ADVERTISEMENT

ಈ ಕಾಲಘಟ್ಟದ ಅಪರೂಪದ ಜೋಡಿ ವಿಜಯ್–ರಶ್ಮಿಕಾ; ಇವರ ಪ್ರೀತಿ ನಿಜಕ್ಕೂ ಮಾದರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಫೆಬ್ರುವರಿ 2026, 11:41 IST
Last Updated 25 ಫೆಬ್ರುವರಿ 2026, 11:41 IST
<div class="paragraphs"><p>ವಿಜಯ್ ದೇವರಕೊಂಡ, ನಟಿ ರಶ್ಮಿಕಾ ಮಂದಣ್ಣ</p></div>

ವಿಜಯ್ ದೇವರಕೊಂಡ, ನಟಿ ರಶ್ಮಿಕಾ ಮಂದಣ್ಣ

   

ಪ್ರೀತಿಯನ್ನು ರಹಸ್ಯವಾಗಿಡಬೇಕೆ ಅಥವಾ ಅದನ್ನು ಸಾರ್ವಜನಿಕವಾಗಿ ಹೇಳಿಕೊಳ್ಳಬೇಕೆ ಎಂಬುದು ಪ್ರತಿಯೊಬ್ಬರ ವೈಯಕ್ತಿಕ ನಿರ್ಧಾರ. ಅದು, ತನ್ನ ಜೊತೆಗಾರರ ಹಿತಾಸಕ್ತಿಯನ್ನು ಕಾಪಾಡುವಂತಿರಬೇಕು. ದಕ್ಷಿಣ ಭಾರತದ ಪ್ರಮುಖ ಸಿನಿಮಾ ತಾರೆಯರಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಫೆಬ್ರುವರಿ 26ರಂದು ಹಸೆಮಣೆ ಏರಲು ಸಜ್ಜಾಗುತ್ತಿದ್ದಾರೆ. ಈ ಇಬ್ಬರ ಪ್ರೀತಿಯು ಈ ಕಾಲದ ಅನೇಕ ಪ್ರೇಮಿಗಳಿಗೆ ಮಾದರಿ ಎಂದರೆ ತಪ್ಪಾಗಲಾರದು.

ಚಲನಚಿತ್ರ ತಾರೆಯರು ಒಂದು ಅಥವಾ ಎರಡು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದಾಗ ಅಥವಾ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಾಗ ಅವರ ಬಗ್ಗೆ ಗಾಸಿಪ್ ಹರಿದಾಡುವುದು ಸಾಮಾನ್ಯ. ಅದು, ಅವರ ಮನಸ್ಸಿಗೆ ಬರುವ ಮೊದಲೇ ಪ್ರೇಮಕಥೆಗಳ ವದಂತಿಗಳು ಸಾರ್ವಜನಿಕವಾಗಿ ಹರಡಲು ಆರಂಭವಾಗುತ್ತದೆ. ವಿಜಯ್-ರಶ್ಮಿಕಾ ಸಂಬಂಧದಲ್ಲೂ ಅದೇ ಆಗಿತ್ತು.

ADVERTISEMENT

ಅಭಿಮಾನಿಗಳು ಈ ಜೋಡಿಗೆ 'ವಿರೋಶ್' ಎಂಬ ಹೆಸರು ಸಹ ಕೊಟ್ಟಿದ್ದಾರೆ. ವಿಜಯ್ ದೇವರಕೊಂಡ ಹಂಚಿಕೊಂಡ ಪೋಸ್ಟ್‌ನಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ. ‘ನಮ್ಮ ಪ್ರಿತಿ ಪಾತ್ರರೇ, ನಾವು ಏನನ್ನಾದರೂ ಯೋಜಿಸುವ ಮೊದಲು ಅಥವಾ ನಮ್ಮನ್ನು ನಾವು ಆರಿಸಿಕೊಳ್ಳುವ ಮೊದಲು, ನೀವು ನಮ್ಮನ್ನು ಜೊತೆಯಾಗಿ ನೋಡಲು ಭಯಿಸಿದ್ದೀರಿ. ತುಂಬಾ ಪ್ರೀತಿಯಿಂದ, ನೀವು ನಮಗೆ ವಿರೋಶ್ ಎಂದು ಹೆಸರನ್ನು ನೀಡಿದ್ದೀರಿ. ಆದ್ದರಿಂದ ಇಂದು, ಪೂರ್ಣ ಹೃದಯದಿಂದ, ನಿಮ್ಮ ಗೌರವಾರ್ಥವಾಗಿ ನಮ್ಮ ವಿವಾಹ ಸಂಭ್ರಮಕ್ಕೆ ನಾವು ಈ ಹೆಸರನ್ನು ನೀಡುತ್ತೇವೆ. 'ದಿ ವೆಡ್ಡಿಂಗ್ ಆಫ್ ವಿರೋಶ್’ ಎಂದು ವಿಜಯ್ ಬರೆದುಕೊಂಡಿದ್ದಾರೆ.

