ಬೆಂಗಳೂರು: ಪ್ರಣಯ, ಆ್ಯಕ್ಷನ್, ಹಾಸ್ಯ ಹಾಗೂ ಪೌರಾಣಿಕ ಕಥೆಯುಳ್ಳ ಚಿತ್ರಗಳು ಒಟಿಟಿಯ ವಿವಿಧ ವೇದಿಕೆಗಳಲ್ಲಿ ಸೆಪ್ಟೆಂಬರ್‌ನಲ್ಲಿ ತೆರೆ ಕಾಣುತ್ತಿವೆ.
ರ‍್ಯಾನ್ ಗೋಸ್ಲಿಂಗ್ ಮತ್ತು ಎಮಿಲಿ ಬ್ಲಂಟ್ ಅವರ ಹಾಸ್ಯಭರಿತ ಆ್ಯಕ್ಷನ್ ಚಿತ್ರ ‘ದಿ ಫಾಲ್ ಗಾಯ್’ ಚಿತ್ರವು ತೆರೆ ಕಾಣುತ್ತಿದೆ.
ಎಲ್ಲಿ ನೋಡಬಹುದು: ನೆಟ್‌ಫ್ಲಿಕ್ಸ್
ಭಾಷೆ: ಇಂಗ್ಲಿಷ್
ಬಿಡುಗಡೆ: ಸೆಪ್ಟೆಂಬರ್ 2
ನೆವರ್‌ಮೋರ್ ಅಕಾಡೆಮಿಗೆ ಆಡಮ್ಸ್ ಬುಧವಾರ ಮರಳುತ್ತಾಳೆ. ಪರಿಚಿತ ಮುಖಗಳು, ವೈರಿಗಳು ಮತ್ತು ಹಲವು ರಹಸ್ಯಗಳು ಅಲ್ಲಿ ಕಾದಿವೆ. ವ್ಯಂಗ್ಯ ಹಾಗೂ ಗಾಢವಾದ ಮೋಡಿಗೆ ಅವಳು ಮತ್ತೊಂದು ಸಾಹಸಮಯ ಪಯಣಕ್ಕೆ ಸಜ್ಜಾಗುತ್ತಾಳೆ.
ಎಲ್ಲಿ ನೋಡಬಹುದು: ನೆಟ್‌ಫ್ಲಿಕ್ಸ್
ಭಾಷೆ: ಇಂಗ್ಲಿಷ್ ಮತ್ತು ಇತರೆ
ಬಿಡುಗಡೆ: ಸೆ. 3
ಮನಮುಟ್ಟುವ ಈ ಸಿರೀಸ್‌ನಲ್ಲಿ ಅಮೆರಿಕದ ಮೂರು ಕುಟುಂಬಗಳು ಆಧುನಿಕ ಜಗತ್ತನ್ನು ತೊರೆದು 1800ನೇ ಇಸವಿಗೆ ಮರಳುತ್ತಾರೆ. ತಂತ್ರಜ್ಞಾನ, ಕೊಳವೆಯಲ್ಲಿ ಹರಿಯುವ ನೀರು, ವಿದ್ಯುತ್‌ನಿಂದ ಬಹುದೂರ... ಹೇಗಿರಲಿದೆ?
ಎಲ್ಲಿ ನೋಡಬಹುದು: ಜಿಯೊ ಹಾಟ್‌ಸ್ಟಾರ್
ಭಾಷೆ: ಇಂಗ್ಲಿಷ್
ಬಿಡುಗಡೆ: ಸೆ. 3
ಏಕಾಂಗಿಯಾಗಿರುವ ಹವಾಯಿ ಹುಡುಗಿ ಹಾಗೂ ಕಾಡಿನ ಏಲಿಯನ್ ಉತ್ತಮ ಸ್ನೇಹಿತರಾಗುವ ಮತ್ತು ಹೊಸ ಸಾಹಸಗಳ ಮೂಲಕ ಕಚಗುಳಿ ಇಡುವ ಕಥೆಯನ್ನು ಡೀನ್ ಫ್ಲೆಷರ್ ಕ್ಯಾಂಪ್ ತೆರೆಗೆ ತಂದಿದ್ದಾರೆ.
ಎಲ್ಲಿ ನೋಡಬಹುದು: ಜಿಯೊಹಾಟ್‌ಸ್ಟಾರ್
ಭಾಷೆ: ಇಂಗ್ಲಿಷ್ ಹಾಗೂ ಇತರೆ
ಬಿಡುಗಡೆ: ಸೆ. 3
ಬಾಕ್ಸಿಂಗ್ ತಾರೆಯರಾದ ಕ್ಯಾನೆಲೊ ಅಲ್ವರೆಜ್ ಮತ್ತು ಟೆರೆನ್ಸ್ ಕ್ರಫೋರ್ಡ್ ಅವರ ಅಂತಿಮ ಸುತ್ತಿನ ತಯಾರಿ ಹಾಗೂ ವೈಯಕ್ತಿಕ ಬದುಕಿನ ಪಯಣ ಕುರಿತ ಕಥೆ ಇದು.
