ADVERTISEMENT

ಮತ್ತೆ ಒಂದೆಡೆ ಸೇರಿದ ಬಿಗ್‌ಬಾಸ್‌ ಸೀಸನ್ 12ರ ಸ್ಪರ್ಧಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಫೆಬ್ರುವರಿ 2026, 12:41 IST
Last Updated 6 ಫೆಬ್ರುವರಿ 2026, 12:41 IST
<div class="paragraphs"><p>ಬಿಗ್‌ಬಾಸ್‌ ಸೀಸನ್ 12ರ ಸ್ಪರ್ಧಿಗಳು</p></div>

ಬಿಗ್‌ಬಾಸ್‌ ಸೀಸನ್ 12ರ ಸ್ಪರ್ಧಿಗಳು

   

ಚಿತ್ರ:ಇನ್‌ಸ್ಟಾಗ್ರಾಂ

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್ 12 ಮುಕ್ತಾಯಗೊಂಡು ಇಂದಿಗೆ 10 ದಿನಗಳು ಕಳೆದಿವೆ. ಈಗಲೂ ಬಿಗ್‌ಬಾಸ್‌ ವಿಜೇತ ಗಿಲ್ಲಿ ನಟ ಹವಾ ಕಡಿಮೆ ಆಗಿಲ್ಲ. ಇದರ ಮಧ್ಯೆ ಸೀಸನ್ 12ರ ಸ್ಪರ್ಧಿಗಳೆಲ್ಲಾ ಒಂದೆಡೆಗೆ ಸೇರಿಕೊಂಡಿದ್ದಾರೆ. ಶಿವರಾತ್ರಿ ಅಂಗವಾಗಿ ಕಾರ್ಯಕ್ರಮವೊಂದರಲ್ಲಿ ಚಿತ್ರೀಕರಣದಲ್ಲಿ ಎಲ್ಲಾ ಸ್ಪರ್ಧಿಗಳು ಭಾಗಿಯಾಗಿ ಸಖತ್ ಎಂಜಾಯ್ ಮಾಡಿದ್ದಾರೆ.

ADVERTISEMENT

ಬಿಗ್‌ಬಾಸ್‌ ಸೀಸನ್ 12ರ ಸ್ಪರ್ಧಿಗಳು

ಇದೇ ವಿಡಿಯೊವನ್ನು ನಟ ಧನುಷ್ ಅವರು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಎಲ್ಲ ಸ್ಪರ್ಧಿಗಳು ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ವಿಡಿಯೊದಲ್ಲಿ ಗಿಲ್ಲಿ ನಟ, ಕಾವ್ಯ ಶೈವ, ಸ್ಪಂದನಾ, ರಿಷಾ ಗೌಡ, ರಾಶಿಕಾ, ಧನುಷ್, ರಘು, ಅಶ್ವಿನಿ, ಅಭಿಷೇಕ್, ಕರಿ ಬಸಪ್ಪ, ಸತೀಶ್, ಮಾಳು, ಸೂರಜ್‌, ಸುಧಿ, ಮಲ್ಲಮ್ಮ ರಕ್ಷಿತಾ ಶೆಟ್ಟಿ ಇರುವುದು ಕಾಣಿಸಿದೆ. ಆದರೆ ಅಶ್ವಿನಿ ಗೌಡ ಹಾಗೂ ಜಾಹ್ನವಿ, ಧ್ರುವಂತ್, ಅಮಿತ್, ಚಂದ್ರಪ್ರಭ ಹಾಗೂ ಮಂಜು ಭಾಷಿಣಿ ಕಾಣಿಸಿಲ್ಲ. ಇವರು ಕಾರ್ಯಕ್ರಮದಲ್ಲಿ ನೇರವಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.

ಸದ್ಯ ಇದೇ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಒಂದೇ ಫ್ರೇಮ್‌ನಲ್ಲಿ ಬಿಗ್‌ಬಾಸ್‌ ಸ್ಪರ್ಧಿಗಳನ್ನು ನೋಡಿದ ಅಭಿಮಾನಿ ಖುಷಿಪಟ್ಟಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಕಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.