ಇನ್ನೂ ಈ ತಾರಾ ಜೋಡಿ ಪ್ರೀತಿ ಬಲವಾಗುವವರೆಗೆ ತಮ್ಮ ಆಂತರಿಕ ಪ್ರೀತಿಯನ್ನು ಖಾಸಗಿಯಾಗಿಯೇ ಇಟ್ಟುಕೊಂಡಿದ್ದರು. ಹಾಗಾಗಿ, ಸಾಮಾನ್ಯ ಜನರು ಈ ತಾರಾ ಜೋಡಿಯ ಪ್ರೀತಿಯನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂಬ ಗಾಸಿಪ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಲು ಪ್ರಾರಂಭಿಸಿದಾಗಲೂ, ಆ ಜೋಡಿ ಯಾವುದೇ ಪ್ರತಿಕ್ರಿಯೆ ನೀಡದೆ, ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಪ್ರೀತಿಯ ವಿವರಗಳನ್ನು ಹಂಚಿಕೊಳ್ಳದೆ, ಮಾಧ್ಯಮದ ಗಮನದಿಂದ ದೂರವಿರಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು.

ಸಾರ್ವಜನಿಕವಾಗಿ ಪ್ರೀತಿಯ ಕರಿತು ಪ್ರತಿಕ್ರಿಯೆ ನೀಡುವುದರಿಂದ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆ ಇರುತ್ತದೆ. ಮಾತ್ರವಲ್ಲ, ಅಭದ್ರತೆ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ, ಈ ಜೋಡಿ ತಮ್ಮ ಪ್ರೀತಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸದೆ, ಅದನ್ನು ಖಾಸಗಿಯಾಗಿಡುವ ಪ್ರಬುದ್ಧತೆಯನ್ನು ತೋರಿಸಿದರು. ಇದು ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ. ಕೆಲವೊಮ್ಮೆ ಕೆಲವು ವಿಷಯಗಳನ್ನು ವೈಯಕ್ತಿಕ ಮತ್ತು ರಹಸ್ಯವಾಗಿಡುವುದು ಬುದ್ದಿವಂತಿಕೆಯ ಸಂಕೇತ ಎಂಬುದನ್ನು ರಶ್ಮಿಕಾ–ವಿಜಯ್ ಜೋಡಿ ತೋರಿಸಿದೆ.

ಸ್ನೇಹವು ಪ್ರೀತಿಗೆ ಸೇತುವೆಯಾಯಿತು

ಆರಂಭದಲ್ಲಿ ರಶ್ಮಿಕಾ ಹಾಗೂ ವಿಜಯ್ ಸಹೋದ್ಯೋಗಿಗಳಾಗಿದ್ದರು. ಕ್ರಮೇಣ ಅವರು ಸ್ನೇಹಿತರಾದರು. ‘ಡಿಯರ್ ಕಾಮ್ರೇಡ್’ ಮತ್ತು ‘ಗೀತಾ ಗೋವಿಂದಂ’ ಸಿನಿಮಾಗಳ ಚಿತ್ರೀಕರಣದ ಸಮಯದಲ್ಲಿ ಅವರು ಒಟ್ಟಿಗೆ ಸಮಯ ಕಳೆದರು, ಮಾತನಾಡುತ್ತಾ, ತಮಾಷೆ ಮಾಡುತ್ತಾ, ಒಬ್ಬರನ್ನೊಬ್ಬರು ತಿಳಿದುಕೊಳ್ಳಲು ಪ್ರಯತ್ನಿಸಿದರು. ಅವರು ಪರಸ್ಪರರನ್ನು ಅರ್ಥಮಾಡಿಕೊಂಡಾಗ ಮಾತ್ರ, ಅವರ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅರ್ಥಮಾಡಿಕೊಳ್ಳಬಹುದು.

