ADVERTISEMENT

‘ಅನುಬಂಧ ಅವಾರ್ಡ್ಸ್‌’ ಸಂಭ್ರಮ: ಒಂದೇ ವೇದಿಕೆ ಮೇಲೆ ದಿಗ್ಗಜರ ಸಮಾಗಮ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜನವರಿ 2026, 12:42 IST
Last Updated 24 ಜನವರಿ 2026, 12:42 IST
<div class="paragraphs"><p>ಅನುಬಂಧ ಅವಾರ್ಡ್ಸ್‌ ಸಂಭ್ರಮ</p></div>

ಅನುಬಂಧ ಅವಾರ್ಡ್ಸ್‌ ಸಂಭ್ರಮ

   

ಕನ್ನಡ ಕಿರುತೆರೆಯ ಜನಪ್ರಿಯ ವಾಹಿನಿ ‘ಕಲರ್ಸ್‌ ಕನ್ನಡ’, ತನ್ನ 12ನೇ ವರ್ಷದ ‘ಅನುಬಂಧ ಅವಾರ್ಡ್ಸ್‌’ ಸಂಭ್ರಮಕ್ಕೆ ಸಜ್ಜಾಗಿದೆ. ಜನವರಿ 24, 25 ಮತ್ತು 26ರಂದು ಸತತ ಮೂರು ದಿನಗಳ ಕಾಲ ಸಂಜೆ 7ಕ್ಕೆ ಅದ್ಧೂರಿ ಕಾರ್ಯಕ್ರಮ ಪ್ರಸಾರವಾಗಲಿದ್ದು, ಮನರಂಜನೆಯ ಮಹಾಪೂರವೇ ಹರಿಯಲಿದೆ. ಈ ಬಾರಿಯ ಅವಾರ್ಡ್ಸ್‌ನಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಅನುಬಂಧ ಅವಾರ್ಡ್ಸ್‌ ಕಾರ್ಯಕ್ರಮ

ADVERTISEMENT

ಅನುಬಂಧ ಅವಾರ್ಡ್ಸ್‌ ಕೇವಲ ಒಂದು ಪ್ರಶಸ್ತಿ ಪ್ರದಾನ ಸಮಾರಂಭವಲ್ಲ. ಬದಲಿಗೆ ಕಲರ್ಸ್‌ ಕನ್ನಡ ಮತ್ತು ಅದರ ಕೋಟ್ಯಂತರ ವೀಕ್ಷಕರ ನಡುವಿನ ಅವಿನಾಭಾವ ಸಂಬಂಧದ ಸಂಭ್ರಮ.

ಮುಖ್ಯಮಂತ್ರಿ ಚಂದ್ರು ಹಾಗೂ ಸುಷ್ಮಾ ರಾವ್‌ಗೆ ವಿಶೇಷ ಗೌರವ

ಕಲರ್ಸ್‌ ಕನ್ನಡದ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯ ಇಬ್ಬರು ಪ್ರಮುಖ ಕಲಾವಿದರು ಈ ಬಾರಿ ವಿಶೇಷ ಮೈಲಿಗಲ್ಲು ತಲುಪಿದ್ದಾರೆ. ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ಬಣ್ಣದ ಲೋಕದಲ್ಲಿ 50 ವರ್ಷಗಳನ್ನು ಪೂರೈಸಿದರೆ, ‘ಭಾಗ್ಯ’ ಪಾತ್ರದ ಮೂಲಕ ಮನೆಮಾತಾಗಿರುವ ಸುಷ್ಮಾ ರಾವ್ ಅವರು ಕಿರುತೆರೆಯಲ್ಲಿ 25 ವರ್ಷಗಳ ಸುದೀರ್ಘ ಪಯಣ ಪೂರೈಸಿದ್ದಾರೆ. ಈ ಸಾಧನೆಯನ್ನು ಗುರುತಿಸಿ ವೇದಿಕೆಯ ಮೇಲೆ ಇಬ್ಬರಿಗೂ ಗೌರವ ಸಲ್ಲಿಸಲಾಯಿತು.

