ADVERTISEMENT

ತೆಲುಗು ಹಿರಿಯ ನಟ ಬಾಲಯ್ಯ ನಿಧನ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 10:16 IST
Last Updated 9 ಏಪ್ರಿಲ್ 2022, 10:16 IST
ಮನ್ನವ ಬಾಲಯ್ಯ (ಟ್ವಿಟರ್ ಚಿತ್ರ)
ಮನ್ನವ ಬಾಲಯ್ಯ (ಟ್ವಿಟರ್ ಚಿತ್ರ)   

ಹೈದರಾಬಾದ್: ತೆಲುಗು ಖ್ಯಾತ ಹಿರಿಯ ನಟ ಮನ್ನವಬಾಲಯ್ಯ (94) ಅವರು ಶನಿವಾರ ನಿಧನರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೈದರಾಬಾದ್‌ನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.

1958ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅವರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 1970ರಲ್ಲಿ ಸ್ಥಾಪಿಸಲಾದ ಅಮೃತಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಹಲವರು ಚಿತ್ರಗಳನ್ನು ನಿರ್ಮಿಸಿದ್ದಾರೆ.

ADVERTISEMENT

‘ಪಾರ್ವತಿ ಕಲ್ಯಾಣಂ’, ‘ಇರುಗು ಪೊರುಗು’, ‘ಬೋಬಿಲಿ ಯುದ್ಧಂ’, ‘ಮಂಚಿ ಮನಿಷಿ’, ‘ಮಲ್ಲೇಶ್ವರಿ’ ಚಿತ್ರಗಳಲ್ಲಿ ನಟಿಸಿದ್ದಾರೆ.

‘ಚೆಲ್ಲೆಲಿ ಕಾಪುರಂ’, ‘ನೇರಮು ಶಿಕ್ಷಾ’ ಮತ್ತು ‘ಊರಿಕಿ ಇಚ್ಚಿನ ಮಾಟ’ ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ.

ಬಾಲಯ್ಯ ನಿಧನಕ್ಕೆ ನಟ ನಂದಮೂರಿ ಬಾಲಕೃಷ್ಣ ಸೇರಿದಂತೆ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಂಬನಿ ಮಿಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.