ADVERTISEMENT

ಮಗುವನ್ನು ಮನೆಗೆ ಕರೆದುಕೊಂಡು ಬಂದ ಆಲಿಯಾ ಭಟ್–ರಣಬೀರ್ ಕಪೂರ್

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ದಂಪತಿಗೆ ಹೆಣ್ಣು ಮಗು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ನವೆಂಬರ್ 2022, 7:46 IST
Last Updated 10 ನವೆಂಬರ್ 2022, 7:46 IST
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್‌
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್‌   

ಬೆಂಗಳೂರು: ಬಾಲಿವುಡ್‌ನ ಜನಪ್ರಿಯ ತಾರಾ ದಂಪತಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್‌ಗೆ ಕಳೆದ ಭಾನುವಾರ ಹೆಣ್ಣು ಮಗು ಜನಿಸಿದೆ.

ಮುಂಬೈನ ರಿಲಯನ್ಸ್ ಆಸ್ಪತ್ರೆಯಲ್ಲಿ ಆಲಿಯಾ ಭಟ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ಗುರುವಾರ ಮಗುವನ್ನು ಕರೆದುಕೊಂಡು ಆಲಿಯಾ–ರಣಬೀರ್ ದಂಪತಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ADVERTISEMENT

ಮಗು ಜನಿಸಿರುವ ಕುರಿತು ಆಲಿಯಾ ಭಟ್ ಅವರು ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ತಿಳಿಸಿದ್ದರು.

ಮಗು ಜನಿಸಿದ ಬಳಿಕ ಬಾಲಿವುಡ್‌ ಸೆಲೆಬ್ರಿಟಿಗಳು, ಕಪೂರ್ ಮತ್ತು ಆಲಿಯಾ ಕುಟುಂಬದ ಆಪ್ತರು ಹಾಗೂ ಅಭಿಮಾನಿಗಳು ದಂಪತಿಗೆ ಶುಭಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.