
ಬೆಂಗಳೂರು: ಸ್ಯಾಂಡಲ್‌ವುಡ್ ನಟ ಕೋಮಲ್ ಕುಮಾರ್ ನಟನೆಯ ಕನ್ನಡ ಕಾಮಿಡಿ-ಹಾರರ್ ಥ್ರಿಲ್ಲರ್ ಸಿನಿಮಾ ‘ಕೋಣ’, ಡಿ.19 ರಂದು ಜೀ 5 ಒಟಿಟಿಯಲ್ಲಿ ಬಿಡುಗಡೆಯಾಗಿದೆ.
ಗ್ರಾಮೀಣ ಭಾಗದ ಹಿನ್ನಲೆಯನ್ನು ಹೊಂದಿರುವ ನೈಜ ಘಟನೆಯಾಧಾರಿತ ಚಿತ್ರವಾಗಿದೆ. ಹಳ್ಳಿಯೊಂದರಲ್ಲಿನ ಮೂಢನಂಬಿಕೆ, ಕಟ್ಟುಕತೆ ಮತ್ತು ನಿಗೂಢತೆಗಳ ಸುತ್ತ ಸಾಗುತ್ತದೆ.
ನಟ ಕೋಮಲ್ ಕುಮಾರ್ ಅವರು ಪತ್ರಕರ್ತನ ಪಾತ್ರದಲ್ಲಿ ನಟಿಸಿದ್ದು, ಹಳ್ಳಿಯಲ್ಲಿನ ನಿಗೂಢತೆ ಬೆನ್ನತ್ತಿ ಸಾಗುತ್ತಾರೆ.
ಸಿನಿಮಾದಲ್ಲಿ ಕೋಮಲ್ ಜೊತೆ ತನಿಷಾ ಕುಪ್ಪಂಡ, ರಿಥ್ವಿ ಜಗದೀಶ್, ವಿನಯ್ ಗೌಡ, ರಂಜಿತ್ ಗೌಡ, ಮಂಜು ಪಾವಗಡ ಮತ್ತು ರಘು ರಾಮನಕೊಪ್ಪ ಅವರು ನಟಿಸಿದ್ದಾರೆ.
ಕೋಣ ಸಿನಿಮಾವನ್ನು ಎಸ್. ಹರಿಕೃಷ್ಣ ಅವರು ನಿರ್ದೇಶಿಸಿದ್ದು, ನಟಿ ತನಿಷಾ ಕುಪ್ಪಂಡ ಅವರೇ ನಿರ್ಮಾಪಕರಾಗಿದ್ದಾರೆ. ಈ ವರ್ಷದ ಅಕ್ಟೋಬರ್ 31ರಂದು ಚಿತ್ರಮಂದಿರದಲ್ಲಿ ತೆರೆಕಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.