ADVERTISEMENT

ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ಹೊರಬಂದ ನಟಿ ಮಾನಸ ಮನೋಹರ್: ಕಾರಣವೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಫೆಬ್ರುವರಿ 2026, 7:16 IST
Last Updated 25 ಫೆಬ್ರುವರಿ 2026, 7:16 IST
<div class="paragraphs"><p>ಲಕ್ಷ್ಮೀ ನಿವಾಸ ಧಾರಾವಾಹಿ ನಟಿ&nbsp;ಮಾನಸ ಮನೋಹರ್</p></div>

ಲಕ್ಷ್ಮೀ ನಿವಾಸ ಧಾರಾವಾಹಿ ನಟಿ ಮಾನಸ ಮನೋಹರ್

   

ಚಿತ್ರ: ಇನ್‌ಸ್ಟಾಗ್ರಾಂ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಿಂದ ನಟಿ ಮಾನಸ ಮನೋಹರ್ ಅವರು ಹೊರ ಬಂದಿದ್ದಾರೆ. ನೀಲು ಪಾತ್ರದಲ್ಲಿ ನಟಿಸಿ ಜನಪ್ರಿಯತೆ ಪಡೆದುಕೊಂಡಿದ್ದ ನಟಿ ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ADVERTISEMENT

ಮಾನಸ ಮನೋಹರ್ ಅವರು ಧಾರಾವಾಹಿಯಿಂದ ಹೊರಬರಲು ಒಂದು ಕಾರಣವಿದೆ. ಅದೇನೆಂದರೆ ನಟಿ ಮಾನಸ ಮನೋಹರ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ನಟಿ ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಕೊನೆಯ ದಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ನೆನಪನ್ನು ನಟಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಲಕ್ಷ್ಮೀ ನಿವಾಸ ಧಾರಾವಾಹಿ ನಟಿ ಮಾನಸ ಮನೋಹರ್

ನಟಿ ಮಾನಸ ಮನೋಹರ್ ಪೋಸ್ಟ್‌ನಲ್ಲಿ ಏನಿದೆ?

‘ಜನವರಿ 10ರಂದು ಲಕ್ಷ್ಮೀ ನಿವಾಸ ಧಾರಾವಾಹಿಯ ಕೊನೆಯ ದಿನದ ಚಿತ್ರೀಕರಣದ ಕೆಲವು ಚಿತ್ರಗಳು ಇಲ್ಲಿವೆ. ಆ ಕೊನೆಯ ದಿನದ ಅಂತಿಮ ಸಂಚಿಕೆಗಳಿಗಾಗಿ ನಾನು ನೀಲಿ ಸೀರೆಯನ್ನು ಧರಿಸಲು ಬಯಸಿದ್ದೆ. ಏಕೆಂದರೆ ಇಲ್ಲಿ ನನ್ನ ಪಾತ್ರದ ಹೆಸರು ‘ನೀಲು’ ಮತ್ತು ಮುಖ್ಯವಾಗಿ ಈ ಸೀರೆಯನ್ನು ನನಗೆ ಉಡುಗೊರೆಯಾಗಿ ನೀಡಿದ್ದು ಬ್ಲಾಕ್ ಡ್ರಾಗನ್ ಚಿರು ಅವರು. ಲಕ್ಷ್ಮಿ ನಿವಾಸ ಚಿತ್ರೀಕರಣದ ಸಮಯದಲ್ಲಿ ನನ್ನ ಸಹಾಯಕರಾಗಿ ಬಂದವರು. ಕೊನೆಗೆ ಎಲ್ಲಾ ರೀತಿಯಲ್ಲೂ ನನ್ನ ಸಹೋದರರಾದರು. ಎರಡನೆಯದಾಗಿ ನಾನು ನೀಲಿ ಸೀರೆ ಜೊತೆಗೆ ಈ ಆಭರಣವನ್ನು ಧರಿಸಿಕೊಂಡೆ. ಅದು ಧಾರಾವಾಹಿಯಲ್ಲಿ ನಾನು ಭೇಟಿಯಾದ ಅಂಜಲಿ ಅಮ್ಮ ನೀಡಿದ ಉಡುಗೊರೆ ಮತ್ತು ನಾವು ಸಹ ನಟಿರಿಗಿಂತ ಹೆಚ್ಚಾಗಿ ಕುಟುಂಬಸ್ಥರಾಗಿದ್ದೇವೆ. ಒಟ್ಟಾರೆಯಾಗಿ ಒಳ್ಳೆಯದಾಗಿ ಪ್ರಾರಂಭಗೊಂಡು, ಉತ್ತಮವಾಗಿ ಕೊನೆಗೊಂಡಿದೆ’ ಎಂದು ಬರೆದುಕೊಂಡಿದ್ದಾರೆ.

ಲಕ್ಷ್ಮೀ ನಿವಾಸ ಧಾರಾವಾಹಿ ನಟಿ ಮಾನಸ ಮನೋಹರ್

ಮಾನಸಾ ಮನೋಹರ್ ಅವರು ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ‘ಮೀರಾ’ ಪಾತ್ರದಲ್ಲಿ ನಟಿಸಿದ ಬಳಿಕ ‘ಲಕ್ಷ್ಮೀ ನಿವಾಸ’ದಲ್ಲಿ ಖಳನಾಯಕಿಯಾಗಿ ನೀಲು ಪಾತ್ರದ ಮೂಲಕ ರಂಜಿಸಿದ್ದರು. 2024ರಲ್ಲಿ ಉದ್ಯಮಿ ಪ್ರೀತಂ ಚಂದ್ರ ಎಂಬುವವರ ಜೊತೆಗೆ ಎರಡನೇ ಮದುವೆಯಾಗಿದ್ದರು. ಸದ್ಯ ನಟಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಜೊತೆಗೆ ಗರ್ಭಾವಸ್ಥೆಯ ಪಯಣದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.