ADVERTISEMENT

BBK12: ರಹಸ್ಯ ಕೋಣೆಯಲ್ಲೂ ನಿಲ್ಲದ ಧ್ರುವಂತ್, ರಕ್ಷಿತಾ ಕಿತ್ತಾಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಡಿಸೆಂಬರ್ 2025, 6:16 IST
Last Updated 16 ಡಿಸೆಂಬರ್ 2025, 6:16 IST
<div class="paragraphs"><p>ರಕ್ಷಿತಾ,&nbsp;ಧ್ರುವಂತ್</p></div>

ರಕ್ಷಿತಾ, ಧ್ರುವಂತ್

   

ಬಿಗ್‌ಬಾಸ್‌ ಮನೆಯಿಂದ ಇನ್ನೇನು ಆಚೆ ಬರುತ್ತಾರೆ ಎನ್ನುವಷ್ಟರಲ್ಲಿ ರಕ್ಷಿತಾ ಹಾಗೂ ಧ್ರುವಂತ್‌ ಅವರು ರಹಸ್ಯ ಕೋಣೆಗೆ ಹೋಗಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ಇದ್ದಾಗಲೂ ಸದಾ ಕಿತ್ತಾಡುತ್ತಿದ್ದ ರಕ್ಷಿತಾ ಹಾಗೂ ಧ್ರುವಂತ್ ರಹಸ್ಯ ಕೊಠಡಿಯಲ್ಲೂ ಅದನ್ನು ಮುಂದುವರೆಸಿದ್ದಾರೆ.

ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಹಂಚಿಕೊಂಡಿದೆ. ಅದರಲ್ಲಿ ರಹಸ್ಯ ಕೋಣೆಗೆ ಹೋಗಿದ್ದ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ ಜಗಳ ಶುರು ಮಾಡಿದ್ದಾರೆ. ಧ್ರುವಂತ್, ರಕ್ಷಿತಾಳ ವರ್ತನೆಯನ್ನು ಅಣಕಿಸಿದ್ದಕ್ಕೆ ಆಕೆಗೆ ಕೋಪ ಬಂದಿದೆ. ಆ ಕೂಡಲೇ ರಕ್ಷಿತಾ ಅವರು ಧ್ರುವಂತ್‌ ವಿರುದ್ಧ ಕಿಡಿಕಾರಿದ್ದಾರೆ.

ADVERTISEMENT

ಪ್ರೊಮೋದಲ್ಲಿ ರಕ್ಷಿತಾ ಧ್ರುವಂತ್‌ಗೆ ‘ನೀವು ಯಾಕೆ ಇಷ್ಟು ಸ್ಟೈಲ್ ಮಾಡ್ತೀರಿ’ ಎಂದು ಪ್ರಶ್ನೆ ಮಾಡಿದ್ದಾಳೆ. ಆಗ ಧ್ರುವಂತ್ ‘ನನ್ನನ್ನು ನಾನು ಪ್ರೀತಿಸುತ್ತೇನೆ’ ಎಂದಿದ್ದಾರೆ. ನಿಮ್ಮನ್ನು ಸೀಕ್ರೆಟ್ ರೂಮ್‌ಗೆ ಹಾಕಿ ತಪ್ಪಾಯ್ತು ಎಂದು ಬಿಗ್‌ಬಾಸ್ ಸಹ ವಿಷಾದ ವ್ಯಕ್ತಪಡಿಸುತ್ತಿದ್ದಾರೆ ಎಂದು ಧ್ರುವಂತ್‌ಗೆ ರಕ್ಷಿತಾ ಹೇಳುತ್ತಾರೆ. ಆ ಕೂಡಲೇ ಧ್ರುವಂತ್ ‘ನಿನ್ನ ಅಹಂಕಾರ, ನಿನ್ನ ಒಳ್ಳೆಯದಕ್ಕೆ ಹೇಳಿದರೂ ನೀವು ಮಾಡುವ ವರ್ತನೆ ಸರಿಯಿಲ್ಲ’ ಎಂದಿದ್ದಾರೆ. ಇದರಿಂದ ಕೋಪಗೊಂಡ ರಕ್ಷಿತಾ, ಕ್ಯಾಮೆರಾ ತೋರಿಸಿ ನಿಮಗೆ ಫೂಟೇಜ್ ಬೇಕಾ ಎಂದು ಕಿರುಚಾಡುತ್ತಾ ಇಬ್ಬರು ಜಗಳ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.