
ಸೂರಜ್, ರಿಷಾ, ಸ್ಪಂದನಾ
ಚಿತ್ರ: ಇನ್‌ಸ್ಟಾಗ್ರಾಮ್
ಬಿಗ್‌ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಪ್ರವೇಶಿಸಿರುವ ರಿಷಾ ಗೌಡ ಸದ್ಯ ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದಾರೆ. ರಿಷಾ ಅವರು ತೆಗೆದುಕೊಂಡ ಒಂದು ನಿರ್ಧಾರದಿಂದಾಗಿ ಸ್ಪಂದನಾ ಹಾಗೂ ಸೂರಜ್ ಕಣ್ಣೀರಿಟ್ಟಿದ್ದಾರೆ.
ಬಿಗ್‌ಬಾಸ್ ಸೀಸನ್ 12ರ ಸ್ಪರ್ಧಿಗಳು
ಜಿಯೋ ಹಾಟ್‌ಸ್ಟಾರ್ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಹಂಚಿಕೊಂಡಿದೆ. ಅದರಲ್ಲಿ ಬಿಗ್‌ಬಾಸ್ ‘ರಿಷಾ 7 ಸದಸ್ಯರ ಪತ್ರಗಳ ಪೈಕಿ ಇಬ್ಬರ ಪತ್ರಗಳನ್ನು ಶೆಡಲ್‌ನಲ್ಲಿ (ಪತ್ರ ಕತ್ತರಿಸುವ ಯಂತ್ರ) ಹಾಕಬೇಕು’ ಎಂದು ಹೇಳಿದ್ದಾರೆ. ಆಗ ರಿಷಾ ಅವರು ಸ್ಪಂದನಾ ಹಾಗೂ ಸೂರಜ್ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಬಳಿಕ ಇಬ್ಬರಿಗೂ ಕುಟುಂಬಸ್ಥರಿಂದ ಬಂದ ಲೇಟರ್ ಅನ್ನು ಕತ್ತರಿಸುವ ಯಂತ್ರಕ್ಕೆ ಹಾಕಿದ್ದಾರೆ.
ಮನೆಯಿಂದ ಬಂದ ಪತ್ರವನ್ನು ಯಂತ್ರಕ್ಕೆ ಹಾಕುತ್ತಿದ್ದಂತೆ ಸ್ಪಂದನಾ ಹಾಗೂ ಸೂರಜ್ ಕಣ್ಣೀರಿಟ್ಟಿದ್ದಾರೆ. ಆಗ ಸೂರಜ್ ಕಾವ್ಯಳ ಮುಂದೆ ‘ರಿಷಾಗೆ ನಾನೇನು ಮಾಡಿದ್ದೇ’ ಎಂದು ಬೇಸರದಲ್ಲಿ ಹೇಳಿದ್ದಾರೆ. ಇತ್ತ ಸ್ಪಂದನಾ ಯಂತ್ರದಲ್ಲಿ ತುಂಡಾದ ಪೇಪರ್ ಮುಂದೆ ಹೋಗಿ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದಾರೆ. ಇನ್ನು ಗಿಲ್ಲಿ, ಸೂರಜ್ ಮುಂದೆ ಕುಳಿತುಕೊಂಡಿದ್ದ ವೇಳೆ ರಿಷಾ ‘ಕಳ್ಳರನ್ನು ನಂಬಿದರು ಈ ಮಳ್ಳರನ್ನು ನಂಬಬಾರದು’ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.