ADVERTISEMENT

ಬಿಗ್ ಬಾಸ್‌ 11: ಫಿನಾಲೆ ಟಿಕೆಟ್‌ಗಾಗಿ ಸ್ಪರ್ಧಿಗಳ ನಡುವೆ ಶುರುವಾಯ್ತು ಜಟಾಪಟಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2025, 7:45 IST
Last Updated 8 ಜನವರಿ 2025, 7:45 IST
   

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ 11ನೇ ಆವೃತ್ತಿ 100ನೇ ವಾರಕ್ಕೆ ಕಾಲಿಟ್ಟಿದ್ದು, ಫಿನಾಲೆಗೆ ಟಿಕೆಟ್‌ ಪಡೆಯಲು ಸ್ಪರ್ಧಿಗಳ ನಡುವೆ ಜಟಾಪಟಿ ಜೋರಾಗಿದೆ. 

ಕುಟುಂಬ ಸದಸ್ಯರ ಬಿಗ್‌ ಬಾಸ್‌ ಮನೆ ಭೇಟಿಯ ವಾರ ಮುಗಿಯುತ್ತಿದ್ದಂತೆ ಫಿನಾಲೆಗೆ ಟಿಕೆಟ್‌ ಪಡೆಯುವ ಟಾಸ್ಕ್‌ಗಳು ಆರಂಭವಾಗಿವೆ. ರಜತ್‌ ಮನೆಯ ಕ್ಯಾಪ್ಟನ್‌ ಆಗಿದ್ದಾರೆ. ಈ ವಾರ ಪೂರ್ತಿ ಟಾಸ್ಕ್‌ ಇರಲಿದೆ ಎಂದು ಬಿಗ್‌ ಬಾಸ್‌ ಹೇಳಿದ್ದಾರೆ. ಈ ಮಧ್ಯೆ ಮನೆಯ ಸದಸ್ಯರ ನಡುವೆ ಎರಡು ತಂಡಗಳನ್ನಾಗಿ ಮಾಡಿ ಆಟವನ್ನು ಆಡಿಸುತ್ತಿದ್ದರೂ ವೈಯಕ್ತಿಕ ಆಟದ ಅನುಸಾರ ವಾರಾಂತ್ಯ ಒಬ್ಬರಿಗೆ ನೇರವಾಗಿ ಫಿನಾಲೆಗೆ ಟಿಕೆಟ್‌ ದೊರೆಯಲಿದೆ. 

ಟಾಸ್ಕ್‌ ನಡುವೆ ಉಗ್ರ ಮಂಜು ಗುದ್ದಾಟ ನಡೆಸಿದ್ದಾರೆ. ಭವ್ಯಾ ಮತ್ತು ಮಂಜು ನಡುವಿನ ಗಲಾಟೆ ನಡೆಯುತ್ತಿರುವ ದೃಶ್ಯವನ್ನು ಬುಧವಾರದ ಪ್ರೊಮೊದಲ್ಲಿ ತೋರಿಸಲಾಗಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.