ADVERTISEMENT

ವಿಷ್ಣುವರ್ಧನ್ ಸಮಾಧಿ ತೆರವು: ಆ.17ರಂದು ಸಭೆ ಕರೆದ ನಟ ಅನಿರುದ್ಧ್

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 23:48 IST
Last Updated 11 ಆಗಸ್ಟ್ 2025, 23:48 IST
   

ಬೆಂಗಳೂರು: ಇಲ್ಲಿನ ಅಭಿಮಾನ್ ಸ್ಟುಡಿಯೊದ ಆವರಣದಲ್ಲಿ ನಟ ವಿಷ್ಣುವರ್ಧನ್‌ ಅವರ ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿದ್ದ ಸ್ಮಾರಕ ಮತ್ತು ಗೋಪುರವನ್ನು ತೆರವುಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಆ.17ಕ್ಕೆ ನಟ ಅನಿರುದ್ಧ್ ಜತಕರ ಸಭೆ ಕರೆದಿದ್ದಾರೆ. 

ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ವಿಡಿಯೊವೊಂದನ್ನು ಪೋಸ್ಟ್‌ ಮಾಡಿದ್ದಾರೆ. ‘ಇತ್ತೀಚೆಗೆ ಅಭಿಮಾನ್‌ ಸ್ಟುಡಿಯೊದಲ್ಲಿ ನಡೆದಿರುವ ದುರ್ಘಟನೆ ಅತ್ಯಂತ ಖಂಡನೀಯ. ಅದರ ಬಗ್ಗೆ ಚರ್ಚೆ ಮಾಡಲು, ಮುಂದೆ ಏನು ಮಾಡಬೇಕು ಎನ್ನುವುದರ ಬಗ್ಗೆ ಸಕಾರಾತ್ಮಕವಾಗಿ ಯೋಚಿಸುವುದಕ್ಕೆ ಆ.17ರಂದು ಬೆಳಿಗ್ಗೆ 11ಕ್ಕೆ ವಿಷ್ಣುವರ್ಧನ್‌ ಅವರ ಜಯನಗರ ನಿವಾಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ’ ಎಂದು ಅವರು ಅಭಿಮಾನಿಗಳನ್ನು ಆಹ್ವಾನಿಸಿದ್ದಾರೆ.

ಚರ್ಚೆಗೆ ಬಂದು ಗಲಾಟೆ ಮಾಡ ಬೇಕು ಎನ್ನುವ ಉದ್ದೇಶವಿದ್ದವರು ದಯ ವಿಟ್ಟು ಬರಬೇಡಿ. ಕೆಲವರು ವಿಷ್ಣು ಅವರ ಕುಟುಂಬ, ಅಭಿಮಾನಿಗಳ ಮಧ್ಯೆ ಬಿರುಕು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ದೂರಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.