ADVERTISEMENT

‘ಅಮ್ಮ’ ಎಂಬ ಪದ ಸಾಕು: ನಟಿ ಐಶ್ವರ್ಯ ಸಿಂಧೋಗಿ ಭಾವುಕ ಪೋಸ್ಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಫೆಬ್ರುವರಿ 2026, 6:51 IST
Last Updated 26 ಫೆಬ್ರುವರಿ 2026, 6:51 IST
<div class="paragraphs"><p>ಅಮ್ಮನೊಂದಿಗೆ&nbsp;ನಟಿ ಐಶ್ವರ್ಯ ಸಿಂಧೋಗಿ </p></div>

ಅಮ್ಮನೊಂದಿಗೆ ನಟಿ ಐಶ್ವರ್ಯ ಸಿಂಧೋಗಿ

   

ಚಿತ್ರ: ಇನ್‌ಸ್ಟಾಗ್ರಾಂ

ಕನ್ನಡ ಕಿರುತೆರೆ ನಟಿ, ಬಿಗ್‌ಬಾಸ್ ಮಾಜಿ ಸ್ಪರ್ಧಿ ಐಶ್ವರ್ಯ ಸಿಂಧೋಗಿ ಅವರು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ ಐಶ್ವರ್ಯ ಅವರು ತಂದೆ ತಾಯಿಗೆ ಒಬ್ಬಳೆ ಮಗಳಾಗಿದ್ದರು.

ADVERTISEMENT

ಅಮ್ಮನೊಂದಿಗೆ ನಟಿ ಐಶ್ವರ್ಯ ಸಿಂಧೋಗಿ

ಐಶ್ವರ್ಯಾ ಸಿಂಧೋಗಿ ಅವರ ತಂದೆ ಮೃತಪಟ್ಟ ಎರಡೇ ವರ್ಷಕ್ಕೆ ತಾಯಿ ಕೂಡ ನಿಧನರಾದರು. ಆಗ ನಟಿ ಅಪ್ಪ-ಅಮ್ಮ ಇಲ್ಲದೆ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಆಗಾಗ ಸಾಮಾಜಿಕ ಮಾಧ್ಯಮದಲ್ಲಿ ಅಪ್ಪ–ಅಮ್ಮನ ಜೊತೆಗೆ ಕ್ಲಿಕ್ಕಿಸಿಕೊಂಡ ಫೋಟೊಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಅಮ್ಮನ ಹುಟ್ಟುಹಬ್ಬಕ್ಕೆ ಐಶ್ವರ್ಯಾ ಸಿಂಧೋಗಿ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಆ ಫೋಟೊದಲ್ಲಿ ಐಶ್ವರ್ಯಾ ಸಿಂಧೋಗಿ ಅವರು ಅಮ್ಮನ ಜೊತೆಗೆ ಕಳೆದ ಒಂದಿಷ್ಟು ಅಪರೂಪದ ಕ್ಷಣವನ್ನು ಹಂಚಿಕೊಂಡಿದ್ದಾರೆ. ಅದರ ಜೊತೆಗೆ ‘ವ್ಯಾಖ್ಯಾನ ಬೇಕಾಗಿಲ್ಲ, ಲಿಪಿ ಬೇಕಾಗಿಲ್ಲ, ವಿವರಣೆ ಬೇಕಾಗಿಲ್ಲ ‘ಅಮ್ಮ’ ಎಂಬ ಪದ ಸಾಕು. ಆ ಪದವು ಹೃದಯದ ಸಾರ್ವತ್ರಿಕ ಭಾಷೆಯಾಗಿದ್ದು ಅದು ಸಾವಿರ ಭಾವನೆಗಳನ್ನು ಮಾತನಾಡುತ್ತದೆ ಮತ್ತು ಹೃದಯಕ್ಕೆ ಸಾಂತ್ವನ ಮತ್ತು ಸಂತೋಷವನ್ನು ತರುತ್ತದೆ. ಮೇಲಿನ ನನ್ನ ದೇವತೆಗೆ ಹುಟ್ಟುಹಬ್ಬದ ಶುಭಾಶಯಗಳು. ನನ್ನ ಬಗ್ಗೆ ಏನನ್ನಾದರೂ ಹೊಗಳುವ ಮತ್ತು ಪ್ರೀತಿಸುವ ಎಲ್ಲರಿಗೂ ನಾನು ಅದನ್ನು ನನ್ನ ಅಮ್ಮನಿಂದ ಪಡೆದುಕೊಂಡೆ’ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಅಮ್ಮನೊಂದಿಗೆ ನಟಿ ಐಶ್ವರ್ಯ ಸಿಂಧೋಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.