‘ರಾಮಾಚಾರಿ’ಗೆ ಸಾವಿರದ ಸಂಭ್ರಮ

ಕಿರುತೆರೆಯಲ್ಲಿ ಇತಿಹಾಸ ಸೃಷ್ಟಿಸಿದ ‘ರಾಮಾಚಾರಿ’ ಧಾರಾವಾಹಿ 1,000 ಸಂಚಿಕೆಗಳನ್ನು ಪೂರೈಸಿದ ಸಂಭ್ರಮದಲ್ಲಿದೆ. ಈ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಲು ಚಂದನವನದ ‘ಕ್ರೇಜಿಸ್ಟಾರ್’ ವಿ. ರವಿಚಂದ್ರನ್ ಆಗಮಿಸಿದ್ದು ವಿಶೇಷವಾಗಿತ್ತು. ಸೀನಿಯರ್ ರಾಮಾಚಾರಿ ಮತ್ತು ಜೂನಿಯರ್ ರಾಮಾಚಾರಿ ಒಂದೇ ವೇದಿಕೆಯ ಮೇಲೆ ಕಾಣಿಸಿಕೊಂಡಿದ್ದು ವೀಕ್ಷಕರ ಖುಷಿ ಹೆಚ್ಚಿಸಿದೆ.

ಅನುಬಂಧ ಅವಾರ್ಡ್ಸ್‌ ಕಾರ್ಯಕ್ರಮ

‘ಸು ಫ್ರಂ ಸೋ’ ಚಿತ್ರತಂಡಕ್ಕೆ ವಿಶೇಷ ಪ್ರಶಸ್ತಿ

ಕಳೆದ ವರ್ಷ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ‘ಸು ಫ್ರಂ ಸೋ’ ಸಿನಿಮಾ ತಂಡಕ್ಕೂ ಈ ಬಾರಿ ಅನುಬಂಧದ ವೇದಿಕೆಯಲ್ಲಿ ಮನ್ನಣೆ ಸಿಕ್ಕಿದೆ. ಚಿತ್ರಮಂದಿರ ಹಾಗೂ ಒಟಿಟಿಯಲ್ಲಿ ಸದ್ದು ಮಾಡಿದ್ದ ಈ ಚಿತ್ರದ ನಿರ್ದೇಶಕ ಜೆ.ಪಿ. ತೂಮಿನಾಡ್ ಮತ್ತು ಕಲಾವಿದರಾದ ಶನೀಲ್ ಗೌತಮ್, ಪುಷ್ಪರಾಜ್ ಬೋಳಾರ್ ಈ ಸಮಾರಂಭದ ಪ್ರಮುಖ ಆಕರ್ಷಣೆಯಾಗಿದ್ದರು.

ಪುನೀತ್ ಹೆಸರಿನ 'ಕಲರ್ಸ್‌ ಕನ್ನಡಿಗ' ಪ್ರಶಸ್ತಿ ಪ್ರದಾನ

ಪ್ರತಿವರ್ಷದಂತೆ ಈ ಬಾರಿಯೂ ದಿ. ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ನೀಡಲಾಗುವ ‘ಕಲರ್ಸ್‌ ಕನ್ನಡಿಗ’ ಪ್ರಶಸ್ತಿಯನ್ನು ಬಾಲ್ಯ ವಿವಾಹದ ವಿರುದ್ಧ ಹೋರಾಡುತ್ತಿರುವ ಬಾಗಲಕೋಟೆಯ ಗಟ್ಟಿಗಿತ್ತಿ ಗುರಮ್ಮ ಸಂಕಿನಮಠ ಅವರಿಗೆ ನೀಡಲಾಗಿದೆ. ಅವರ ಹೋರಾಟದ ಕತೆಯನ್ನು ಕೇಳಿ ಅಲ್ಲಿದ್ದ ಕಲಾವಿದರೆಲ್ಲರೂ ಭಾವುಕರಾದ ಕ್ಷಣ ಕಾರ್ಯಕ್ರಮದ ಅತ್ಯಂತ ಹೃದಯಸ್ಪರ್ಶಿ ಭಾಗವಾಗಿತ್ತು.

