ADVERTISEMENT

ನನಗೂ ಸೋಮವಾರದ ಮುಂಜಾನೆ ಇಷ್ಟವಿಲ್ಲ: ಆಲಿಯಾ ಭಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಡಿಸೆಂಬರ್ 2021, 5:03 IST
Last Updated 21 ಡಿಸೆಂಬರ್ 2021, 5:03 IST
ನಟಿ ಆಲಿಯಾ ಭಟ್
ನಟಿ ಆಲಿಯಾ ಭಟ್    

ಬೆಂಗಳೂರು: ನಟಿ ಆಲಿಯಾ ಭಟ್ ವರ್ಕೌಟ್ ಮತ್ತು ಫಿಟ್ನೆಸ್ ಕುರಿತು ಹಲವು ಬಾರಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಉತ್ತೇಜನ ನೀಡುತ್ತಿದ್ದರು. ಆದರೆ ಈ ಬಾರಿ ಸೋಮವಾರ ಮುಂಜಾನೆಯ ಕುರಿತು ಅವರು ಮಾಡಿರುವ ಪೋಸ್ಟ್ ಅಚ್ಚರಿಗೆ ಕಾರಣವಾಗಿದೆ.

ಸೋಮವಾರ ಎಂದರೆ ನನಗೂ ಹೀಗೆಯೇ ಅನ್ನಿಸುತ್ತದೆ. ಸಿನಿಮಾಗಳಲ್ಲಿ ಮಾತ್ರ ನಾವು ಜನರಿಗೆ ವಿವಿಧ ರೀತಿಯಲ್ಲಿ ಉಪದೇಶ ಮಾಡುತ್ತೇವೆ. ಆದರೆ ನಿಜ ಜೀವನದಲ್ಲಿ ನಮ್ಮ ಕಥೆಯೂ ಇಷ್ಟೇ ಎನ್ನುವ ಅರ್ಥದಲ್ಲಿ ಹೊಸ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದಾರೆ.

ತಮ್ಮ ಮುದ್ದಿನ ಬೆಕ್ಕಿನ ಜತೆಗಿರುವ ಫೋಟೊ ಒಂದನ್ನು ಅವರು ಪೋಸ್ಟ್ ಮಾಡಿದ್ದು, ನಿಜಜೀವನದಲ್ಲಿ ಹೀಗೆ ಎಂದು ಅಡಿಬರಹ ನೀಡಿದ್ದಾರೆ..

ADVERTISEMENT

ಮುದ್ದಿನ ಬೆಕ್ಕು ಎಂದರೆ ಆಲಿಯಾ ಅವರಿಗೆ ಅಚ್ಚುಮೆಚ್ಚು. ಬೆಕ್ಕನ್ನು ಮುದ್ದಿಸುತ್ತಿರುವ ಹಲವು ಫೋಟೊಗಳನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.