ADVERTISEMENT

ತಾಯಂದಿರ ದಿನದಂದು ಪೋಸ್ಟ್‌: ಮೊದಲ ಮಗುವಿನ ನಿರೀಕ್ಷೆಯಲ್ಲಿ ವಾಸುಕಿ ವೈಭವ್‌ ದಂಪತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಮೇ 2025, 13:18 IST
Last Updated 11 ಮೇ 2025, 13:18 IST
<div class="paragraphs"><p>ಇನ್‌ಸ್ಟಾಗ್ರಾಮ್‌ ಚಿತ್ರ&nbsp;</p></div>
   

ಇನ್‌ಸ್ಟಾಗ್ರಾಮ್‌ ಚಿತ್ರ 

ಬೆಂಗಳೂರು: ಇಂದು (ಭಾನುವಾರ) ತಾಯಂದಿರ ದಿನ. ಈ ದಿನದಂದು ಸಂಗೀತ ನಿರ್ದೇಶಕ, ಗಾಯಕ ವಾಸುಕಿ ವೈಭವ್‌ ಮತ್ತು ಬೃಂದಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಈ ಸಂಬಂಧ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ವಾಸುಕಿ, ಎಲ್ಲಾ ತಾಯಂದಿರಿಗೆ ತಾಯಂದಿರ ದಿನದ ಶುಭಾಶಯಗಳು. ನೀವಿಲ್ಲದೇ ಈ ಜಗತ್ತು ಇಲ್ಲ. ಈ ತಾಯಂದಿರ ದಿನ ನಮಗೆ ಮತ್ತಷ್ಟು ವಿಶೇಷವಾಗಿದೆ. ಏಕೆಂದರೆ ನಾವು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ. ಪ್ರತಿಯೊಬ್ಬರು ಆಶೀರ್ವಾದಿಸಿ ಎಂದು ಬರೆದುಕೊಂಡಿದ್ದಾರೆ.

ADVERTISEMENT

‘ಸ.ಹಿ.ಪ್ರಾ.ಶಾಲೆ ಕಾಸರಗೋಡು’ ಚಿತ್ರದ ಪ್ರಸಿದ್ಧ ಗೀತೆ 'ಅರೆ ಅರೇ ರೇ ಅವಳ ನಗುವ', 'ಮುಂದಿನ ನಿಲ್ದಾಣ' ಚಿತ್ರದ 'ಇನ್ನೂ ಬೇಕಾಗಿದೆ', 'ಹೃದಯದ ಪಾಡು' ಸೇರಿದಂತೆ ಅನೇಕ ಹಾಡುಗಳ ಮೂಲಕ ಹೆಚ್ಚು ಪ್ರಸಿದ್ಧರಾದರು.

ಬಿಗ್‌ ಬಾಸ್‌ ಸೀಸನ್‌ 7ರಲ್ಲಿ ಸ್ಪರ್ಧಿಯಾಗಿದ್ದ ವಾಸುಕಿ ಫೈನಲ್‌ವರೆಗೂ ಬಂದಿದ್ದರು. ಈ ರಿಯಾಲಿಟಿ ಶೋನಿಂದ ವಾಸುಕಿ ಹೆಚ್ಚು ಜನಪ್ರಿಯರಾದರು. ಹಂಪಿ ಉತ್ಸವ, ಮೈಸೂರು ದಸರ ಸೇರಿದಂತೆ ಅನೇಕ ವೇದಿಕೆಗಳಲ್ಲಿ ತಮ್ಮ ಹಾಡಿನ ಮೂಲಕ ಜನರಿಂದ ಮೆಚ್ಚುಗೆ ಪಡೆದಿದ್ದಾರೆ.

2023ರಲ್ಲಿ ಈ ಜೋಡಿ ಹಸೆಮಣೆ ಏರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.