
ರಿಷಾ ಗೌಡ, ಸೂರಜ್ ಸಿಂಗ್
ಚಿತ್ರ: ಇನ್‌ಸ್ಟಾಗ್ರಾಮ್
ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಬಿಗ್‌ಬಾಸ್ ಮನೆಗೆ ಕಾಲಿಟ್ಟಿರುವ ಸೂರಜ್ ಸಿಂಗ್ ಹಾಗೂ ರಿಷಾ ಗೌಡ ಗಲಾಟೆ ಮಾಡಿಕೊಂಡಿದ್ದಾರೆ. ರಿಷಾ ಗೌಡ ಆಡಿದ ಮಾತಿಗೆ ಸೂರಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಯೋ ಹಾಟ್‌ಸ್ಟಾರ್ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಬಿಡುಗಡೆ ಮಾಡಿದೆ. ಅದರಲ್ಲಿ ರಿಷಾ ಗೌಡ ಹಾಗೂ ಸೂರಜ್ ಸಿಂಗ್ ನಡುವೆ ಮಾತಿನ ಸಮರ ನಡೆದಿದೆ. ಬಿಗ್‌ಬಾಸ್ ಮನೆಗೆ ಬಂದಿದ್ದ ರಿಷಾ ಗೌಡ ಎರಡು ದಿನ ಚೆನ್ನಾಗಿಯೇ ಇದ್ದರು. ಇದಾದ ಬಳಿಕ ಮನೆಯಲ್ಲಿರುವ ಬಹುತೇಕ ಸ್ಪರ್ಧಿಗಳ ಜೊತೆ ಗಲಾಟೆ ಮಾಡಿಕೊಂಡಿದ್ದಾರೆ.
ಸೂರಜ್, ರಿಷಾ, ಸ್ಪಂದನಾ
ಬಿಗ್‌ಬಾಸ್ ಮನೆಗೆ ಬಂದಿದ್ದ ರಿಷಾ ಗೌಡ ಎರಡು ದಿನ ಚೆನ್ನಾಗಿಯೇ ಇದ್ದರು. ಇದಾದ ಬಳಿಕ ಮನೆಯಲ್ಲಿರುವ ಬಹುತೇಕ ಸ್ಪರ್ಧಿಗಳ ಜೊತೆ ಗಲಾಟೆ ಮಾಡಿಕೊಂಡಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಜೋರು ಧ್ವನಿಯಲ್ಲಿ ಮಾತನಾಡಿದರೆ ಮಾತ್ರ ಹೆಚ್ಚಾಗಿ ಕಾಣಿಸಿಕೊಳ್ಳಬಹುದು ಎಂದು ರಿಷಾ ತಲೆಯಲ್ಲಿದೆ ಎಂದು ಅಭಿಷೇಕ್, ಧನುಷ್, ಕಾವ್ಯ ಶೈವ, ರಘು, ಸ್ಪಂದನಾ ಹೇಳಿದ್ದರು. ಆದರೆ ರಿಷಾ ಮಾತ್ರ ದಿನ ಕಳೆದಂತೆ ಮನೆಯಲ್ಲಿ ಪ್ರತಿದಿನ ಒಬ್ಬೊಬ್ಬರ ಜೊತೆ ಗಲಾಟೆ ಮಾಡಿಕೊಳ್ಳುತ್ತಿದ್ದಾರೆ. ಈಗ ಸೂರಜ್ ಜೊತೆಗೂ ಜಗಳವಾಡಿದ್ದಾರೆ.
ಬಿಗ್‌ಬಾಸ್ ಮನೆಗೆ ಸ್ಪರ್ಧಿಗಳ ಕುಟಂಬಸ್ಥರಿಂದ ಪತ್ರಗಳು ಬಂದಿದ್ದವು. ಆ ಪತ್ರಗಳಲ್ಲಿ ಇಬ್ಬರ ಪತ್ರವನ್ನು ಹರಿದು ಹಾಕಲು ರಿಷಾ ಗೌಡಗೆ ಬಿಗ್‌ಬಾಸ್ ಅವಕಾಶ ಕೊಟ್ಟಿದ್ದರು. ಆಗ ರಿಷಾ, ಸೂರಜ್ ಹಾಗೂ ಸ್ಪಂದನಾ ಸೋಮಣ್ಣ ಅವರಿಗೆ ಬಂದ ಪತ್ರವನ್ನು ಯಂತ್ರದಲ್ಲಿ ಹಾಕಿದ್ದಾರೆ. ಆಗಲೆ ಸೂರಜ್, ರಿಷಾ ಮೇಲೆ ಕೋಪ ಮಾಡಿಕೊಂಡಿದ್ದರು. ಇನ್ನು, ಇದಾದ ಬಳಿಕ ರಿಷಾ ಬಳಿ ಹೋಗಿ ‘ನಾನೇನು ನಿನಗೆ ಮಾಡಿದ್ದೇ? ನನ್ನ ಪತ್ರ ಏಕೆ ಹರಿದೆ’ ಎಂದು ಕೇಳಿದ್ದಾರೆ. ಆಗ ಮಾತಾಡಿದ ರಿಷಾ ಅವರು ‘ಕಳ್ಳನನ್ನು ನಂಬಿದ್ರೂ ಮಳ್ಳನನ್ನು ನಂಬೋದಿಲ್ಲ’ ಎಂದು ಹೇಳಿದ್ದರು.
ಇನ್ನು. ‘ನನಗೆ ಮಳ್ಳ ಅನ್ನೊ ಪಟ್ಟ ಯಾಕೆ ಕೊಟ್ಟೆ’? ಎಂದು ಸೂರಜ್ ಗೌಡ, ರಿಷಾಗೆ ಪ್ರಶ್ನೆ ಮಾಡಿದ್ದಾರೆ. ಇದೇ ವಿಷಯಕ್ಕೆ ಮನೆಯಲ್ಲಿ ಜಗಳ ಶುರುವಾಗಿದೆ. ಬಿಡುಗಡೆಯಾದ ಪ್ರೊಮೋದಲ್ಲಿ ‘ಮಳ್ಳ ಅಂತ ಹೇಳೋಕೆ ನಾನು ನಿನಗೆ ಏನು ಮಾಡಿದ್ದೆ’ ಎಂದು ಸೂರಜ್ ಪ್ರಶ್ನೆ ಮಾಡಿದ್ದಾರೆ. ಆಗ ರಿಷಾ, ‘ನನಗೆ ನಿನ್ನ ನಂಬೋಕೆ ಆಗಲ್ಲ ಕಣೋ. ಎಲ್ಲಿ ನೋಡ್ಕೊಂಡು ಬೇಕಿದ್ರೂ ಮಾತಾಡ್ತೀನಿ’ ಎಂದು ವಾದ ಮಾಡಿದ್ದಾರೆ. ಆಗ ಸೂರಜ್, ‘ಇದೆಲ್ಲ ನಿನ್ನ ಮನೆಯಲ್ಲಿ ಇಟ್ಕೋ, ನಿನ್ನ ಮಾತಿನ ಮೇಲೆ ನಿನಗೆ ಕಂಟ್ರೋಲ್ ಇಲ್ಲ’ ಎಂದು ಕಿಡಿಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.