ADVERTISEMENT

ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಭರ್ಜರಿ ಬ್ಯಾಚ್ಯುಲರ್ಸ್ ಖ್ಯಾತಿಯ ಅಮ್ರಿಟಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಫೆಬ್ರುವರಿ 2026, 11:06 IST
Last Updated 14 ಫೆಬ್ರುವರಿ 2026, 11:06 IST
   

ಜೀ ಕನ್ನಡದಲ್ಲಿ ಪ್ರಸಾರವಾಗಿದ್ದ ಮಹಾನಟಿ ಹಾಗೂ ಭರ್ಜರಿ ಬ್ಯಾಚುಲರ್ಸ್ ಸೀಸನ್‌ 2ರ ಮೂಲಕ ಖ್ಯಾತಿ ಪಡೆದುಕೊಂಡಿರುವ ಅಮ್ರಿಟಾ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇತ್ತೀಚೆಗೆ ಸ್ನೇಹಿತರು ಅಮ್ರಿಟಾ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.

ಹುಟ್ಟುಹಬ್ಬದ ವಿಡಿಯೊವನ್ನು ಅಮ್ರಿಟಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇವರ ಹುಟ್ಟುಹಬ್ಬಕ್ಕೆ ಬಿಗ್‌ಬಾಸ್‌ ಖ್ಯಾತಿಯ ತನಿಷಾ ಕುಪ್ಪಂಡ, ಮಹಾನಟಿ ಖ್ಯಾತಿಯ ಧನುಶ್ರೀ, ಆರಾಧ್ಯ ಭಟ್, ರಕ್ಷಕ್ ಬುಲೆಟ್‌ ಸೇರಿದಂತೆ ಹಲವರು ಭಾಗಿಯಾಗಿದ್ದರು. ಅಮ್ರಿಟಾ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳೂ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಿದ್ದಾರೆ.

ಸ್ನೇಹಿತರೊಂದಿಗೆ ಅಮ್ರಿಟಾ

ADVERTISEMENT

ಅಮ್ರಿತಾ ಅವರು ಭರ್ಜರಿ ಬ್ಯಾಚುಲರ್ಸ್ ಸೀಸನ್‌ 2ರಲ್ಲಿ ಗಾಯಕ ಸುನೀಲ್ ಗುಜಗೊಂಡ ಅವರ ಜೋಡಿಯಾಗಿದ್ದರು. ಸುನೀಲ್ ಹಾಗೂ ಅಮ್ರಿಟಾ ಅವರ ಜೋಡಿ ಎಲ್ಲರಿಗೂ ಇಷ್ಟವಾಗಿತ್ತು. ಆ ಮೂಲಕ 2025ರ ಸೀಸನ್ 2ರ ಟ್ರೋಫಿ ಹಾಗೂ ₹15 ಲಕ್ಷ ನಗದು ಬಹುಮಾನ ಗೆದ್ದುಕೊಂಡಿದ್ದರು.

ಅಮ್ರಿಟಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.