ನಟಿ ಗೌತಮಿ ಜಾಧವ್
ಚಿತ್ರ: ಇನ್‌ಸ್ಟಾಗ್ರಾಮ್
ಕನ್ನಡದ ಬಿಗ್‌ಬಾಸ್ 11ನೇ ಆವೃತ್ತಿ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ ನಟಿ ಗೌತಮಿ ಜಾಧವ್ ರಣಚಂಡಿ ಸ್ವರೂಪ ತಾಳಿದ್ದಾರೆ. ವಿಜಯದಶಮಿ ಹಬ್ಬದ ಪ್ರಯುಕ್ತ ಗೌತಮಿ ಜಾಧವ್ ವಿಶೇಷವಾದ ವಿಡಿಯೊ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ನಟಿ ಗೌತಮಿ ಜಾಧವ್
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸತ್ಯ ಧಾರಾವಾಹಿಯಲ್ಲಿ ನಟಿ ಗೌತಮಿ ಜಾಧವ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಭಿನಯಿಸಿದ್ದರು. ಸತ್ಯ ಧಾರಾವಾಹಿ ಮೂಲಕವೇ ನಟಿ ಬಿಗ್‌ಬಾಸ್ ಮನೆಗೂ ಕಾಲಿಟ್ಟರು. ತಮ್ಮ ಸಹನೆ, ತಾಳ್ಮೆ, ಆಟದ ವೈಖರಿ ಮೂಲಕವೇ ಜನಪ್ರಿಯತೆ ಪಡೆದುಕೊಂಡಿದ್ದರು.
ಬಿಗ್‌ಬಾಸ್ ಮುಕ್ತಾಯದ ಬಳಿಕ ಗೌತಮಿ ಜಾಧವ್ 'ಮಂಗಳಾಪುರಂ' ಚಿತ್ರದ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಟ ರಿಷಿಗೆ ಗೌತಮಿ ಜಾಧವ್ ಜೋಡಿಯಾಗಿದ್ದಾರೆ. ಸಿನಿಮಾದ ಜೊತೆ ಜೊತೆಗೆ ಗೌತಮಿ ಜಾಧವ್ ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯರಾಗಿದ್ದಾರೆ.
ಇದೀಗ ಗೌತಮಿ ಜಾಧವ್ ವಿಜಯದಶಮಿ ಹಬ್ಬದ ಪ್ರಯುಕ್ತ ಹೊಸ ವಿಡಿಯೊವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಗೌತಮಿ ಜಾಧವ್ ಹಂಚಿಕೊಂಡ ವಿಡಿಯೊದಲ್ಲಿ, ಅತ್ತಿದ್ದಾರೆ, ಜೋರಾಗಿ ನಕ್ಕಿದ್ದಾರೆ. ಕಾಳಿಯಾಗಿದ್ದಾರೆ. ದೇವರಾಗಿದ್ದಾರೆ. ಒಂದು ಅದ್ಭುತ ಸಂದೇಶ ಕೂಡ ನೀಡಿದ್ದಾರೆ. ಆ ವಿಡಿಯೊ ಜೊತೆಗೆ ’ಅವಳು ಬಿಂಬ, ನಾನು ಪ್ರತಿಬಿಂಬ. ಎಲ್ಲರಿಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.