ADVERTISEMENT

ಬಾಳೆ ಎಲೆಯಲ್ಲಿ ತಿನ್ನುವಾಗ ನಾನು ದೇವತೆ ಅನ್ನಿಸುತ್ತದೆ: ತಮನ್ನಾ ಭಾಟಿಯಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ನವೆಂಬರ್ 2021, 12:29 IST
Last Updated 24 ನವೆಂಬರ್ 2021, 12:29 IST
ನಟಿ ತಮನ್ನಾ ಭಾಟಿಯಾ
ನಟಿ ತಮನ್ನಾ ಭಾಟಿಯಾ   

ಬೆಂಗಳೂರು: ಬಾಳೆ ಎಲೆಯಲ್ಲಿ ಊಟ ಮಾಡುವಾಗ ನಾನು ದೇವತೆ ಎಂದು ಭಾಸವಾಗುತ್ತದೆ ಎಂದು ನಟಿ ತಮನ್ನಾ ಭಾಟಿಯಾ ಹೇಳಿದ್ದಾರೆ.

ಚಿತ್ರರಂಗದಲ್ಲಿ 'ಮಿಲ್ಕಿ ಬ್ಯೂಟಿ' ಎಂಬ ಹೆಸರಿನಿಂದ ಗುರುತಿಸಲ್ಪಡುವ ನಟಿ ತಮನ್ನಾ, ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೊ ಒಂದನ್ನು ಶೇರ್ ಮಾಡಿದ್ದಾರೆ.

ಅದರಲ್ಲಿ ಬಾಳೆ ಎಲೆಯಲ್ಲಿ ಅವರು ತಿನಿಸು ಸೇವಿಸುತ್ತಿದ್ದಾರೆ. ಜತೆಗೆ ಈ ಫೋಟೊಗೆ ಅವರು, ಬಾಳೆ ಎಲೆಯ ಬಳಕೆ ಅತ್ಯಂತ ಸುಲಭ, ಪರಿಸರ ಮತ್ತು ನಮ್ಮ ಆರೋಗ್ಯಕ್ಕೂ ಒಳ್ಳೆಯದೇ.. ನಮ್ಮ ಸಂಪ್ರದಾಯದ ಕಡೆ ಒಮ್ಮೆ ಹೋಗಿ ಬಂದಂತಾಯಿತು ಎಂಬ ಅಡಿಬರಹ ನೀಡಿದ್ದಾರೆ.

ADVERTISEMENT

ತಮನ್ನಾ ಅವರ ಫೋಟೊವನ್ನು ಐದು ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು, ಬಾಲಿವುಡ್ ಮತ್ತು ದಕ್ಷಿಣ ಭಾರತ ಚಿತ್ರರಂಗದ ಮಂದಿ ಕಾಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.