ADVERTISEMENT

ವಿಜಯ್ ರಾಘವೇಂದ್ರ ನಟನೆಯ ‘ರಿಪ್ಪನ್ ಸ್ವಾಮಿ’ ಆಗಸ್ಟ್‌ 29ಕ್ಕೆ ತೆರೆಗೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 23:30 IST
Last Updated 27 ಜುಲೈ 2025, 23:30 IST
<div class="paragraphs"><p>ವಿಜಯ್‌ ರಾಘವೇಂದ್ರ</p></div>

ವಿಜಯ್‌ ರಾಘವೇಂದ್ರ

   

ವಿಜಯ್ ರಾಘವೇಂದ್ರ ನಾಯಕನಾಗಿ ನಟಿಸಿರುವ ‘ರಿಪ್ಪನ್ ಸ್ವಾಮಿ’ ಚಿತ್ರ ಆಗಸ್ಟ್‌ 29ಕ್ಕೆ ತೆರೆಗೆ ಬರಲಿದೆ. ಕಿಶೋರ್ ಮೂಡುಬಿದ್ರೆ ನಿರ್ದೇಶನದ ಚಿತ್ರವಿದು. 

‘ಗ್ರಾಮೀಣ ಭಾಗದ ಸಸ್ಪೆನ್ಸ್‌, ಥ್ರಿಲ್ಲರ್‌ ಕಥೆ. ಸ್ವಲ್ಪ ಆ್ಯಕ್ಷನ್‌ ಕೂಡ ಇದೆ. ರಿಪ್ಪನ್‌ ಸ್ವಾಮಿ ಪಾತ್ರದಲ್ಲಿ ವಿಜಯ್‌ ರಾಘವೇಂದ್ರ ಕಾಣಿಸಿಕೊಂಡಿದ್ದಾರೆ. ರಗಡ್‌ ಪಾತ್ರ ಅವರದ್ದು. ಅವರ ಎಸ್ಟೇಟ್‌, ಕುಟುಂಬ ಮುಂತಾದ ವಿಷಯಗಳ ಸುತ್ತ ಕಥೆ ಸಾಗುತ್ತದೆ. ತಣ್ಣನೆಯ, ಸುಂದರ ಮಲೆನಾಡನ್ನು ತಲ್ಲಣಗೊಳಿಸುವ ಅಪರಾಧವೇ ಚಿತ್ರಕಥೆ. ಸದ್ಯದಲ್ಲಿಯೇ ಚಿತ್ರದ ಹಾಡುಗಳು ಮತ್ತು ಟ್ರೇಲರ್‌ ಬಿಡುಗಡೆ ಮಾಡುತ್ತೇವೆ. ಸೆನ್ಸಾರ್‌ ಮುಗಿದಿದ್ದು ಯು/ಎ ಪ್ರಮಾಣ ಪತ್ರ ಲಭಿಸಿದೆ’ ಎನ್ನುತ್ತಾರೆ ನಿರ್ದೇಶಕರು.

ADVERTISEMENT

ಲಕ್ಷ್ಮಿ ಚಂದ್ರಶೇಖರ್‌

ವಿಜಯ್‌ ರಾಘವೇಂದ್ರ ಪತ್ನಿಯಾಗಿ ಅಶ್ವಿನಿ ಚಂದ್ರಶೇಖರ್‌ ಕಾಣಿಸಿಕೊಂಡಿದ್ದಾರೆ. ಪ್ರಕಾಶ್‌ ತೂಮಿನಾಡು, ವಜ್ರದೀರ್ ಜೈನ್, ಯಮುನಾ ಶ್ರೀನಿಧಿ, ಮೋಹನ್ ಶೇಣಿ, ಕೃಷ್ಣಮೂರ್ತಿ ಕವತ್ತಾರ್, ಪ್ರಭಾಕರ್ ಕುಂದಾರ್‌ ಮುಂತಾದವರು ಚಿತ್ರದಲ್ಲಿದ್ದಾರೆ.

ಪಂಚಾಂನನ ಫಿಲ್ಮ್ಸ್‌ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣಗೊಂಡಿದೆ. ಕೊಪ್ಪ, ಕಳಸ, ಬಾಳೆಹೊನ್ನೂರು ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಚಿತ್ರಕ್ಕೆ ಮಲಯಾಳದ ಖ್ಯಾತ ಸಂಗೀತ ನಿರ್ದೇಶಕ ಸ್ಯಾಮ್ಯುವೆಲ್ ಅಭಿ ಸಂಗೀತವನ್ನು ನೀಡಿದ್ದಾರೆ. ರಂಗನಾಥ್ ಸಿ.ಎಂ. ಛಾಯಾಚಿತ್ರಗ್ರಹಣ, ಶಶಾಂಕ್ ನಾರಾಯಣ ಸಂಕಲನವಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.