ADVERTISEMENT

ಉಬರ್ ಕ್ಯಾಬ್ ಡ್ರೈವರ್ ಬ್ಯಾಗ್ ಸಹಿತ ತೆರಳಿದ್ದಾರೆ: ಸ್ವರಾ ಭಾಸ್ಕರ್ ಆರೋಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಮಾರ್ಚ್ 2022, 10:42 IST
Last Updated 24 ಮಾರ್ಚ್ 2022, 10:42 IST
ನಟಿ ಸ್ವರಾ ಭಾಸ್ಕರ್
ನಟಿ ಸ್ವರಾ ಭಾಸ್ಕರ್   

ಬೆಂಗಳೂರು: ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರು ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ಉಬರ್ ಡ್ರೈವರ್‌ನಿಂದ ತಮಗಾದ ಕಹಿ ಅನುಭವವನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.

ಉಬರ್ ಸಪೋರ್ಟ್‌ಗೆ ಟ್ವೀಟ್ ಮಾಡಿರುವ ಸ್ವರಾ, ಕ್ಯಾಬ್‌ನಲ್ಲಿ ಬರುವಾಗ, ಅದರಲ್ಲಿದ್ದ ದಿನಸಿ ಸಾಮಾಗ್ರಿಗಳಿದ್ದ ಒಂದು ಬ್ಯಾಗ್ ಅನ್ನು ಡ್ರೈವರ್ ತೆಗೆದುಕೊಂಡು ಹೋಗಿದ್ದಾರೆ, ಅದನ್ನು ಮರಳಿ ಕೊಡಿಸುವಿರಾ ಎಂದು ಕೇಳಿದ್ದಾರೆ.

ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಉಬರ್, ಖಂಡಿತ ಈ ವಿಚಾರವಾಗಿ ನಿಮಗೆ ಸಹಾಯ ಮಾಡಲಿದ್ದೇವೆ ಎಂದು ಹೇಳಿದೆ.

ADVERTISEMENT

ಸಿನಿಮಾ ಕೆಲಸಗಳಿಗಾಗಿ ಲಾಸ್ ಏಂಜಲೀಸ್‌ಗೆ ತೆರಳಿರುವ ನಟಿ ಸ್ವರಾ, ಉಬರ್ ಆ್ಯಪ್‌ ಮೂಲಕ ಕ್ಯಾಬ್ ಬುಕ್ ಮಾಡಿದ್ದರು.

ಇದು ಪ್ರವಾಸಿಗರ ಸಮಸ್ಯೆ ಎಂದು ಸ್ವರಾ ಹೇಳಿಕೊಂಡಿದ್ದು, ಅವರ ಟ್ವೀಟ್‌ಗೆ ಉಬರ್ ತಕ್ಷಣ ಸ್ಪಂದಿಸಿ, ಸಮಸ್ಯೆ ಸರಿಪಡಿಸುವ ಭರವಸೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.