ದಿನಗಳು ಉರುಳಿದಂತೆ ಪ್ರೀತಿಯ ಉತ್ಸಾಹ ಕಡಿಮೆಯಾದರೂ, ಒಳಗಿನ ಆಳವಾದ ಸ್ನೇಹವು ಒಟ್ಟಿಗೆ ಬದುಕಲು ಸಹಾಯ ಮಾಡುತ್ತದೆ. ಆದ್ದರಿಂದ, ದೀರ್ಘಾವಧಿಯಲ್ಲಿ ಪ್ರೀತಿಯನ್ನು ಕಂಡುಕೊಳ್ಳಲು ಬಯಸುವವರು ಮೊದಲು ಉತ್ತಮ ಸ್ನೇಹಿತರಾಗಲು ಕಲಿಯಬೇಕು ಎಂಬ ಸಂದೇಶವನ್ನು ಅವರು ಪ್ರೀತಿಯ ಮೂಲಕ ನೀಡಿದ್ದಾರೆ.

ಸೋಲು–ಗೆಲುವಿನಲ್ಲಿ ಒಟ್ಟಾಗಿರಿ

ಜೀವನದಲ್ಲಿ ಸೋಲು ಮತ್ತು ಗೆಲುವಿನ ಸಂದರ್ಭದಲ್ಲಿ ಒಟ್ಟಾಗಿ ನಿಂತವರು ಮಾತ್ರ ಕೊನೆಯವರೆಗೂ ಒಟ್ಟಿಗೆ ಬದುಕಲು ಸಾಧ್ಯ. ಈ ವಿಷಯದಲ್ಲೂ ವಿರೋಶ್ ದಂಪತಿ ಉತ್ತಮ ಉದಾಹರಣೆಯಾಗಿದ್ದಾರೆ. ರಶ್ಮಿಕಾ ಅವರು ಡೀಪ್ ಫೇಕ್ ವಿವಾದದ ಸಮಯದಲ್ಲಿ ವಿಜಯ್ ಅವರ ಬೆಂಬಲಕ್ಕೆ ನಿಂತರು. ವಿಜಯ್ ತಮ್ಮ ವೃತ್ತಿಜೀವನದಲ್ಲಿ ಹಿನ್ನಡೆ ಅನುಭವಿಸಿದಾಗ ರಶ್ಮಿಕಾ ಬೆಂಬಲಿಸಿದರು.

ಸಂಕಷ್ಟದ ಸಂದರ್ಭದಲ್ಲಿ ಪರಸ್ಪರರನ್ನು ಬೆಂಬಲಿಸುವುದರಿಂದ ಸಂಬಂಧ ಬಲಿಷ್ಠವಾಗುತ್ತದೆ. ಅಂತಹ ಕಾಳಜಿ ಇದ್ದರೆ, ಯಾವುದೇ ಬಾಹ್ಯ ಶಕ್ತಿಯು ಸಂಬಂಧವನ್ನು ಮುರಿಯಲು ಸಾಧ್ಯವಿಲ್ಲ ಎಂದು ವಿರೋಶ್ ಜೋಡಿ ತಮ್ಮ ಪ್ರೀತಿಯ ಮೂಲಕ ತಿಳಿಸಿದ್ದಾರೆ. ಇನ್ನೂ ಈ ಇಬ್ಬರು ಕಳೆದ ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರಾದರೂ, ಅದನ್ನು ಸಾರ್ವಜನಿಕವಾಗಿ ತೋರಿಸಿಕೊಳ್ಳದೆ ಗೌಪ್ಯವಾಗಿರಿಸಿಕೊಂಡಿರುವುದು ಈ ಇಬ್ಬರ ನಡುವೆ ಪ್ರೀತಿ ಗಟ್ಟಿಯಾಗಲು ಕಾರಣವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.