ADVERTISEMENT

ಆರ್ಯನ್ ಖಾನ್‌ಗೆ ಜಾಮೀನು: ಅಣ್ಣನ ಬರುವಿಕೆಗೆ ಕಾದು ಕುಳಿತ ತಂಗಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಅಕ್ಟೋಬರ್ 2021, 6:11 IST
Last Updated 29 ಅಕ್ಟೋಬರ್ 2021, 6:11 IST
ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್‌ಗೆ ಜಾಮೀನು
ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್‌ಗೆ ಜಾಮೀನು   

ಬೆಂಗಳೂರು:ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ಬಾಲಿವುಡ್ ನಟ ಶಾರುಖ್ ಖಾನ್‌ ಪುತ್ರ ಆರ್ಯನ್ ಖಾನ್‌ಗೆ ಕೊನೆಗೂ ಜಾಮೀನು ಲಭಿಸಿದೆ.

ನಟ ಶಾರುಖ್ ಖಾನ್ ಪುತ್ರನಿಗೆ ಜಾಮೀನು ದೊರೆತ ಬೆನ್ನಲ್ಲೇ ಅವರ ಅಭಿಮಾನಿಗಳು ಮನೆಯ ಬಳಿ ಸಂಭ್ರಮಿಸಿದ್ದಾರೆ.

ಈ ಮಧ್ಯೆ ಆರ್ಯನ್ ಖಾನ್ ಸಹೋದರಿ ಸುಹಾನಾ ಖಾನ್ ಕೂಡ ಅಣ್ಣನ ಬರುವಿಕೆಗೆ ಕಾದು ಕುಳಿತಿದ್ದಾರೆ.

ADVERTISEMENT

ಅಣ್ಣನ ಜತೆಗಿನ ಹಳೆಯ ನೆನಪುಗಳ ಫೋಟೊಗಳನ್ನು ಸುಹಾನಾ ಖಾನ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

‘ಐ ಲವ್ ಯೂ’ ಎಂಬ ಅಡಿಬರಹದೊಂದಿಗೆ ಶಾರುಖ್ ಖಾನ್ ಮತ್ತು ಆರ್ಯನ್ ಖಾನ್ ಜತೆಗಿರುವ ಹಳೆಯ ಫೋಟೊಗಳನ್ನು ಸುಹಾನಾ ಹಂಚಿಕೊಂಡಿದ್ದು, ಬಾಲಿವುಡ್ ಮಂದಿ ಈ ಪೋಸ್ಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕಮೆಂಟ್ ಮಾಡುವ ಮೂಲಕ ಬೆಂಬಲ ಸೂಚಿಸಿದ್ದಾರೆ.

ಕ್ರೂಸ್ ಹಡಗಿನಲ್ಲಿ ಅಕ್ಟೋಬರ್ 2ರಂದುಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಆರ್ಯನ್ ಖಾನ್ 21ಕ್ಕೂ ಹೆಚ್ಚು ದಿನಗಳನ್ನು ಜೈಲಿನಲ್ಲಿಯೇ ಕಳೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.