ADVERTISEMENT

ವಿಜಯ ರಾಘವೇಂದ್ರ ನಟಿನೆಯ ‘ಶ್ರೀಮತಿ ಸಿಂಧೂರ’ ಚಿತ್ರೀಕರಣ ಪೂರ್ಣ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 23:30 IST
Last Updated 2 ಜನವರಿ 2026, 23:30 IST
   

ವಿಜಯ ರಾಘವೇಂದ್ರ ನಾಯಕರಾಗಿ ನಟಿಸಿರುವ ‘ಶ್ರೀಮತಿ ಸಿಂಧೂರ’ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಪೂರ್ಣಗೊಂಡಿತು. ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಅನಂತರಾಜ್‌ ಆರ್‌. ನಿರ್ದೇಶಿಸಿದ್ದಾರೆ.

ಕೌಟುಂಬಿಕ ಕಥಾಹಂದರದ ಜೊತೆಗೆ ದೈವಭಕ್ತಿ ಅಂಶಗಳನ್ನು ಸಿನಿಮಾ ಒಳಗೊಂಡಿದೆ ಎಂದಿದೆ ಚಿತ್ರತಂಡ. ಪ್ರಿಯಾ ಚಿತ್ರದ ನಾಯಕಿ. ರೇಷ್ಮಾ ವಿ.ಗೌಡ, ಪ್ರಸನ್ನ ಬಾಗೀನ, ಗಣೇಶ್‌ ರಾವ್ ಕೇಸರ್‌ಕರ್, ಮಾನಸಿ ಸುಧೀರ್, ಮನೋಜ್, ರಿತೇಶ್, ಸ್ನೇಹ ಜಾಧವ್, ಮೈಸೂರು ರಮಾನಂದ್, ರೋಹಿತ್, ಅನುಪಮ, ನವನೀತ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. 6.4 ಅಡಿ ಎತ್ತರವಿರುವ ದೇಹದಾರ್ಢ್ಯಪಟು ಬೀದರ್‌ನ ಮಾರುತಿ ಸಿನಿಮಾದಲ್ಲಿ ಹನುಮಂತನಾಗಿ ಕಾಣಿಸಿಕೊಳ್ಳಲಿದ್ದಾರೆ.

ಸಿನಿಮಾದಲ್ಲಿ ಕವಿರಾಜ್, ಕೆ.ಕಲ್ಯಾಣ್ ಮತ್ತು ನಿರ್ದೇಶಕರ ಸಾಹಿತ್ಯದ ಹಾಡಿಗೆ ರಾಜೇಶ್‌ ರಾಮನಾಥ್ ಸಂಗೀತ ಸಂಯೋಜಿಸಿದ್ದಾರೆ. ಪಿ.ಕೆ.ಎಚ್. ದಾಸ್ ಛಾಯಾಚಿತ್ರಗ್ರಹಣ, ಫೈವ್‌ಸ್ಟಾರ್ ಗಣೇಶ್ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ಮೂಡಿಗೆರೆ, ಸಕಲೇಶಪುರ, ಕುಂದಾಪುರದಲ್ಲಿ ಒಂದೇ ಹಂತದಲ್ಲಿ ಶೂಟಿಂಗ್ ನಡೆಸಲಾಗಿದೆ. ಸದ್ಯ ಚಿತ್ರವು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಡಿ.ಎನ್.ನಾಗೀರೆಡ್ಡಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.