ADVERTISEMENT

BBK12: ಕಾಕ್ರೋಚ್‌ಗೆ ಸಿಕ್ತು ಅಸುರಾಧಿಪತಿ ಪಟ್ಟ: ಈಗ ಸುಧಿ ಆಡಿದ್ದೇ ಆಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಅಕ್ಟೋಬರ್ 2025, 5:20 IST
Last Updated 6 ಅಕ್ಟೋಬರ್ 2025, 5:20 IST
<div class="paragraphs"><p>ಕಾಕ್ರೋಚ್‌ ಸುಧಿ</p></div>

ಕಾಕ್ರೋಚ್‌ ಸುಧಿ

   

ಚಿತ್ರ: ಕಲರ್ಸ್‌ ಕನ್ನಡ ಇನ್‌ಸ್ಟಾಗ್ರಾಮ್

ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್ 12 ಶುರುವಾಗಿ ಒಂದು ವಾರ ಮುಕ್ತಾಯಗೊಂಡಿದೆ. ಎರಡನೇ ವಾರದ ಶುರುವಿನಲ್ಲೇ ಕಾಕ್ರೋಚ್‌ ಸುಧಿಗೆ ಬಿಗ್‌ಬಾಸ್ ಅಸುರಾಧಿಪತಿ ಪಟ್ಟ ನೀಡಿದ್ದಾರೆ.

ADVERTISEMENT

ಕಾಕ್ರೋಚ್‌ ಸುಧಿ

ಹೌದು, ಬಿಗ್‌ಬಾಸ್‌ ಶುರುವಾದ ಮೊದಲ ವಾರಕ್ಕೆ ಕಾಕ್ರೋಚ್‌ ಸುಧಿ ಫಿನಾಲೆ ಮೊದಲ ಕಂಟೆಂಟರ್ ಆಗಿ ಆಯ್ಕೆಯಾಗಿದ್ದರು. ಹೀಗಾಗಿ ಎರಡನೇ ವಾರದ ಶುರುವಿನಲ್ಲೇ ಕಾಕ್ರೋಚ್‌ ಸುಧಿಗೆ ಬಿಗ್‌ಬಾಸ್ ಅಸುರಾಧಿಪತಿ ಪಟ್ಟ ನೀಡಿದ್ದಾರೆ.

ಕಲರ್ಸ್‌ ಕನ್ನಡ ಬಿಡುಗಡೆ ಮಾಡಿದ ಪ್ರೊಮೋದಲ್ಲಿ ಬಿಗ್‌ಬಾಸ್‌, ಮನೆಯ ಮೊಟ್ಟ ಮೊದಲ ಫೈನಲಿಸ್ಟ್ ಆಗಿರುವ ಸುಧಿ ಇನ್ನು ಮುಂದೆ ಅಸುರ ಸರ್ವೋಚ್ಚ ಅಧಿಪತಿ ಎಂದಿದ್ದಾರೆ. ಬಿಗ್‌ಬಾಸ್‌ ಕಾಕ್ರೋಚ್‌ ಸುಧಿಗೆ ಅಸುರಾಧಿಪತಿ ಪಟ್ಟ ನೀಡುತ್ತಿದ್ದಂತೆ ಮನೆಯ ವಾತಾವರಣವೇ ಬದಲಾಗಿದೆ. ಈಗ ಸುಧಿ ಮಾಡಿದ್ದೇ ನಿಯಮ, ಆಡಿದ್ದೇ ಆಟವಾಗಿದೆ.

ಇನ್ನು, ಭಾನುವಾರದ ಸಂಚಿಕೆಯಲ್ಲಿ ಬಿಗ್‌ಬಾಸ್‌ ಮನೆಯಿಂದ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದರು. ಅಮಿತ್‌ ಹಾಗೂ ಕರಿಬಸಪ್ಪ ಬಿಗ್‌ಬಾಸ್‌ ಮನೆಗೆ ಬಂದ ಮೊದಲ ವಾರವೇ ವೀಕ್ಷಕರಿಂದ ಕಡಿಮೆ ವೋಟ್ ಪಡೆದು ಆಚೆ ಬಂದಿದ್ದಾರೆ. ಸದ್ಯ ಈಗ ಬಿಗ್‌ಬಾಸ್‌ ಮನೆಯಲ್ಲಿ ಒಟ್ಟು 17 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.