
ರಿಷಾ ಗೌಡ
ಚಿತ್ರ: ಇನ್‌ಸ್ಟಾಗ್ರಾಮ್
ಗಿಲ್ಲಿ ನಟನ ಮೇಲೆ ಕೈ ಮಾಡಿದ ಬೆನ್ನಲ್ಲೇ ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಮುಂದೆ ರಿಷಾಗೆ ಭಾರೀ ಮುಖಭಂಗವಾಗಿದೆ. ‘ನಾನು ಇರೋದೇ ಹೀಗೆ, ಆಚೆ ಹೇಗಿದ್ದೀನಿ ಇಲ್ಲೂ ಹಾಗೇಯೇ ಇದ್ದೇನೆ’ ಎಂದು ಕಿರಾಚಾಡಿದ್ದಾರೆ.
ಜಿಯೋ ಹಾಟ್‌ಸ್ಟಾರ್ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ರಿಷಾ ಮುಖಕ್ಕೆ ಮನೆಮಂದಿ ಮಸಿ ಬಳಿದಿದ್ದಾರೆ. ಮಾತನ್ನು ಶುರುಮಾಡಿದ ಅಭಿಷೇಕ್ ‘ಮನೆಯಲ್ಲಿ ನೆಮ್ಮದಿ ಅನ್ನೋದು ಹಾಳಾಗುತ್ತಾ ಇರೋದು ನಿಮ್ಮಂದ’ ಅಂತ ಹೇಳಿದ್ದಾರೆ. ಬಳಿಕ ಗಿಲ್ಲಿ ಮಾತಾಡಿ, ‘ನನ್ನ ಮುಖವಾಡ ಕಳಚುತ್ತಿಯೋ ಇಲ್ಲವೋ ಗೊತ್ತಿಲ್ಲ, ನಿನ್ನ ಮುಖವಾಡ ಕಳಚಿ ಆಗಲೇ ಬಿದ್ದು ಒದ್ದಾಡಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ಕೊಚ್ಚಿಕೊಂಡು ಹೋಗಿದೆ’ ಎಂದರು.
ಆಗ ಮಾತನಾಡಿದ ಧನುಷ್ ‘ಬಿಗ್‌ಬಾಸ್ ಮನೆಯಲ್ಲಿ ಹೋಗಲೇ ಬಾರಲೇ ಅನ್ನೋದು ಸರಿಯಲ್ಲ’ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ರಿಷಾ, ನಾ ಮಾತಾಡೋದು ಹೀಗೆ, ಹೊರಗಡೆ ಹೇಗಿದ್ದೀನಿ, ಇಲ್ಲಿಯೂ ಹಾಗೇ ಇದ್ದೀನಿ ಎನ್ನುತ್ತಾರೆ.
ಇದಾದ ಬಳಿಕ ಮಾತನಾಡಿದ ರಘು, ‘ನಾನು ಮನೆಯಲ್ಲಿ ಹೇಗೇಗೋ ಇರುತ್ತೇನೆ. ದೊಡ್ಡ ಹುಚ್ಚಾ ನಾನು. ಮನೆಯಲ್ಲಿ ಇರೋ ತರ ಇಲ್ಲಿ ನಾನು ಇದ್ರೆ ಚಪ್ಪಲಿ ತೆಗೆದುಕೊಂಡು ನನ್ನ ಹೊಡೆಯುತ್ತಾರೆ’ ಎಂದು ಕಿಡಿಕಾರಿದ್ದಾರೆ. ಇಂದು ರಾತ್ರಿ 9.30ಕ್ಕೆ ಪ್ರಸಾರವಾಗುವ ಸಂಚಿಕೆಯಲ್ಲಿ ಉಳಿದ ಸ್ಪರ್ಧಿಗಳು ಏನೆಲ್ಲಾ ತಿರುಗೇಟು ಕೊಟ್ಟಿದ್ದಾರೆ ಎಂದು ಗೊತ್ತಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.