ಕನ್ನಡ ಅನೇಕ ಧಾರಾವಾಹಿಗಳಲ್ಲಿ ನಟಿಸಿ ಕನ್ನಡಿಗರಿಗೆ ಪರಿಚಿತರಾಗಿದ್ದ ಅಮೂಲ್ಯ ಭಾರದ್ವಾಜ್ ಸದ್ಯ ಪವಿತ್ರ ಬಂಧನದಲ್ಲಿ ಸೂರಜ್ ಸಿಂಗ್‌ಗೆ ಜೋಡಿಯಾಗಿದ್ದಾರೆ.
ಚಿತ್ರ ಕೃಪೆ: ಇನ್‌ಸ್ಟಾಗ್ರಾಂ
ಕನ್ನಡದ ಕಿರುತೆರೆ ನಟಿಯಾದ ಅಮೂಲ್ಯ ಭಾರದ್ವಾಜ್ ಅವರು ತಮ್ಮ ಮುಗ್ಧತೆಯ ಪಾತ್ರದಿಂದಲೇ ಜನರ ಮನಸ್ಸನ್ನು ಗೆದ್ದಿದ್ದಾರೆ. ಕನ್ನಡದ ಪ್ರಮುಖ ಧಾರಾವಾಹಿಗಳಲ್ಲಿ ನಟಿಸಿರುವ ಅಮೂಲ್ಯ ‘ಪುರಂದರದಾಸ’ ಮೂಲಕ ಕಿರುತೆರೆಗೆ ಕಾಲಿಟ್ಟರು.
ಮೈಸೂರಿನ ಬೆಡಗಿ ಅಮೂಲ್ಯ ಭಾರದ್ವಾಜ್ ಸುಮಾರು 50ಕ್ಕೂ ಹೆಚ್ಚು ಆಡಿಷನ್‌ಗಳಲ್ಲಿ ಭಾಗವಹಿಸಿ ರಿಜೆಕ್ಟ್ ಆಗಿದ್ದರು. ನಂತರ ಅವರಿಗೆ ‘ಪುರಂದರದಾಸ’ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಇವರು ಬಿಕಾಂನಲ್ಲಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ.
ಮೊದಲ ಧಾರಾವಾಹಿ ಪುರಂದರದಾಸದಲ್ಲಿ ಪುರಂದರನ ಪತ್ನಿಯಾಗಿ ನಟಿಸಿ ಚಿರಪರಿಚಿತರಾಗಿದ್ದರು. ನಂತರ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಬೃಂದಾವನ’ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿ ಎಲ್ಲರ ಗಮನ ಸೆಳೆದಿದ್ದರು. ಸದ್ಯ ‘ಪವಿತ್ರ ಬಂಧನ’ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಬಿಗ್‌ಬಾಸ್ ಸೀಸನ್ 12 ರ ಸ್ಫರ್ಧಿ ಸೂರಜ್ ಸಿಂಗ್ ಅವರ ಮೊದಲ ಧಾರಾವಾಹಿ ‘ಪವಿತ್ರ ಬಂಧನ’ದಲ್ಲಿ ಜೋಡಿಯಾಗಿ ಅಮೂಲ್ಯ ಭಾರದ್ವಾಜ್ ಅಭಿನಯಿಸುತ್ತಿದ್ದಾರೆ. ಧಾರಾವಾಹಿಯಲ್ಲಿ ದೇವದತ್ ದೇಶಮುಖ್ ಎಂಬ ಪಾತ್ರದಲ್ಲಿ ಸೂರಜ್ ಸಿಂಗ್ ನಟಿಸುತ್ತಿದ್ದಾರೆ. ಅಮೂಲ್ಯ ಅವರು ಪವಿತ್ರಾ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ದೇವದತ್ ಹಾಗೂ ತಿಲಕ್ ಇಬ್ಬರು ಅಣ್ಣ-ತಮ್ಮ ಆಗಿರುತ್ತಾರೆ. ಇಬ್ಬರೂ ಆತ್ಮೀಯರಾಗಿರುತ್ತಾರೆ. ತಿಲಕ್ ಹಾಗೂ ಪವಿತ್ರಾ ಪ್ರೀತಿಸುತ್ತಿರುತ್ತಾರೆ. ಆದರೆ ಕೊನೆಯ ಕ್ಷಣದಲ್ಲಿ ದೇವದತ್ ಅನ್ನು ಮದುವೆಯಾಗುವ ಪರಿಸ್ಥಿತಿ ಎದುರಾಗುತ್ತದೆ. ಇದು ಪವಿತ್ರ ಬಂಧನ ಧಾರಾವಾಹಿಯ ಆರಂಭಿಕ ಕಥೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.