
ನಟ ದಿಲೀಪ್ ಶೆಟ್ಟಿ, ರಮಿಕಾ ಶಿವು
ಚಿತ್ರ: ಇನ್‌ಸ್ಟಾಗ್ರಾಂ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ನೀನಾದೆ ನಾ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ದಿಲೀಪ್ ಶೆಟ್ಟಿ ಹಾಗೂ ನಟಿ ರಮಿಕಾ ಶಿವು ಅವರು ಹೊಸ ಹೋಟೆಲ್ ಅನ್ನು ಉದ್ಘಾಟಿಸಿದ್ದಾರೆ.
ನಟ ದಿಲೀಪ್ ಶೆಟ್ಟಿ, ರಮಿಕಾ ಶಿವು
ದಿಲೀಪ್ ಶೆಟ್ಟಿ, ರಮಿಕಾ ಶಿವು ಅವರು ಜೋಡಿಯಾಗಿ ಆರಂಭಿಸಿರುವ 'ದೊಡ್ಡಮನೆ ಊಟ-ಮನದ ಹಿತದ ಊಟ' ಹೋಟೆಲ್ ಅನ್ನು ಇಂದು (ಶುಕ್ರವಾರ, 16ರಂದು) ಉದ್ಘಾಟನೆ ಮಾಡಿದ್ದಾರೆ. ಈ ದೊಡ್ಡಮನೆ ಊಟ ಹೋಟೆಲ್ ವಿಳಾಸ ‘60 ಅಡಿ ರಸ್ತೆ, ಸಹಕಾರ ನಗರ, ಡೊಮಿನೋಸ್ ಹತ್ತಿರವಿದೆ. ಈ ಸಮಾರಂಭಕ್ಕೆ ಕಿರುತೆರೆ ನಟ ಹಾಗೂ ನಟಿಯರು ಆಗಮಸಿ ಶುಭ ಹಾರೈಸಿದ್ದಾರೆ.
ದೊಡ್ಡಮನೆ ಊಟ ಹೋಟೆಲ್ ಉದ್ಘಾಟಿಸಿದ ಫೋಟೊಗಳನ್ನು ನಟಿ ರಮಿಕಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ‘ಇದು ಆರಂಭಕ್ಕಿಂತ ಹೆಚ್ಚಿನದು. ಇದು ಒಂದು ಭಾವನೆ. ನನ್ನಲ್ಲಿ ನಂಬಿಕೆ ಇರಿಸಿ ಮುಂದುವರಿಯಲು ಧೈರ್ಯ ನೀಡಿದ ಪ್ರತಿಯೊಬ್ಬ ವ್ಯಕ್ತಿಗೂ ಧನ್ಯವಾದಗಳು. ಆಶೀರ್ವಾದ ಮತ್ತು ಕೃತಜ್ಞತೆಯೊಂದಿಗೆ ನನ್ನ ಹೊಸ ಪ್ರಯಾಣ ಪ್ರಾರಂಭವಾಗುತ್ತದೆ’ ಎಂದು ಬರೆದುಕೊಂಡಿದ್ದಾರೆ.
ಇದೇ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನಟಿ ಹಾಗೂ ನಟನ ಹೊಸ ಕೆಲಸಕ್ಕೆ ಅಭಿಮಾನಿಗಳು ಕಮೆಂಟ್ ಮೂಲಕ ಶುಭ ಹಾರೈಸುತ್ತಿದ್ದಾರೆ.
ನೀನಾದೆ ನಾ ಧಾರಾವಾಹಿಯಲ್ಲಿ ವಿಕ್ರಮ್ ಪಾತ್ರದಲ್ಲಿ ನಟ ದಿಲೀಪ್ ಶೆಟ್ಟಿ ನಟಿಸಿದ್ದರು. ವೇದಾ ಪಾತ್ರದಲ್ಲಿ ನಟಿ ರಮಿಕಾ ಶಿವು ಕಾಣಿಸಿಕೊಂಡಿದ್ದರು. ಈ ಜೋಡಿ ಧಾರಾವಾಹಿಯಲ್ಲಷ್ಟೇ ಅಲ್ಲದೇ ನಿಜ ಜೀವನದಲ್ಲೂ ಆತ್ಮೀಯರಾಗಿದ್ದಾರೆ. ಇತ್ತೀಚೆಗೆ ನಟಿ ಖುಷಿ ಶಿವು ಬದಲು ರಮಿಕಾ ಶಿವು ಎಂದು ತಮ್ಮ ಹೆಸರನ್ನೇ ಬದಲಾಯಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.