ADVERTISEMENT

ಪ್ರಿಯಕರನ ಜತೆ ಕ್ರಿಸ್‌ಮಸ್ ಆಚರಿಸಿದ ಅಮೀರ್ ಖಾನ್ ಪುತ್ರಿ ಇರಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಡಿಸೆಂಬರ್ 2021, 5:35 IST
Last Updated 28 ಡಿಸೆಂಬರ್ 2021, 5:35 IST
ಇರಾ ಖಾನ್ ಅವರು ಬಾಯ್‌ಫ್ರೆಂಡ್ ಜತೆಗೆ ಕ್ರಿಸ್‌ಮಸ್ ಆಚರಿಸಿದ್ದಾರೆ..
ಇರಾ ಖಾನ್ ಅವರು ಬಾಯ್‌ಫ್ರೆಂಡ್ ಜತೆಗೆ ಕ್ರಿಸ್‌ಮಸ್ ಆಚರಿಸಿದ್ದಾರೆ..   

ಬೆಂಗಳೂರು: ಬಾಲಿವುಡ್ ನಟ ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್, ಪ್ರಿಯಕರ ನೂಪುರ್ ಶಿಖರೆ ಜತೆ ಕ್ರಿಸ್‌ಮಸ್ ಆಚರಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಇರಾ ಅವರು ಪ್ರಿಯಕರ ನೂಪುರ್ ಜತೆಗಿರುವ ಮತ್ತು ಹಬ್ಬದ ಸಂಭ್ರಮದ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.

ಕ್ರಿಸ್‌ಮಸ್ ಆಚರಣೆಯ ಸಂದರ್ಭದಲ್ಲಿ ಇರಾ ಮತ್ತು ನೂಪುರ್ ಜತೆಗೆ ಅಮೀರ್ ಖಾನ್ ಕೂಡ ಸೇರಿಕೊಂಡಿದ್ದರು.

ADVERTISEMENT

ಅಮೀರ್ ಖಾನ್ ಮೊದಲ ಹೆಂಡತಿ ರೀನಾ ದತ್ತಾ ಅವರ ಮಗಳಾಗಿರುವ ಇರಾ ಖಾನ್ ಹಾಗೂ ಫಿಟ್ನೆಸ್ ತರಬೇತುದಾರರಾಗಿರುವ ನೂಪುರ್ಬಹುದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ.

ಇರಾ ಖಾನ್ ಅವರು 2019ರಲ್ಲಿ ಮೀಡಿಯಾ ಎಂಬ ಚಿತ್ರವನ್ನು ನಿರ್ದೇಶಿಸುವ ಮೂಲಕ ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ.

ನೂಪುರ್ ಮತ್ತು ಇರಾ ಇಬ್ಬರೂ ಪರಸ್ಪರ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಫೋಟೊ–ವಿಡಿಯೊ ಹಂಚಿಕೊಳ್ಳುತ್ತಾ, ಪ್ರೇಮವನ್ನು ವ್ಯಕ್ತಪಡಿಸುತ್ತಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.