ADVERTISEMENT

ಬಡ ಕುಟುಂಬಕ್ಕೆ ಸಹಾಯ ಮಾಡಿದ ಬಿಗ್‌ಬಾಸ್‌ ಸ್ಪರ್ಧಿ ಜಾಹ್ನವಿ: ವಿಡಿಯೊ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಫೆಬ್ರುವರಿ 2026, 7:01 IST
Last Updated 2 ಫೆಬ್ರುವರಿ 2026, 7:01 IST
<div class="paragraphs"><p>ಜಾಹ್ನವಿ</p></div>

ಜಾಹ್ನವಿ

   

ಚಿತ್ರ: ಇನ್‌ಸ್ಟಾಗ್ರಾಂ

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್ 12ರ ಸ್ಪರ್ಧಿಯಾಗಿದ್ದ ಜಾಹ್ನವಿ ಅವರು ಹೊಸ ಕೆಲಸಕ್ಕೆ ಮುಂದಾಗಿದ್ದಾರೆ. ಬೀದಿಬದಿಯಲ್ಲಿ ವಾಸಿಸುತ್ತಿದ್ದ ನಿವಾಸಿಗಳ ಮನೆಗೆ ಭೇಟಿ ನೀಡಿ ಅವರಿಗೆ ಸಹಾಯ ಮಾಡಿದ್ದಾರೆ. ಇದೇ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

ವಿಡಿಯೊ ಜೊತೆಗೆ ‘ಇತಿಹಾಸ ಹೇಳುತ್ತದೆ, ಕಳೆದು ಹೋದ ದಿನ ಸುಖವಾಗಿತ್ತು. ವಿಜ್ಞಾನ ಹೇಳುತ್ತದೆ, ನಾಳೆ ಬರುವ ದಿನ ಸುಖವಾಗಿರುತ್ತದೆ. ಆದರೆ ಧರ್ಮ ಹೇಳುತ್ತದೆ, ಸತ್ಯವಾದ ಮನಸ್ಸು ಹಾಗೂ ಸ್ವಚ್ಚವಾದ ಹೃದಯವಿದ್ದರೆ ಪ್ರತಿಕ್ಷಣವೂ ಸುಖಕರವಾಗಿರುತ್ತದೆ’ ಎಂದು ಬರೆದುಕೊಂಡಿದ್ದಾರೆ.

ಜಾಹ್ನವಿ ಅವರು, ಬೀದಿಬದಿಗಳಲ್ಲಿ ವಾಸಿಸುತ್ತಿದ್ದ ನಿವಾಸಿಗಳ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದಾರೆ. ಬಳಿಕ ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ದಿನಸಿ ಸಾಮಗ್ರಿಗಳು ಖರೀದಿಸಿ ಕೊಟ್ಟಿರುವುದು ವಿಡಿಯೊದಲ್ಲಿ ಕಾಣಿಸಿದೆ.

ಇದೇ ವಿಡಿಯೊ ನೋಡಿದ ನೆಟ್ಟಿಗರು, ‘ಒಳ್ಳೆಯ ಕೆಲಸ ಮಾಡುತ್ತಿದ್ದೀರಿ’, ‘ಬಡವರಿಗೆ ಇನ್ನಷ್ಟು ದಾನ ಮಾಡಿ’ ಎಂದು ಕಮೆಂಟ್‌ ಹಾಕಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಬಿಗ್‌ಬಾಸ್‌ನಿಂದ ಜನಪ್ರಿಯತೆ ಪಡೆದುಕೊಂಡಿರುವ ಜಾಹ್ನವಿ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ 2 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.