ಅನುಬಂಧ ಅವಾರ್ಡ್ಸ್‌ ಕಾರ್ಯಕ್ರಮ

ರಾಜ್ ಬಿ. ಶೆಟ್ಟಿಗೆ ಅಮ್ಮನಿಂದ ಅಚ್ಚರಿ; ರೇಖಾ ಕಂಬ್ಯಾಕ್ ಕೌತುಕ

ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರಿಗೆ ವಾಹಿನಿಯು ಅವರ ತಾಯಿಯನ್ನು ವೇದಿಕೆಗೆ ಕರೆಸುವ ಮೂಲಕ ಅಚ್ಚರಿ ನೀಡಿದೆ. ಇದರೊಂದಿಗೆ, ‘ಹುಚ್ಚ’ ಸಿನಿಮಾ ಖ್ಯಾತಿಯ ನಟಿ ರೇಖಾ ವೇದವ್ಯಾಸ್ ಸುದೀರ್ಘ ಕಾಲದ ನಂತರ ಈ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳುವ ಬಗ್ಗೆ ಮಾತನಾಡಿದ್ದು ಕುತೂಹಲ ಮೂಡಿಸಿದೆ.

ನಾ. ಸೋಮೇಶ್ವರ್‌ ಪ್ರಶ್ನೆಗೆ ಥಟ್‌ ಅಂತ ಹೇಳಿದ ಕಲಾವಿದರು

‘ಥಟ್ ಅಂತ ಹೇಳಿ’ ಕಾರ್ಯಕ್ರಮದ ಮೂಲಕ ನಾಡಿನಾದ್ಯಂತ ಖ್ಯಾತಿ ಪಡೆದ ಡಾ. ನಾ. ಸೋಮೇಶ್ವರ್‌, ಇದೀಗ ಕಲರ್ಸ್‌ ಕನ್ನಡದ ಅನುಬಂಧ ಅವಾರ್ಡ್ಸ್‌ ವೇದಿಕೆ ಮೇಲೆ ಗಂಭೀರವಾದ ಖಡಕ್‌ ಪ್ರಶ್ನೆ ಕೇಳುವ ಬದಲು ಫನ್ನಿಯಾಗಿಯೇ ಪ್ರಶ್ನೆ ಕೇಳಿ, ಕಲಾವಿದರಿಂದ ಸರಿ ಉತ್ತರ ಪಡೆದಿದ್ದಾರೆ. ಶಾಸಕ ಪ್ರದೀಪ್‌ ಈಶ್ವರ್‌ ರಾಜಕೀಯ ಭಾಷಣ ಬದಿಗಿಟ್ಟು, ಅನುಬಂಧ ವೇದಿಕೆ ಮೇಲೆ ಕಾಮಿಡಿ ಕಚಗುಳಿಯಿಟ್ಟರು.

ಅನುಬಂಧ ಅವಾರ್ಡ್ಸ್‌ ಕಾರ್ಯಕ್ರಮ

ಚಂದನವನದ ಚೆಂದದ ಜೋಡಿಗಳ ಆಗಮನ

ಇದಷ್ಟೇ ಅಲ್ಲ ಸ್ಯಾಂಡಲ್‌ವುಡ್‌ನ ಸೆಲೆಬ್ರಿಟಿ ಜೋಡಿಯೂ ಈ ಸಲದ ಅನುಬಂಧ ಅವಾರ್ಡ್ಸ್‌ ಕಾರ್ಯಕ್ರಮದ ಕಳೆ ಹೆಚ್ಚಿಸಿದ್ದರು. ನಿರ್ದೇಶಕ ತರುಣ್‌ ಸುಧೀರ್-‌ ಸೋನಲ್‌ ಮೊಂತೆರೊ ಮತ್ತು ಅನು‌ ಪ್ರಭಾಕರ್- ರಘು ಮುಖರ್ಜಿ, ಅನುಬಂಧ ವೇದಿಕೆ ಮೇಲೆ ಆಗಮಿಸಿ, ತಮ್ಮ ಮತ್ತು ಕಲರ್ಸ್‌ ಬಂಧದ ಬಗ್ಗೆ ಮಾತನಾಡಿದರು.

ಈ ಬಾರಿಯ ಕಾರ್ಯಕ್ರಮದಲ್ಲಿ ಒಟ್ಟು 37 ಪ್ರಶಸ್ತಿಗಳನ್ನು ವಿತರಿಸಲಾಗಿದ್ದು, 15ಕ್ಕೂ ಹೆಚ್ಚು ಮನಮೋಹಕ ಪ್ರದರ್ಶನಗಳಿವೆ. ಗಿಚ್ಚಿ ಗಿಲಿಗಿಲಿ ತಂಡದ ಕಾಮಿಡಿ ಸ್ಕಿಟ್‌ಗಳು ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.