
ವಿಜಯ್ ದೇವರಕೊಂಡ
ಯೂಟ್ಯೂಬ್ ಚಿತ್ರ
ಟಾಲಿವುಡ್ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಹೊಸ ಸಿನಿಮಾ ಶೀರ್ಷಿಕೆ ನಿನ್ನೆ (ಜ.26) ಬಿಡುಗಡೆಯಾಗಿದೆ. ‘ಗೀತಾ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಸಿನಿಮಾಗಳ ನಂತರ ಈ ಜೋಡಿ ಮತ್ತೆ ಒಟ್ಟಿಗೆ ನಟಿಸೋದಕ್ಕೆ ಸಜ್ಜಾಗಿದೆ.
‘ರಣಬಾಲಿ’ ಸಿನಿಮಾವು 2026ರ ಸೆಪ್ಟೆಂಬರ್ 11ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಚಿತ್ರತಂಡ ತಿಳಿಸಿದೆ.
ಮೈತ್ರಿ ಮೂವಿ ಮೇಕರ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಸಿನಿಮಾ ಶೀರ್ಷಿಕೆಯನ್ನು ವಿಡಿಯೊ ಮೂಲಕ ಬಿಡುಗಡೆ ಮಾಡಲಾಗಿದೆ. ಈ ಮೂಲಕ ತಮ್ಮ ಹೊಸ ಸಿನಿಮಾದ ಶೀರ್ಷಿಕೆಯನ್ನು ಘೋಷಿಸಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಒಟ್ಟಾಗಿ 'ರಣಬಾಲಿ'ಯಲ್ಲಿ ನಟಿಸಲು ಸಜ್ಜಾಗಿದ್ದಾರೆ. ಈ ಚಿತ್ರಕ್ಕೆ ಮೊದಲು ‘VD14’ ಎಂದು ಕರೆಯಲಾಗುತ್ತಿತ್ತು. ಗಣರಾಜ್ಯೋತ್ಸವದ ದಿನದಂದೇ ಚಿತ್ರತಂಡ ರಣಬಾಲಿ ಸಿನಿಮಾದ ವಿಡಿಯೊವೊಂದನ್ನು ಬಿಡುಗಡೆ ಮಾಡಿ, ವಿಜಯ್ ಮತ್ತು ರಶ್ಮಿಕಾ ಅವರ ಮೊದಲ ಲುಕ್ ಅನಾವರಣಗೊಳಿಸಿದ್ದಾರೆ.
ರಾಹುಲ್ ಸಾಂಕೃತ್ಯಾಯನ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. ನವೀನ್ ಯೆರ್ನೇನಿ ಮತ್ತು ವೈ ರವಿಶಂಕರ್ ನಿರ್ಮಿಸಿದ ವಿಡಿಯೊದಲ್ಲಿ ಬ್ರಿಟಿಷರು ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಿದ ಹಿಂಸೆಯ ಮೇಲೆ ಬೆಳಕು ಚೆಲ್ಲುತ್ತದೆ. ನಿರ್ದೇಶಕರ ನಿರೂಪಣೆಯಲ್ಲೇ ವಿಡಿಯೊ ಮೂಡಿಬಂದಿದೆ.
ಚಿತ್ರದಲ್ಲಿ ನಟ ವಿಜಯ್ ’ರಣಬಾಲಿ’ ಪಾತ್ರ ನಿರ್ವಹಿಸಿದರೆ, ರಶ್ಮಿಕಾ ಮಂದಣ್ಣ, ’ಜಯಮ್ಮ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿ ಮಮ್ಮಿ ಚಿತ್ರಕ್ಕೆ ಹೆಸರುವಾಸಿಯಾದ ಅರ್ನಾಲ್ಡ್ ವೋಸ್ಲೂ, ಪ್ರತಿಸ್ಪರ್ಧಿ ಸರ್ ಥಿಯೋಡರ್ ಹೆಕ್ಟರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಚಿತ್ರವು 19ನೇ ಶತಮಾನದಲ್ಲಿ 1854 ಮತ್ತು 1878ರ ನಡುವೆ ನಡೆದ ನೈಜ ಐತಿಹಾಸಿಕ ಘಟನೆಗಳನ್ನು ಆಧರಿಸಿದೆ. ಚಿತ್ರಕ್ಕೆ ಅಜಯ್ ಮತ್ತು ಅತುಲ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.