ಈ ವಾರ ಒಟಿಟಿಯಲ್ಲಿ ಹಲವು ಕುತೂಹಲಕಾರಿ ಸಿನಿಮಾಗಳು, ವೆಬ್ ಸೀರೀಸ್ ವೀಕ್ಷಣೆಗೆ ಸಿಗುತ್ತಿದೆ. ಈಗಾಗಲೇ ಜಿ5ನಲ್ಲಿ ಐಡೆಂಟಿಟಿ, ನೆಟ್‌ಫ್ಲಿಕ್ಸ್‌ನಲ್ಲಿ ಪುಷ್ಪ–2 ಸಿನಿಮಾ, ಬ್ಲಾಕ್ ವಾರೆಂಟ್ ವೆಬ್ ಸಿರೀಸ್ ಹೆಚ್ಚು ಸುದ್ದಿ ಮಾಡುತ್ತಿದೆ.
ಈ ಹಿಂದೆ ಮಲಯಾಳಂನಲ್ಲಿ ತೆರೆಕಂಡಿದ್ದ ‘ದಿ ಗ್ರೇಟ್ ಇಂಡಿಯನ್ ಕಿಚನ್’ ಸಿನಿಮಾ ಆಧರಿಸಿದ ಚಿತ್ರ ಮಿಸಸ್ (MRS). ಮುಖ್ಯ ಭೂಮಿಕೆಯಲ್ಲಿ ನಟಿ ರಿಚಾ ಕಾಣಿಸಿಕೊಂಡಿದ್ದಾರೆ. ಮದುವೆಯಾಗಿ ಗಂಡನ ಮನೆಗ ಬಂದ ಹೆಣ್ಣೊಬ್ಬಳು ತನ್ನ ಕನಸಿನೆಡೆಗೆ ಸಾಗುವ ದಾರಿ ಕಂಡುಕೊಳ್ಳುವ ಕಥಾಹಂದರವನ್ನು ಹೊಂದಿದೆ. ಚಿತ್ರ ಜಿ5ನಲ್ಲಿ ಫೆ.7ರಂದು ವೀಕ್ಷಣೆಗೆ ಸಿಗಲಿದೆ.
The Greatest Rivalry:ಭಾರತ Vs ಪಾಕಿಸ್ತಾನ:
ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯದಲ್ಲಿ ಬದ್ದ ವೈರಿಗಳು. ಇದರ ಕುರಿತಾದ ಕ್ರೀಡಾ ಸಾಕ್ಷ್ಯಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ. ಇದು ಕೂಡ ಫೆ.7ರಂದು ಬಿಡುಗಡೆಯಾಗುತ್ತಿದೆ.
ಬೊಮಾನ್ ಇರಾನಿ ಮೊದಲ ಬಾರಿಗೆ ನಿರ್ದೇಶಿಸಿದ ಮಹ್ತಾ ಬಾಯ್ಸ್ ಚಿತ್ರ ಫೆ.7ರಂದು ಅಮೆಜಾನ್ ಪ್ರೈಮ್‌ನಲ್ಲಿ ತೆರೆಕಾಣುತ್ತಿದೆ. ತಂದೆ– ಮಗನ ಬಾಂಧವ್ಯದ ಕುರಿತಾದ ಕಥಾಹಂದರವನ್ನು ಚಿತ್ರ ಹೊಂದಿದೆ.
ರಾಮ್ ಚರಣ್ ನಟನೆಯ ಗೇಮ್ ಚೇಂಜರ್ ಚಿತ್ರ ಫೆ.7ರಿಂದ ಅಮೆಜಾನ್ ಪ್ರೈಮ್‌ನಲ್ಲಿ ವೀಕ್ಷಣೆಗೆ ಸಿಗಲಿದೆ. ತೆಲುಗು, ತಮಿಳು ಮತ್ತು ಕನ್ನಡದಲ್ಲಿ ಸಿನಿಮಾವನ್ನು ನೋಡಬಹುದು. ಕಿಯಾರಾ ಅಡ್ವಾಣಿ ಚಿತ್ರದಲ್ಲಿ ನಟಿಯಾಗಿ ಕಾಣಸಿಕೊಂಡಿದ್ದಾರೆ.
ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶಗೊಂಡ ಕಿರುಚಿತ್ರ ಅನುಜಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ. ಇದು ಫೆ.5ರಿಂದ ವೀಕ್ಷಣೆಗೆ ಸಿಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.