ಎಲ್ಲಿ ನೋಡಬಹುದು: ನೆಟ್‌ಫ್ಲಿಕ್ಸ್
ಭಾಷೆ: ಇಂಗ್ಲಿಷ್
ಬಿಡುಗಡೆ: ಸೆ. 4
ದಿ ಟಿಂಡರ್ ಸ್ವಿಂಡ್ಲರ್ ಮತ್ತು ಪಿಐ ಬ್ರಿಯಾನ್ ಜೋಸೆಫ್‌ನಿಂದ ಜನಪ್ರಿಯರಾದ ಮತ್ತು ಸಿಸೆಲಿ ಫ್ಜೆಲೋಹ್ ಅವರ ಮಾರ್ಗದರ್ಶನದಲ್ಲಿ ಪ್ರಣಯದ ಹಗರಣಗಳ ಬಲಿಪಶುಗಳ ಗುಣಮುಖರಾಗುವ ಪಯಣದ ಕಥೆ.
ಎಲ್ಲಿ ನೋಡಬಹುದು: ನೆಟ್‌ಫ್ಲಿಕ್ಸ್
ಭಾಷೆ: ಇಂಗ್ಲಿಷ್
ಬಿಡುಗಡೆ: ಸೆ. 5
1980ರಲ್ಲಿ ಮುಂಬೈನಲ್ಲಿ ಇನ್‌ಸ್ಪೆಕ್ಟರ್ ಮಧುಕರ್ ಜೆಂಡೆ ಎಂಬುವವರು ‘ಸ್ವಿಮ್‌ಸೂಟ್ ಕಿಲ್ಲರ್’ ಕಾರ್ಲ್ ಭೋಜರಾಜ್ ಎಂಬಾತನನ್ನು ಹಿಡಿದ ರೋಚಕ ಕಥೆ.
ಎಲ್ಲಿ ನೋಡಬಹುದು: ನೆಟ್‌ಫ್ಲಿಕ್ಸ್
ಭಾಷೆ: ಹಿಂದಿ
ಬಿಡುಗಡೆ: ಸೆ. 5
ಕಾಲ್ಪನಿಕ ಹಾಸ್ಯ ಪ್ರಧಾನ ಚಿತ್ರದಲ್ಲಿ ಜೇಸನ್ ಮೊಮೋ, ಜ್ಯಾಕ್ ಬ್ಲಾಕ್, ಡೇನಿಯಲ್ ಬ್ರೂಕ್ಸ್ ಮತ್ತು ಎಮ್ಮಾ ಮೈರ್ಸ್ ಮುಖ್ಯಭೂಮಿಕೆಯಲ್ಲಿದ್ದಾರೆ. ಓವರ್‌ವರ್ಲ್ಡ್‌ನ ಕ್ಯುಬಿಕ್‌ನಲ್ಲಿ ಸಿಲುಕಿದ ನಾಲ್ವರು ಅಲ್ಲಿಂದ ತಪ್ಪಿಸಿಕೊಳ್ಳಲು ನಡೆಸುವ ಹಾಸ್ಯಮಯ ಯತ್ನದ ಕಥೆ ಇದರ ವಸ್ತು.
ಎಲ್ಲಿ ನೋಡಬಹುದು: ಜಿಯೊ ಹಾಟ್‌ಸ್ಟಾರ್
ಭಾಷೆ: ಇಂಗ್ಲಿಷ್
ಬಿಡುಗಡೆ: ಸೆ. 5
ವಿಕ್ರಾಂತ್ ಮೆಸ್ಸಿ ಮತ್ತು ಶನಾಯಾ ಕಪೂರ್ ನಟನೆಯ ಪ್ರಣಯ ಚಿತ್ರ ಇದು. ದೃಷ್ಟಿಹೀನ ಸಂಗೀತಗಾರ ಮತ್ತು ಕಿವಿ ಕೇಳಿಸದ ನಾಯಕಿ ಇಬ್ಬರೂ ರೈಲಿನಲ್ಲಿ ಭೇಟಿಯಾಗುತ್ತಾರೆ. ಹಲವು ಸವಾಲುಗಳನ್ನು ಎದುರಿಸುತ್ತಾ ಹೇಗೆ ಒಂದಾಗುತ್ತಾರೆ ಎಂಬುದು ಇದರ ಕಥಾವಸ್ತು
ಎಲ್ಲಿ ನೋಡಬಹುದು: ಝೀ5
ಭಾಷೆ: ಹಿಂದಿ
ಬಿಡುಗಡೆ: ಸೆ. 5
ಪೌರಾಣಿಕ ಕಥೆಯಾಧಾರಿತ ಚಿತ್ರ ಕಣ್ಣಪ್ಪ. ಅಕ್ಷಯ್ ಕುಮಾರ್, ಪ್ರಭಾಸ್ ಸಹಿತ ಬಹುದೊಡ್ಡ ತಾರಾಗಣವಿರುವ ಚಿತ್ರ ಈ ವಾರ ಒಟಿಟಿಯಲ್ಲಿ ತೆರೆ ಕಾಣುತ್ತಿದೆ.
