ADVERTISEMENT

ಮೈಸೂರಿನ ನಂಜುಂಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ನಟ ಸೂರಜ್ ಸಿಂಗ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಫೆಬ್ರುವರಿ 2026, 5:47 IST
Last Updated 4 ಫೆಬ್ರುವರಿ 2026, 5:47 IST
   

ಬಿಗ್‌ಬಾಸ್ ಸ್ಪರ್ಧಿ, ನಟ ಸೂರಜ್ ಸಿಂಗ್ ಅವರು ಮೈಸೂರಿನ  ನಂಜುಂಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಸೂರಜ್ ಅವರು ನಂಜುಂಡೇಶ್ವರ ದೇವಾಲಯಕ್ಕೆ ಭೇಟಿ ನೀಡಿರುವ ವಿಡಿಯೊವನ್ನು  ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ‘ಜೀವನದ ಮುಂದಿನ ಹೆಜ್ಜೆಗೆ ನಂಜುಂಡೇಶ್ವರನ ಆಶೀರ್ವಾದದೊಂದಿಗೆ' ಎಂಬ ಅಡಿಬಹರ ನೀಡಿದ್ದಾರೆ.

ಸೂರಜ್ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಇವರನ್ನು ಕಂಡು ಅಲ್ಲಿದ್ಧ ಜನರುಪ್ರೀತಿ, ಅಭಿಮಾನ ತೋರಿದ್ದಾರೆ. ಒಂದಿಷ್ಟು ಮಂದಿ ಇವರ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿ ಬಿದ್ದಿರುವುದನ್ನು ವಿಡಿಯೊದಲ್ಲಿ ಕಾಣಬಹುದು.

ಈ ಮೊದಲು ಬಾಣಸಿಗನಾಗಿ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿದ್ದ ಸೂರಜ್ ಸಿಂಗ್ ಅವರು ಬಿಗ್‌ಬಾಸ್‌ನಿಂದ ಹೊರಬರುತ್ತಿದ್ದಂತೆ ಧಾರಾವಾಹಿಯೊಂದರಲ್ಲಿ ನಾಯಕನಾಗಿ ಅವಕಾಶ ಪಡೆದುಕೊಂಡಿದ್ದರು. ‘ಪವಿತ್ರ ಬಂಧನ’  ಎಂಬ ಧಾರಾವಾಹಿಯಲ್ಲಿ  ದೇವದತ್ ದೇಶಮುಖ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರಿಗೆ ನಾಯಕಿಯಾಗಿ ಅಮೂಲ್ಯ ಭಾರದ್ವಾಜ್  ಹಾಗೂ ತಿಲಕ್ ಅವರು ಸಹೋದರ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.