ನಟಿ ಅನುಶ್ರೀ, ಪತಿ ರೋಷನ್
ಚಿತ್ರ: anchor_anushreeofficial
ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಆಗಸ್ಟ್ 2ರಂದು ಕೊಡಗು ಮೂಲದ ರೋಷನ್ ಅವರ ಜೊತೆಗೆ ಮದುವೆಯಾಗಿದ್ದರು.
ಮದುವೆ ಬಳಿಕ ಅನುಶ್ರೀ ಅವರು ಮಹಾನಟಿ ಕಾರ್ಯಕ್ರಮಕ್ಕೆ ನಿರೂಪಣೆ ಮಾಡಲು ಹಾಜರಾಗಿದ್ದರು.
ಈಗ ಅನುಶ್ರೀ ಹಾಗೂ ರೋಷನ್ ಅವರು ಜೋಡಿಯಾಗಿ ಪ್ರಕೃತಿ ಸೌಂದರ್ಯ ಸವಿಯುತ್ತಿದ್ದಾರೆ.
ಜೊತೆಗೆ ಥಾರ್ ಮೇಲೆ ಕುಳಿತುಕೊಂಡು ಇಬ್ಬರು ಫೋಟೊಗೆ ಪೋಸ್ ಕೊಟ್ಟಿದ್ದಾರೆ.
ಈ ಫೋಟೊಗಳನ್ನು ನಿರೂಪಕಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಪತಿ ಜೊತೆಗೆ ಟ್ರ್ಯಾಕ್ಟರ್‌ನಲ್ಲಿ ಸುತ್ತಾಡಿ ಖುಷಿ ಪಟ್ಟಿದ್ದಾರೆ.
ಸದ್ಯ ಅನುಶ್ರೀ ಅವರು ಎಲ್ಲ ಕೆಲಸಕ್ಕೂ ವಿರಾಮ ಹೇಳಿ ಪತಿ ಜೊತೆಗೆ ಒಳ್ಳೆಯ ಸಮಯ ಕಳೆಯುತ್ತಿದ್ದಾರೆ.
ಅನುಶ್ರೀ ಅವರು ಹಂಚಿಕೊಂಡ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.