ಎಂದು ಎಕ್ಸ್‌ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.