ADVERTISEMENT

ಟಾಕ್ಸಿಕ್ ಸಿನಿಮಾದ ತಬಾಹಿ ಹಾಡು ಬಿಡುಗಡೆ: ರೊಮ್ಯಾಂಟಿಕ್ ಲುಕ್‌ನಲ್ಲಿ ಯಶ್–ಕಿಯಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮಾರ್ಚ್ 2026, 10:48 IST
Last Updated 2 ಮಾರ್ಚ್ 2026, 10:48 IST
   

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. 

ಟಾಕ್ಸಿಕ್ ಸಿನಿಮಾದ ‘ತಬಾಹಿ’ ಹಾಡು ಇಂದು (ಮಾರ್ಚ್ 2) ಬಿಡುಗಡೆಯಾಗಿದೆ. ‘ಎಲ್ಲಾ ಮಿತಿ ಮೀರಿ ಹೋಗೋಣ ಬಾ....ಎಲ್ಲಾ ಗಡಿ ದಾಟಿ ನೋಡೋಣ ಬಾ....ಶೃಂಗಾರ ದಂಗಾರ ಸಿಡಿದೇಳಲು ತಬಾಹಿ... ತಬಾಹಿ ಎನ್ನುವ ಹಾಡು ಮುಂದುವರೆಯುತ್ತದೆ.

ಕಿಯಾರ ಅಡ್ವಾಣಿ ಹಾಗೂ ಯಶ್ ಅವರು ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿರುವ ಪೋಸ್ಟರ್ ಜೊತೆಗೆ ಈ ಹಾಡನ್ನು ಬಿಡುಗಡೆ ಮಾಡಲಾಗಿದೆ. 

ADVERTISEMENT

ಈ ಹಾಡಿಗೆ ವಿಶಾಲ್ ಮಿಶ್ರಾ ಸಂಗೀತ ಸಂಯೋಜನೆ ಮಾಡಿದ್ದು, ಕನ್ನಡದಲ್ಲಿ ಯೋಗರಾಜ್ ಭಟ್, ಹಿಂದಿಯಲ್ಲಿ ರಾಜಶೇಖರ್ ಅವರು ಸಾಹಿತ್ಯ ಬರೆದಿದ್ದಾರೆ.

ಇನ್ನೂ ಸಿನಿಮಾವು ಮಾರ್ಚ್ 19ರಂದು ರಿಲೀಸ್ ಆಗಲಿದೆ. ಕೆಲ ದಿನಗಳ ಹಿಂದೆ ಟಾಕ್ಸಿಕ್ ಸಿನಿಮಾದ ಟೀಸರ್ ಬಿಡುಗಡೆಯಾಗಿತ್ತು.

'ಟಾಕ್ಸಿಕ್'ನಲ್ಲಿ ನಟನಾಗಿ, ಸಹ-ಬರಹಗಾರರಾಗಿ, ಸಹ-ನಿರ್ಮಾಪಕನಾಗಿ ಯಶ್ ಹೊಸ ಹೆಜ್ಜೆ ಇಟ್ಟಿದ್ದು, ವೆಂಕಟ್ ಕೆ.ನಾರಾಯಣ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಮಾನ್‌ಸ್ಟ‌ಮೈಂಡ್ ಕ್ರಿಯೇಷನ್ಸ್‌ನಡಿ ಯಶ್ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ.

ಈ ಸಿನಿಮಾ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಂಡಿದೆ. ಸಿನಿಮಾವು ಹಿಂದಿ, ತಮಿಳು, ತೆಲುಗು, ಮಲಯಾಳ ಸೇರಿದಂತೆ ಹಲವು ಭಾರತೀಯ ಹಾಗೂ ವಿದೇಶಿ ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.