ADVERTISEMENT

Bigg Boss 12: ತಾಯಿಯನ್ನು ಭೇಟಿಯಾದ ಧನುಷ್‌ಗೆ ಹೆಂಡತಿಯನ್ನು ಕಾಣುವ ಹಂಬಲ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಡಿಸೆಂಬರ್ 2025, 6:22 IST
Last Updated 24 ಡಿಸೆಂಬರ್ 2025, 6:22 IST
   

ಕನ್ನಡ ಬಿಗ್‌ಬಾಸ್ ಈಗಾಗಲೇ 87ನೇ ಸಂಚಿಕೆಗೆ ಕಾಲಿಟ್ಟಿದೆ. ಸ್ವರ್ಧಿಗಳ ಮನೆಯ ಕುಟುಂಬ ಸದಸ್ಯರು ಬಿಗ್‌ಬಾಸ್ ಮನೆಗೆ ಆಗಮಿಸುತ್ತಿದ್ದಾರೆ. ಅದರಂತೆ ನಿನ್ನೆ(ಮಂಗಳವಾರ) ಧನುಷ್ ಅವರ ತಾಯಿ ಹಾಗೂ ಪತ್ನಿ ಬಿಗ್‌ಬಾಸ್ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಧನುಷ್ ಅವರು ಭಾವುಕರಾಗಿದ್ದಾರೆ.

ಬಿಗ್‌ಬಾಸ್ ಮನೆಗೆ ಸೂರಾಜ್ ಹಾಗೂ ರಾಶಿಕಾ ಅವರ ಕುಟುಂಬ ಸದಸ್ಯರು ಭೇಟಿ ನೀಡಿದ್ದಾರೆ.

ಬಿಗ್‌ಬಾಸ್ ಬಿಡುಗಡೆ ಮಾಡಿರುವ ಪ್ರೊಮೋದಲ್ಲಿ, ಧನುಷ್ ಅವರ ತಾಯಿ ಅಥವಾ ಪತ್ನಿ ಇಬ್ಬರಲ್ಲಿ ಒಬ್ಬರನ್ನು ಭೇಟಿ ಮಾಡಲು ಅವಕಾಶ ನೀಡಲಾಗುವುದು. ನೀವು ಯಾರನ್ನು ಆಯ್ಕೆ ಮಾಡುತ್ತೀರಾ? ಎಂದು ಕೇಳಿದಾಗ ಧನುಷ್ ಅವರು ಭಾವುಕರಾಗಿದ್ದಾರೆ. ಈ ವೇಳೆ ಮನೆಯ ಇತರೆ ಸದಸ್ಯರು ಕೂಡ ಭಾವುಕರಾದರು.

ADVERTISEMENT

ಧನುಷ್ ಅವರ ತಾಯಿ ಹಾಗೂ ಅವರ ಪತ್ನಿ ಬಿಗ್‌ಬಾಸ್ ಮನೆಯ ಬೇರೆ ಬೇರೆ ಕೊಠಡಿಯಲ್ಲಿ ಇದ್ದರು. ಈ ವೇಳೆ ಧನುಷ್ ಅವರು ತಾಯಿ ಇದ್ದ ಕೊಠಡಿಯ‌ನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಧನುಷ್ ಅವರಿಗೆ ಪತ್ನಿ ಭೇಟಿ ಮಾಡಲು ಅವಕಾಶ ಸಿಗುತ್ತಾ? ಇಲ್ಲವ? ಎಂಬುದನ್ನು ಇಂದಿನ ಸಂಚಿಕೆಯಲ್ಲಿ ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.