ಎಲ್ಲಿ ನೋಡಬಹುದು: ಪ್ರೈಂ ವಿಡಿಯೊ
ಭಾಷೆ: ತೆಲುಗು ಮತ್ತು ಇತರೆ
ಬಿಡುಗಡೆ: ಸೆ. 5
ಮಲಯಾಳಂ ಚಿತ್ರ ಕಮ್ಮತ್ತಮ್ ಈವಾರ ತೆರೆ ಕಾಣುತ್ತಿದೆ. ವ್ಯಕ್ತಿಯೊಬ್ಬ ನಿಗೂಢವಾಗಿ ಸಾವಿಗೀಡಾದ ಪ್ರಕರಣದ ತನಿಖೆ ನಡೆಸುತ್ತಾ ಹಲವು ಸವಾಲುಗಳನ್ನು ಎದುರಿಸುವ ಇನ್‌ಸ್ಪೆಕ್ಟರ್ ಆಂಟೊನಿಯೊ ಜಾರ್ಜ್ ಸುತ್ತ ಹೆಣೆದ ಕಥೆ.
ಎಲ್ಲಿ ನೋಡಬಹುದು: ಝೀ5
ಭಾಷೆ: ಮಲಯಾಳಂ
ಬಿಡುಗಡೆ: ಸೆ. 6
ಹದಿನಾರು ಸೆಲೆಬ್ರಿಟಿಗಳು ಮುಖಾಮುಖಿಯಾಗುವ ರೈಸ್ ಅಂಡ್ ಫಾಲ್‌ನಲ್ಲಿ ಗುಡಿಸಲು ಮತ್ತು ನೆಲಮಾಳಿಗೆಯ ಕಾರ್ಮಿಕರ ಎರಡು ಗುಂಪುಗಳಲ್ಲಿ ಹಂಚಲಾಗಿರುತ್ತದೆ. ಇವರು ಆ ಕಟ್ಟಡದಲ್ಲಿ ಪ್ರಾಬಲ್ಯ ಮೆರೆಯಲು ನಡೆಸುವ ಹೋರಾಟದ ಕಥೆ ಇದು.
ಎಲ್ಲಿ ನೋಡಬಹುದು: ಅಮೆಜಾನ್ ಎಂಎಕ್ಸ್ ಪ್ಲೇಯರ್
ಭಾಷೆ: ಹಿಂದಿ
ಬಿಡುಗಡೆ: ಸೆ. 6
ಒತ್ತಡದಲ್ಲಿ ಚುಂಬಿಸುವುದು ಹೇಗೆ ಎಂಬ ಹಾಸ್ಯಮಯ ಕಥೆಯಾಧಾರಿತ ಚಿತ್ರವಿದು.
ಎಲ್ಲಿ ನೋಡಬಹುದು: ನೆಟ್‌ಫ್ಲಿಕ್ಸ್
ಭಾಷೆ: ಇಂಗ್ಲಿಷ್
ಬಿಡುಗಡೆ: ಸೆ. 9
ನಿಗೂಢ, ಕುತೂಹಲಭರಿತ ಚಿತ್ರವು ಕೊಲೆಗಳ ಸುತ್ತಲೇ ತಿರುಗುವ ಕಥೆಯಲ್ಲಿ ಸ್ಟೀವ್ ಮಾರ್ಟಿನ್, ಮಾರ್ಟಿನ್ ಶಾರ್ಟ್ ಮತ್ತು ಸೆಲೆನಾ ಗೊಮೆಜ್ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಎಲ್ಲಿ ನೋಡಬಹುದು: ಜಿಯೊ ಹಾಟ್‌ಸ್ಟಾರ್
ಭಾಷೆ: ಇಂಗ್ಲಿಷ್
ಬಿಡುಗಡೆ: ಸೆ. 9
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.