ADVERTISEMENT

ಸೌರಭ್ ಶುಕ್ಲಾ ನಿರ್ದೇಶನದ ‘ಜಬ್ ಖುಲಿ ಕಿತಾಬ್’ ನೇರ ಒಟಿಟಿಗೆ

ಪಿಟಿಐ
Published 3 ಮಾರ್ಚ್ 2026, 7:14 IST
Last Updated 3 ಮಾರ್ಚ್ 2026, 7:14 IST
<div class="paragraphs"><p>ಜಬ್ ಖುಲಿ ಕಿತಾಬ್</p></div>

ಜಬ್ ಖುಲಿ ಕಿತಾಬ್

   

ಸೌರಭ್ ಶುಕ್ಲಾ ನಿರ್ದೇಶನದ, ಡಿಂಪಲ್ ಕಪಾಡಿಯಾ ಹಾಗೂ ಪಂಕಜ್ ಕಪೂರ್ ನಟನೆಯ ‘ಜಬ್ ಖುಲಿ ಕಿತಾಬ್’ ಹಿಂದಿ ಚಿತ್ರವು ನೇರವಾಗಿ ಒಟಿಟಿಗೆ ಕಾಲಿಟ್ಟಿದೆ. 

ಇಳಿವಯಸ್ಸಿನಲ್ಲೂ ಪ್ರೀತಿಗಾಗಿ ಹಂಬಿಸುವ ಎರಡು ಹಿರಿಯ ಜೀವಗಳ ಕಥಾ ಹಂದರ ಹೊಂದಿರುವ  ‘ಜಬ್ ಖುಲಿ ಕಿತಾಬ್’ ಚಿತ್ರವು, ಮಾರ್ಚ್6 ರಿಂದ ಜೀ5 ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ.

ADVERTISEMENT

ಈ ಚಿತ್ರದ ಮುಖ್ಯ ಪಾತ್ರಧಾರಿಗಳಾಗಿರುವ ‘ಗೋಪಾಲ್ ಹಾಗೂ ಅನುಸೂಯಾ ಅವರ ದೀರ್ಘಕಾಲದ ಸಂಸಾರಿಕ ಜೀವನದಲ್ಲಿ ಅನ್ಯೋನ್ಯತೆಯಿಂದ ಬದುಕಿರುತ್ತಾರೆ. ಆದರೆ ಪತ್ನಿ ಅನುಸೂಯಾ ಅವರು ತಮ್ಮ ವಿವಾಹಕ್ಕೂ ಮೊದಲಿನ ರಹಸ್ಯ ಒಂದನ್ನು ಮುಚ್ಚಿಟ್ಟಿರುತ್ತಾರೆ. ಅದು ಗೋಪಾಲ್ ಅವರಿಗೆ ತಿಳಿಯುತ್ತದೆ. ಪತ್ನಿ ನನ್ನಿಂದ ಇನ್ನೆಷ್ಟು ವಿಷಯಗಳನ್ನು ಮುಚ್ಚಿಟ್ಟಿರಬಹುದು ಎಂದು ವಿಚ್ಛೇದನ ಪಡೆಯಲು ಮುಂದಾಗುತ್ತಾರೆ. ಈ ಜೋಡಿ ವಿಚ್ಛೇದನ ಪಡೆಯುತ್ತಾರಾ? ಅಥವಾ ಗೋಪಾಲ್ ಅವರು ಪತ್ನಿಯನ್ನು ಕ್ಷಮಿಸಿ ಮತ್ತೆ ಒಟ್ಟಿಗೆ ಜೀವನ ಪಡೆಯುತ್ತಾರಾ? ಎಂಬುವುದು ಚಿತ್ರಕಥೆ. 

ಈ ಚಿತ್ರವನ್ನು 'ಶೂಸ್ಟ್ರಾಪ್ ಫಿಲ್ಮ್ಸ್' (Shoestrap Films) ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.