ADVERTISEMENT

ಬಿಗ್‌ಬಾಸ್‌ನಿಂದ ಹೊಸ ಅಧ್ಯಾಯದವರೆಗೆ; ಸೂರಜ್‌ಗೆ ಶುಭ ಹಾರೈಸಿದ ರಾಶಿಕಾ ಶೆಟ್ಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜನವರಿ 2026, 11:00 IST
Last Updated 27 ಜನವರಿ 2026, 11:00 IST
<div class="paragraphs"><p>ಸೂರಜ್‌ ಸಿಂಗ್ ಹಾಗೂ ರಾಶಿಕಾ ಶೆಟ್ಟಿ</p></div>

ಸೂರಜ್‌ ಸಿಂಗ್ ಹಾಗೂ ರಾಶಿಕಾ ಶೆಟ್ಟಿ

   

ಚಿತ್ರ: ಇನ್‌ಸ್ಟಾಗ್ರಾಂ

ಕನ್ನಡದ ಬಿಗ್‌ಬಾಸ್‌ ಸೀಸನ್ 12ಕ್ಕೆ ವೈಲ್ಡ್​ ಕಾರ್ಡ್​ ಸ್ಪರ್ಧಿಯಾಗಿ ಆಗಮಿಸಿದ್ದ ಸೂರಜ್‌ ಸಿಂಗ್‌ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡು ಮುನ್ನುಗ್ಗುತ್ತಿದ್ದಾರೆ. ಬಿಗ್‌ಬಾಸ್ ಮನೆಯಿಂದ ಆಚೆ ಬರುತ್ತಿದ್ದಂತೆ ಕಿರುತೆರೆ ಲೋಕಕ್ಕೆ ನಾಯಕ ನಟನಾಗಿ ಮಿಂಚಲು ಸಜ್ಜಾಗಿದ್ದಾರೆ.

ADVERTISEMENT

ಇದೀಗ ಬಿಗ್‌ಬಾಸ್‌ನಿಂದ ಹೊಸ ಅಧ್ಯಾಯ ಶುರು ಮಾಡುತ್ತಿರುವ ಗೆಳೆಯ ಸೂರಜ್‌ ಸಿಂಗ್‌ಗೆ ರಾಶಿಕಾ ಶೆಟ್ಟಿ ಅವರು ಶುಭ ಹಾರೈಸಿದ್ದಾರೆ. ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ‘ಹಾಯ್ ಹೀರೋ ಸರ್.. ಬಿಗ್‌ಬಾಸ್ ಮನೆಯಿಂದ ಈ ಹೊಸ ಅಧ್ಯಾಯದವರೆಗೆ.. ನಿಮ್ಮ ಬಗ್ಗೆ ತುಂಬಾ ಸಂತೋಷ ಮತ್ತು ಹೆಮ್ಮೆ ಆಗುತ್ತಿದೆ. ಇಂದಿನಿಂದ ಪವಿತ್ರ ಬಂಧನ ಧಾರಾವಾಹಿಯನ್ನು ವೀಕ್ಷಿಸಿ ಮತ್ತು ಪ್ರೀತಿ ನೀಡಿ’ ಎಂದು ಬರೆದುಕೊಂಡಿದ್ದಾರೆ.

ಸೂರಜ್‌ ಸಿಂಗ್‌ಗೆ ಶುಭ ಹಾರೈಸಿದ ರಾಶಿಕಾ ಶೆಟ್ಟಿ

ಬಿಗ್‌ಬಾಸ್‌ನಿಂದ ಜನಪ್ರಿಯತೆ ಪಡೆದುಕೊಂಡ ಸೂರಜ್‌ ಸಿಂಗ್‌ ಅವರಿಗೆ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುವ ಅವಕಾಶ ಸಿಕ್ಕಿದೆ. ಇಂದಿನಿಂದ ರಾತ್ರಿ 10ಕ್ಕೆ ಕಲರ್ಸ್‌ ಕನ್ನಡದಲ್ಲಿ ‘ಪವಿತ್ರ ಬಂಧನ’ ಧಾರಾವಾಹಿ ಪ್ರಸಾರ ಆಗಲಿದ್ದು, ಇದರಲ್ಲಿ ದೇವದತ್ ದೇಶಮುಖ್‌ ಎಂಬ ಪಾತ್ರದಲ್ಲಿ ಸೂರಜ್‌ ಸಿಂಗ್‌ ನಟಿಸುತ್ತಿದ್ದಾರೆ. ಇವರಿಗೆ ನಾಯಕಿಯಾಗಿ ಅಮೂಲ್ಯ ಭಾರದ್ವಾಜ್ ಅವರು ಜೋಡಿಯಾಗಿದ್ದಾರೆ. ಜೊತೆಗೆ ತಿಲಕ್ ಗೌಡ ಪಾತ್ರದಲ್ಲಿ ಯಶಸ್ ಗೌಡ ಕೂಡ ಕಾಣಿಸಿಕೊಂಡಿದ್ದಾರೆ.

ಇನ್ನು, ಈ ಮೊದಲು ಬಾಣಸಿಗನಾಗಿ, ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿದ್ದ ಸೂರಜ್‌ ಸಿಂಗ್, ಬಿಗ್‌ಬಾಸ್‌ ಮನೆಗೆ ಬರುತ್ತಿದ್ದಂತೆ ಎಲ್ಲವೂ ಬದಲಾಗಿಬಿಟ್ಟಿತ್ತು. ಈಗ ಕಲರ್ಸ್ ಕನ್ನಡದಲ್ಲಿ ಶುರುವಾಗುತ್ತಿರುವ ‘ಪವಿತ್ರ ಬಂಧನ’ ಧಾರಾವಾಹಿಯಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.