ADVERTISEMENT

BBK12: ವಾರದ ಪಂಚಾಯಿತಿಗೆ ಕಿಚ್ಚನ ಆಗಮನ: ಹಿಡಿದ ದೆವ್ವ ಬಿಡಿಸ್ತಾರಾ ಸುದೀಪ್?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಅಕ್ಟೋಬರ್ 2025, 5:29 IST
Last Updated 18 ಅಕ್ಟೋಬರ್ 2025, 5:29 IST
<div class="paragraphs"><p>ಚಿತ್ರ: ಇನ್‌ಸ್ಟಾಗ್ರಾಮ್</p></div>

ಚಿತ್ರ: ಇನ್‌ಸ್ಟಾಗ್ರಾಮ್

   

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ 12ನೇ ಆವೃತ್ತಿ ಆರಂಭವಾಗಿ ಮೂರು ವಾರ ಕಳೆದಿದೆ. ಈಗಾಗಲೇ ಬಿಗ್‌ಬಾಸ್‌ ಮನೆಯಿಂದ 3 ಸ್ಪರ್ಧಿಗಳನ್ನು ಹೊರ ಹಾಕಲಾಗಿದೆ. ಈಗ 16 ಮಂದಿ ಬಿಗ್‌ಬಾಸ್‌ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಈ ವಾರ ಮಿಡ್‌ ಸೀಸನ್ ಫಿನಾಲೆ ಇರುವುದರಿಂದ ಎಷ್ಟು ಜನ ಬಿಗ್‌ಬಾಸ್‌ ಮನೆಯಿಂದ ಹೊರಬರುತ್ತಾರೆ ಎಂಬುದು ಗೊತ್ತಾಗಲಿದೆ.

ವಾರದ ಪಂಚಾಯಿತಿ ನಡೆಸಲು ಕಿಚ್ಚ ಸುದೀಪ್ ಬಂದು, ಇಡೀ ವಾರ ಮನೆಯಲ್ಲಿ ನಡೆದ ಘಟನೆಗಳ ಬಗ್ಗೆ ಮಾತನಾಡಲಿದ್ದಾರೆ. ಜೊತೆಗೆ ಅಶ್ವಿನಿ ಗೌಡ ಹಾಗೂ ಜಾಹ್ನವಿಗೆ ಕಿಚ್ಚ ಸುದೀಪ್ ತರಾಟೆ ತೆಗೆದುಕೊಳ್ಳಬೇಕು ಎಂದು ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನ ಶುರುವಾಗಿದೆ. ಅಶ್ವಿನಿ ಗೌಡ ಹಾಗೂ ಜಾಹ್ನವಿ ಸುಖಾ ಸುಮ್ಮನೆ ರಕ್ಷಿತಾ ಶೆಟ್ಟಿ ಮೇಲೆ ಸುಳ್ಳು ಆಪಾದನೆ ಹೊರಿಸಿದ್ದಾರೆ. ಹೀಗಾಗಿ ವೀಕ್ಷಕರು ಕಿಚ್ಚ ಸುದೀಪ್‌ ಅವರು ಅಶ್ವಿನಿ ಗೌಡ ಹಾಗೂ ಜಾಹ್ನವಿಗೆ ಕ್ಲಾಸ್‌ ತೆಗೆದುಕೊಳ್ಳಬೇಕು ಎಂದು ಕಾಮೆಂಟ್‌ ಹಾಕಿದ್ದಾರೆ.

ADVERTISEMENT

ಕಲರ್ಸ್‌ ಕನ್ನಡದ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಕಿಚ್ಚ ಸುದೀಪ್‌ ಅವರ ಆಗಮನವಾಗಿದೆ. ಜೊತೆಗೆ ಹಿಡಿದ ದೆವ್ವ ಬಿಡಿಸ್ತಾರಾ ಕಿಚ್ಚ? ಕಾದು ನೋಡೋಣ ಎಂದು ಅಡಿಬಹರ ಬರೆಯಲಾಗಿದೆ. ಸದ್ಯ ಇಂದು ರಾತ್ರಿ 8 ಗಂಟೆಯ ಸಂಚಿಕೆಯಲ್ಲಿ ಏನೆಲ್ಲಾ ಆಗಲಿದೆ ಎಂದು ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.