ADVERTISEMENT

ಐಎಂಡಿಬಿಯಲ್ಲಿ ಲೈಗರ್ ಸಿನಿಮಾಕ್ಕೆ ಲಾಲ್ ಸಿಂಗ್ ಚಡ್ಡಾಗಿಂತಲೂ ಕಳಪೆ ರೇಟಿಂಗ್!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಆಗಸ್ಟ್ 2022, 6:40 IST
Last Updated 27 ಆಗಸ್ಟ್ 2022, 6:40 IST
ವಿಜಯ್‌ ದೇವರಕೊಂಡ ಹಾಗೂ ಅನನ್ಯಾ ಪಾಂಡೆ
ವಿಜಯ್‌ ದೇವರಕೊಂಡ ಹಾಗೂ ಅನನ್ಯಾ ಪಾಂಡೆ   

ಮುಂಬೈ: ನಟ ವಿಜಯ್‌ ದೇವರಕೊಂಡ ಅಭಿನಯದ ಬಹುನಿರೀಕ್ಷಿತ 'ಲೈಗರ್' ಸಿನಿಮಾ ಈಗಾಗಲೇ ದೇಶದಾದ್ಯಂತ ತೆರೆಕಂಡಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ನಡುವೆ ಲೈಗರ್ ಸಿನಿಮಾಕ್ಕೆ ದಿ ಇಂಟರ್‌ನೆಟ್‌ ಮೂವಿ ಡೇಟಾಬೇಸ್‌ (ಐಎಂಡಿಬಿ) ವೆಬ್‌ಸೈಟ್‌ನಲ್ಲಿ ಅತ್ಯಂತ ಕಳಪೆ ರೇಟಿಂಗ್ ದೊರೆತಿರುವುದು ಅಚ್ಚರಿ ಮೂಡಿಸಿದೆ.

ಐಎಂಡಿಬಿ ವೆಬ್‌ಸೈಟ್‌ನಲ್ಲಿ ಲೈಗರ್ ಸಿನಿಮಾಕ್ಕೆ 15,600ಕ್ಕೂ ಹೆಚ್ಚು ಮಂದಿ ರೇಟಿಂಗ್ ಸಲ್ಲಿಸಿದ್ದು, ಈ ಪೈಕಿ ಸಿನಿಮಾಕ್ಕೆ 1.7/10 ರೇಟಿಂಗ್ ದೊರೆತಿದೆ.

ADVERTISEMENT
ಲೈಗರ್ - ಐಎಂಡಿಬಿ ರೇಟಿಂಗ್

ಇತ್ತೀಚಿಗಿನ ಬಾಲಿವುಡ್ ಸಿನಿಮಾಗಳ ಪೈಕಿ ಅತಿ ಹೆಚ್ಚು ವಿರೋಧ ಎದುರಿಸಿದ್ದ 'ಮಿಸ್ಟರ್ ಪರ್ಫೆಕ್ಷನಿಸ್ಟ್' ಖ್ಯಾತಿಯ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಐಎಂಡಿಬಿಯಲ್ಲಿ 5/10 ರೇಟಿಂಗ್ ಪಡೆದಿತ್ತು. ಈಗ ಲೈಗರ್ ಅದಕ್ಕಿಂತಲೂ ಕಳಪೆ ಎನಿಸಿಕೊಂಡಿದೆ.

ಈ ಕುರಿತು ಐಎಂಡಿಬಿಯಲ್ಲಿ ರಿವ್ಯೂ ಬರೆದಿರುವ ಸಿನಿಮಾ ಪ್ರೇಮಿಗಳು, ಲೈಗರ್‌ನಲ್ಲಿ ಕಥೆಯೇ ಇಲ್ಲ. ನಿರೀಕ್ಷಿತ ಕ್ಲೈಮ್ಯಾಕ್ಸ್ ಆಗಿದ್ದು, ಚಿತ್ರ ನೀರಸವಾಗಿದೆ ಎಂದೆಲ್ಲಪ್ರತಿಕ್ರಿಯಿಸಿದ್ದಾರೆ.

ನಟ ವಿಜಯ್‌ ದೇವರಕೊಂಡ ಹಾಗೂ ನಟಿ ಅನನ್ಯಾ ಪಾಂಡೆಗೆ ನಟಿಸಲು ಬರುವುದಿಲ್ಲ ಎಂದು ದೂರಲಾಗಿದೆ.

ದಯವಿಟ್ಟು ನಿಮ್ಮ ಅಮೂಲ್ಯ ಸಮಯವನ್ನು ಉಳಿಸಿರಿ. ಚಿತ್ರ ನೋಡಲು ಥಿಯೇಟರ್‌ಗೆ ಹೋಗಬೇಡಿ. ಈ ಸಿನಿಮಾ ಒಟಿಟಿಯಲ್ಲಿ ನೋಡುವುದಕ್ಕೂ ಯೋಗ್ಯವಲ್ಲ ಎಂದು ಟೀಕಿಸಲಾಗಿದೆ.

ಈ ನಡುವೆ ಧರ್ಮ ಪ್ರೊಡಕ್ಷನ್ಸ್ ಪ್ರಕಾರ ಲೈಗರ್ ಸಿನಿಮಾ, ಮೊದಲ ದಿನ ವಿಶ್ವದಾದ್ಯಂತ ಒಟ್ಟು ₹33.12 ಕೋಟಿ ಗಳಿಕೆ ಪಡಿದಿದೆ ಎಂದು ಟ್ವೀಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.