
ಕನ್ನಡದ ಜನಪ್ರಿಯಾ ರಿಯಾಲಿಟಿ ಶೋ ಬಿಗ್‌ಬಾಸ್‌ನ 12ನೇ ಆವೃತ್ತಿ 102ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ ಜೋರಾಗಿದೆ.
ಬಿಗ್‌ಬಾಸ್ ಬಿಡುಗಡೆ ಮಾಡಿದ ಪ್ರೊಮೋದಲ್ಲಿ , ‘ಅಶ್ವಿನಿ ಹಾಗೂ ಧ್ರುವಂತ್ ಮೇಲೆ ಉಳಿದ ಸ್ಪರ್ಧಿಗಳಿಗೆ ನೀರೆರೆಚುವ ಟಾಸ್ಕ್ ಒಂದನ್ನು ಬಿಗ್‌ಬಾಸ್ ನೀಡಿದ್ದರು.
ನೀರೆರೆಚುವ ವೇಳೆ ಟಾಸ್ಕ್ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆಂದು ಧ್ರುವಂತ್ ಅವರು ಕೋಪಗೊಂಡಿದ್ದಾರೆ. ಅತ್ತ, ಅಶ್ವಿನಿ ಹಾಗೂ ರಾಶಿಕಾ ಅವರು ವೈಯಕ್ತಿಕ ವಿಚಾರವಾಗಿ ಮಾತನಾಡಿದ್ದಾರೆ
ಕೆಲವು ಸಂಚಿಕೆಗಳಲ್ಲಿ ಇವರಿಬ್ಬರು ತುಂಬಾ ಆತ್ಮೀಯರಾಗಿದ್ದರು. ಆದರೆ ಬಿಗ್‌ಬಾಸ್ ನೀಡಿದ ನೀರೆರೆಚುವ ಟಾಸ್ಕ್‌ನಿಂದ ಸ್ಪರ್ಧಿಗಳ ನಡುವೆ ಬಿರುಕಿಗೆ ಕಾರಣವಾಗುತ್ತಾ ಎಂದು ಇಂದಿನ ಸಂಚಿಕೆಯಲ್ಲಿ ನೋಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.