ADVERTISEMENT

‘ನಾಗಿಣಿ 2’ ಧಾರಾವಾಹಿಗೆ ಆರು ವರ್ಷದ ಸಂಭ್ರಮ: ನಟಿ ನಮ್ರತಾ ಗೌಡ ವಿಶೇಷ ಪೋಸ್ಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಫೆಬ್ರುವರಿ 2026, 7:37 IST
Last Updated 17 ಫೆಬ್ರುವರಿ 2026, 7:37 IST
<div class="paragraphs"><p>ನಮ್ರತಾ ಗೌಡ </p></div>

ನಮ್ರತಾ ಗೌಡ

   

ಚಿತ್ರ: ಇನ್‌ಸ್ಟಾಗ್ರಾಂ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ‘ನಾಗಿಣಿ 2’ ಮರೆಯಾಗದೆ ಉಳಿದುಕೊಂಡಿದೆ. ನಾಗಿಣಿ 2 ಧಾರಾವಾಹಿಗೆ ಆರು ವರ್ಷಗಳು ಭರ್ತಿಯಾಗಿವೆ. ಆರು ವರ್ಷಗಳನ್ನು ಪೂರೈಸಿದ ನಾಗಿಣಿ 2 ಧಾರಾವಾಹಿ ಕುರಿತು ನಟಿ ನಮ್ರತಾ ಗೌಡ ವಿಶೇಷ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ.

ADVERTISEMENT

ನಮ್ರತಾ ಗೌಡ

ನಮ್ರತಾ ಗೌಡ ಅವರು ನಾಗಿಣಿ 2 ಧಾರಾವಾಹಿ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದರು. ಈ ಮೂಲಕವೇ ನಟಿ ಬಿಗ್‌ಬಾಸ್‌ ಮನೆಗೆ ಕಾಲಿಟ್ಟು ಜನಪ್ರಿಯತೆ ಪಡೆದುಕೊಂಡರು. ಇದೀಗ ನಾಗಿಣಿ ಧಾರಾವಾಹಿಯಲ್ಲಿ ಕಳೆದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ನಮ್ರತಾ ಗೌಡ

6 ವರ್ಷ ಹಿಂದಿನ ನಾಗಿಣಿ-2 ಧಾರಾವಾಹಿಯ ಮೇಕಿಂಗ್ ಕ್ಷಣದ ಫೋಟೋಗಳನ್ನು ನಮ್ರತಾ ಗೌಡ ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕನ್ನಡ ಕಿರುತೆರೆ ಲೋಕದಲ್ಲಿ ನಾಗಿಣಿ 2 ಧಾರಾವಾಹಿ ಮೇಕಿಂಗ್​ ವಿಚಾರದಲ್ಲಿ ಸಿನಿಮಾಗಳಿಗೆ ಪೈಪೋಟಿ ನೀಡಿತ್ತು. ಇದೇ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಗಳಲ್ಲಿ ಶಿವಾನಿ ಪಾತ್ರಕ್ಕೆ ನಮೃತಾ ಗೌಡ ಬಣ್ಣ ಹಚ್ಚಿದ್ದರು. ತ್ರಿಶೂಲ್​ ಪಾತ್ರದಲ್ಲಿ ನಿನಾದ್​ ಅಭಿನಯಿಸಿದ್ದರು.

ಅಲ್ಲದೇ ನಾಗಿಣಿ 2 ಧಾರಾವಾಹಿಯಲ್ಲಿ ‘ಅಶ್ವಿನಿ ನಕ್ಷತ್ರ’ ಖ್ಯಾತಿಯ ಸೂಪರ್ ಸ್ಟಾರ್ ಜೆಕೆ ಅವರು ನಾಗಿಣಿಯ ನಾಗರಾಜನಾಗಿಯೇ ಅಭಿನಯಿಸಿದ್ದರು. ಇದೇ ಚಿತ್ರಗಳನ್ನು ನಟಿ ಪೋಸ್ಟ್‌ ಮಾಡುವ ಮೂಲಕ ಧಾರಾವಾಹಿ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.