ADVERTISEMENT

ದೊಡ್ಮನೆ ಹಬ್ಬ: ಭರ್ಜರಿ ಮನರಂಜನೆ ನೀಡಲು ಸಜ್ಜಾದ ಬಿಗ್‌ಬಾಸ್ ಸ್ಪರ್ಧಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಫೆಬ್ರುವರಿ 2026, 7:39 IST
Last Updated 10 ಫೆಬ್ರುವರಿ 2026, 7:39 IST
<div class="paragraphs"><p>ಬಿಗ್‌ಬಾಸ್‌ ಸ್ಪರ್ಧಿಗಳಾದ ಕಾವ್ಯ, ಗಿಲ್ಲಿ ನಟ</p></div>

ಬಿಗ್‌ಬಾಸ್‌ ಸ್ಪರ್ಧಿಗಳಾದ ಕಾವ್ಯ, ಗಿಲ್ಲಿ ನಟ

   

ಚಿತ್ರ: ಇನ್‌ಸ್ಟಾಗ್ರಾಂ

ಕನ್ನಡದ ಬಿಗ್‌ಬಾಸ್‌ ಸೀಸನ್ 12 ಮುಕ್ತಾಯದ ನಂತರವೂ ಆ ಗುಂಗಿನಲ್ಲೇ ಇರುವ ಅಭಿಮಾನಿಗಳಿಗೆ ಕಲರ್ಸ್ ಕನ್ನಡ ವಾಹಿನಿಯು ಭರ್ಜರಿ ಉಡುಗೊರೆಯೊಂದನ್ನು ನೀಡಲು ಮುಂದಾಗಿದೆ. ಫೆಬ್ರುವರಿ 14ರಂದು ‘ದೊಡ್ಮನೆ ಹಬ್ಬ’ ಎಂಬ ಅದ್ಧೂರಿ ಕಾರ್ಯಕ್ರಮ ಪ್ರಸಾರವಾಗಲಿದೆ.

ADVERTISEMENT

ಕಲರ್ಸ್‌ ದೊಡ್ಮನೆ ಹಬ್ಬ ಕಾರ್ಯಕ್ರಮವು ಮೂರು ಗಂಟೆಗಳ ಕಾಲ ವೀಕ್ಷಕರನ್ನು ರಂಜಿಸಲಿದೆ. ಇದೇ ಶನಿವಾರ ಸಂಜೆ 6ಗಂಟೆಯಿಂದ ರಾತ್ರಿ 9ರವರೆಗೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಬಿಗ್ ಬಾಸ್ ಕನ್ನಡ ಸೀಸನ್‌ 12ರ ಎಲ್ಲಾ ಸ್ಪರ್ಧಿಗಳು ಹೊರಬಂದ ಮೇಲೆ ಇದೇ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮನೆಯೊಳಗಿನ ಗಂಭೀರ ವಾತಾವರಣದ ಬದಲು ಇಲ್ಲಿ ಕೇವಲ ನಗು, ಹರಟೆ ಮತ್ತು ಸಂಭ್ರಮಕ್ಕೆ ಮಾತ್ರ ಆದ್ಯತೆ ನೀಡಲಾಗಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ ನಟಿ ಹಾಗೂ ನಿರೂಪಕಿ ಸುಷ್ಮಾ ರಾವ್ ಅವರು ನಿರೂಪಣೆಯ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಸ್ಪರ್ಧಿಗಳ ಗುಟ್ಟುಗಳನ್ನು ರಟ್ಟುಮಾಡಲಿದ್ದು, ಕೇವಲ ಹಾಡು-ಕುಣಿತ ಅಷ್ಟೇ ಅಲ್ಲದೆ, ಬಿಗ್ ಬಾಸ್ ಮನೆಯ ಟಾಸ್ಕ್‌ಗಳನ್ನು ನೆನಪಿಸುವಂತಹ ತಮಾಷೆಯ ಟಾಸ್ಕ್‌ಗಳನ್ನು ಸುಷ್ಮಾ ಅವರು ಆಡಿಸಲಿದ್ದಾರೆ. ಇದು ಸ್ಪರ್ಧಿಗಳ ನಡುವಿನ ಹಳೆಯ ಕಾಲೆಳೆಯುವ ಗುಣವನ್ನು ಮತ್ತೆ ನೆನಪಿಸಲಿದೆ.

ಈ ಬಾರಿಯ ಬಿಗ್ ಬಾಸ್‌ನಲ್ಲಿ ಅತಿ ಹೆಚ್ಚು ಚರ್ಚೆಗೊಳಗಾದವರೆಂದರೆ ಅದು ಬಿಗ್‌ಬಾಸ್‌ ವಿಜೇತ ಗಿಲ್ಲಿ ನಟ. ದೊಡ್ಮನೆ ಹಬ್ಬ ಕಾರ್ಯಕ್ರಮದಲ್ಲಿ ಗಿಲ್ಲಿ ಅಭಿಮಾನಿಗಳಿಗಾಗಿಯೇ ವಿಶೇಷ ವೇದಿಕೆ ಕಲ್ಪಿಸಲಾಗಿದೆ. ಅವರ ಬಿಗ್‌ ಬಾಸ್‌ ಪಯಣವನ್ನು ಸಂಭ್ರಮಿಸುವ ಜೊತೆಗೆ, ಅಭಿಮಾನಿಗಳು ಸಹ ಈ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ.

ಈಗಾಗಲೇ ಬಿಗ್ ಬಾಸ್‌ ಸೀಸನ್‌ 12ರ ಸ್ಪರ್ಧಿಗಳು ವೇದಿಕೆ ಮೇಲೆ ತಮ್ಮಿಷ್ಟದ ಹಾಡಿಗೆ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ. ಬಿಗ್‌ ಬಾಸ್‌ ದಿನಗಳನ್ನು ಮೆಲುಕು ಹಾಕಿದ್ದಾರೆ. ಹೊರ ಬಂದ ಮೇಲೆ ಸಿಕ್ಕ ಪ್ರತಿಕ್ರಿಯೆ ಹೇಗಿತ್ತು ಅನ್ನೋದನ್ನೂ ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.