ADVERTISEMENT

ಎಲ್ಲದಕ್ಕೂ ಗಂಡನನ್ನು ಏಕೆ ಕರೀತೀರಿ? ಯಶ್‌ ಬಗ್ಗೆ ಪತ್ನಿ ರಾಧಿಕಾ ಪಂಡಿತ್ ಗುಣಗಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಡಿಸೆಂಬರ್ 2025, 11:41 IST
Last Updated 10 ಡಿಸೆಂಬರ್ 2025, 11:41 IST
<div class="paragraphs"><p>ಯಶ್‌, ರಾಧಿಕಾ ಪಂಡಿತ್</p></div>

ಯಶ್‌, ರಾಧಿಕಾ ಪಂಡಿತ್

   

ಚಿತ್ರ: ಇನ್‌ಸ್ಟಾಗ್ರಾಂ

ರಾಕಿಂಗ್‌ ಸ್ಟಾರ್ ಯಶ್‌, ರಾಧಿಕಾ ಪಂಡಿತ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟು ನಿನ್ನೆಗೆ (ಡಿಸೆಂಬರ್ 9) 8 ವರ್ಷಗಳು ಕಳೆದಿವೆ. 9ನೇ ವರ್ಷದ ಮದುವೆ ವಾರ್ಷಿಕೋತ್ಸವಕ್ಕೆ ನಟಿ ರಾಧಿಕಾ ಪಂಡಿತ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ ಪತಿ ಯಶ್ ಅವರ 10 ಗುಣಗಳ ಬಗ್ಗೆ ಹೊಗಳಿದ್ದಾರೆ.

ADVERTISEMENT

ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊ ಹಂಚಿಕೊಂಡ ರಾಧಿಕಾ ಪಂಡಿತ್ ಅವರು, ಅದರಲ್ಲಿ ‘ನೀವ್ಯಾಕೆ ಪ್ರತಿಯೊಂದಕ್ಕೂ ಗಂಡನನ್ನು ಕರೀತೀರಿ? ಎಂದು ಪ್ರಶ್ನೆ ಹಾಕಿ ಅದಕ್ಕೆ ಅವರೇ ಉತ್ತರಿಸಿದ್ದಾರೆ. ‘ ನನ್ನ ಚಾಟ್‌ ಜಿಪಿಟಿ, ಅಡುಗೆ ಭಟ್ಟ, ಗುರು, ಕ್ಯಾಲಿಕ್ಯುಲೇಟರ್, ಡಿಜೆ, ಸ್ಟ್ರೆಸ್‌ಬಸ್ಟರ್‌, ಪರ್ಸನಲ್‌ ಡಾಕ್ಟರ್‌, ಫೋಟೋಗ್ರಾಫರ್‌, ನನ್ನ ಶಾಂತಿ’ ಎಂದು ಒಂದೊಂದು ಫೋಟೊಗಳ ಕೆಳಗಡೆ ಹೀಗೆ ಬರೆದುಕೊಂಡಿದ್ದಾರೆ.

ಯಶ್ ಮತ್ತು ರಾಧಿಕಾ ಪಂಡಿತ್ 2016 ಡಿಸೆಂಬರ್ 9ರಂದು ಬೆಂಗಳೂರಿನ ತಾಜ್ ವೆಸ್ಟ್ ಎಂಡ್​ನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಜನಪ್ರಿಯ ದಂಪತಿಗೆ ಐರಾ ಮತ್ತು ಯಥರ್ವ್ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಇನ್ನೂ, 9ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಯಶ್​ ರಾಧಿಕಾ ಅವರಿಗೆ ಅಭಿಮಾನಿಗಳ ಕಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.