ಅಮೃತಧಾರೆ ಧಾರಾವಾಹಿ
ಚಿತ್ರ: ಜೀ ಕನ್ನಡ ಇನ್‌ಸ್ಟಾಗ್ರಾಮ್
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಅಮೃತಧಾರೆ’ ಧಾರಾವಾಹಿಯು ವೀಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡು ಮುನ್ನುಗ್ಗುತ್ತಿದೆ. ದಿನದಿಂದ ದಿನಕ್ಕೆ ಅಮೃತಾಧಾರೆ ಧಾರಾವಾಹಿಯು ವೀಕ್ಷಕರಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡುತ್ತಿದೆ.
ಚಿತ್ರ: dushyanth_chakravarthi
ವೀಕ್ಷಕರಂತೂ ಗೌತಮ್ ಹಾಗೂ ಭೂಮಿಕಾ ಯಾವಾಗ ಒಂದಾಗುತ್ತಾರೆ ಎಂದು ಕಾಯುತ್ತಿದ್ದಾರೆ. ಈಗಾಗಲೇ ತನ್ನ ಮಗ ಯಾರೆಂದು ಗೌತಮ್ ದಿವಾನ್‌ಗೆ ಗೊತ್ತಾಗಿದೆ. ಇಷ್ಟು ದಿನ ತಮಾಷೆಯಾಗಿ ಮಾತಾಡಿಕೊಂಡಿದ್ದ ಹುಡುಗನೇ ತನ್ನ ಮಗ ಎಂಬ ವಿಷಯ ತಿಳಿದು ಗೌತಮ್ ಭಾವುಕನಾಗಿದ್ದನು. ಸದ್ಯ ಗೌತಮ್, ಭೂಮಿಕಾಳ ಮನವೊಲಿಸುವ ಪ್ರಯತ್ನದಲ್ಲಿದ್ದಾನೆ.
ಇನ್ನು, ವಿಶೇಷ ಏನೆಂದರೆ ತಂದೆ ಹಾಗೂ ಮಗ ಅಮೃತಧಾರೆ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಮಗ ಆಕಾಶ್ ಪಾತ್ರದಲ್ಲಿ ಬಾಲನಟ ದುಷ್ಯಂತ ಚಕ್ರವರ್ತಿ ನಟಿಸುತ್ತಿದ್ದಾನೆ.
ಚಿತ್ರ: dushyanth_chakravarthi
ಬಾಲನಟ ದುಷ್ಯಂತ ಚಕ್ರವರ್ತಿ ಯಾರು?
ಈ ದುಷ್ಯಂತ ಚಕ್ರವರ್ತಿ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 3ರ ಮೊದಲ ರನ್ನರ್ ಅಪ್ ಆಗಿದ್ದರು. ಇದಾದ ಬಳಿಕ ನಿನಗಾಗಿ ಧಾರಾವಾಹಿಯಲ್ಲೂ ಅಭಿನಯಿಸಿದ್ದಾನೆ. ಅಷ್ಟೇ ಅಲ್ಲದೇ ಜೀ ತಮಿಳಿನಲ್ಲಿ ಪ್ರಸಾರವಾಗುತ್ತಿರುವ ‘ಗೆಟ್ಟಿಮೇಳಂ’ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದಾನೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಗೌರಿಶಂಕರದಲ್ಲಿ ಗುಂಡ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾನೆ. ಸದ್ಯ ಅಮೃತಧಾರೆ ಧಾರಾವಾಹಿಯಲ್ಲಿ ಆಕಾಶ್ ಪಾತ್ರದಲ್ಲಿ ಬಾಲನಟ ದುಷ್ಯಂತ ಚಕ್ರವರ್ತಿ ನಟಿಸುತ್ತಿದ್ದಾನೆ.
ಚಿತ್ರ: sillilallianand
ಬಾಲನಟ ದುಷ್ಯಂತ ಚಕ್ರವರ್ತಿ ತಂದೆ ಯಾರು?
ಬಾಲನಟ ದುಷ್ಯಂತ ಚಕ್ರವರ್ತಿ ತಂದೆ ಕೂಡ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಹೌದು, ಸಿಲ್ಲಿ ಲಲ್ಲಿ ಧಾರಾವಾಹಿಯ ಮೂಲಕ ಅತೀ ಹೆಚ್ಚು ಜನಪ್ರಿಯತೆ ಪಡೆದುಕೊಂಡ ಆನಂದ್ ಅವರೇ ದುಷ್ಯಂತ ಚಕ್ರವರ್ತಿ ತಂದೆ. ರಂಗಭೂಮಿ ಕಲಾವಿದರಾಗಿದ್ದ ಆನಂದ್ ಅವರು ಕ್ವಾಟ್ಲೆ ಸತೀಶ, ವಜ್ರಕಾಯ ಭಜರಂಗಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರ ಜೊತೆಗೆ ಕನ್ನಡ, ತಮಿಳಿನ ಧಾರಾವಾಹಿಗಳಲ್ಲೂ ನಟಿಸುತ್ತಿದ್ದಾರೆ. ಸದ್ಯ ಆನಂದ್ ಅವರು ಅಮೃತಧಾರೆಯಲ್ಲಿ ಅಭಿನಯಿಸುತ್ತಿದ್ದಾರೆ. ವಿಶೇಷ ಏನೆಂದರೆ ಒಂದೇ ಧಾರಾವಾಹಿಯಲ್ಲಿ ತಂದೆ ಹಾಗೂ ಮಗ ನಟಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.
ಅಮೃತಧಾರೆ ಧಾರಾವಾಹಿಯಲ್ಲಿ ನಟಿಸುತ್ತಿರುವ ತಂದೆ ಹಾಗೂ ಮಗನ ಅಭಿನಯಕ್ಕೆ ವೀಕ್ಷಕರು ಕೂಡ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ತಂದೆ ಹಾಗೂ ಮಗನ ನಟನೆ ಬಗ್ಗೆ ಅಭಿಮಾನಿಗಳು ಕಾಮೆಂಟ್ಸ್ ಮೂಲಕ ಹಾಡಿ ಹೊಗಳುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.