ADVERTISEMENT

ಗೌರಿ ಖಾನ್ ಬರ್ತ್‌ಡೇ: ಹಳೆಯ ಫೋಟೊ ಪೋಸ್ಟ್ ಮಾಡಿದ ಸುಹಾನಾ ಖಾನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಅಕ್ಟೋಬರ್ 2021, 5:46 IST
Last Updated 8 ಅಕ್ಟೋಬರ್ 2021, 5:46 IST
ಸುಹಾನಾ ಖಾನ್ ಅಮ್ಮನ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ..
ಸುಹಾನಾ ಖಾನ್ ಅಮ್ಮನ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ..   

ಬೆಂಗಳೂರು: ಬಾಲಿವುಡ್‌ ನಟಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾರೆ. ಹೀಗಾಗಿ ಶಾರುಖ್ ಕುಟುಂಬ ಮೌನಕ್ಕೆ ಶರಣಾಗಿದೆ.

ಈ ಮಧ್ಯೆ, ಶಾರುಖ್ ಪತ್ನಿ, ಗೌರಿ ಖಾನ್ ಅವರ ಹುಟ್ಟುಹಬ್ಬವಿದ್ದು, ಪುತ್ರಿ ಸುಹಾನಾ ಖಾನ್ ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಶುಭ ಕೋರಿದ್ದಾರೆ.

ಶಾರುಖ್ ಮತ್ತು ಗೌರಿ ಅವರ ಹಳೆಯ, ಕಪ್ಪು ಬಿಳುಪಿನ ಚಿತ್ರ ಇದಾಗಿದ್ದು, ‘ಹ್ಯಾಪಿ ಬರ್ಡ್‌ಡೇ ಮಾ’ ಎಂದು ಸುಹಾನಾ ತಾಯಿಗೆ ಶುಭ ಹಾರೈಸಿದ್ದಾರೆ.

ADVERTISEMENT

ಗೌರಿ ಖಾನ್ ಅವರು ಒಳಾಂಗಣ ವಿನ್ಯಾಸ ಮತ್ತು ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಬಾರಿ ಪುತ್ರನ ಡ್ರಗ್ಸ್ ಪ್ರಕರಣ ಮತ್ತು ವಿಸ್ತರಣೆಯಾಗಿರುವ ನ್ಯಾಯಾಂಗ ಬಂಧನ, ಕುಟುಂಬಕ್ಕೆ ಸವಾಲಾಗಿ ಪರಿಣಮಿಸಿದೆ.

ಗೌರಿ ಖಾನ್ ಅವರಿಗೆ ಸುಸಾನೆ ಖಾನ್ ಮತ್ತು ಫರಾ ಖಾನ್ ಕೂಡ ಹುಟ್ಟುಹಬ್ಬದ ಶುಭಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.