ADVERTISEMENT

ಸ್ಪಂದನಾ ಮಾತಿಗೆ ಸ್ಪಂದಿಸಿದ್ದೇ ತಪ್ಪಾಯ್ತಾ? ವಾರದ ಟಾಸ್ಕ್‌ಗಳಿಂದ ಧ್ರುವಂತ್ ಔಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಅಕ್ಟೋಬರ್ 2025, 5:06 IST
Last Updated 14 ಅಕ್ಟೋಬರ್ 2025, 5:06 IST
<div class="paragraphs"><p>ಸ್ಪಂದನಾ ಹಾಗೂ ಧ್ರುವಂತ್ </p></div>

ಸ್ಪಂದನಾ ಹಾಗೂ ಧ್ರುವಂತ್

   

ಚಿತ್ರ: ಕಲರ್ಸ್ ಕನ್ನಡ ಇನ್‌ಸ್ಟಾಗ್ರಾಮ್

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ 12ನೇ ಆವೃತ್ತಿ ಶುರುವಾಗಿ 17ನೇ ದಿನಕ್ಕೆ ಕಾಲಿಟ್ಟಿದೆ. ಈ ಎರಡು ವಾರದಲ್ಲೇ ಬಿಗ್‌ಬಾಸ್‌ ಮನೆಯಲ್ಲಿ ದೊಡ್ಡ ಕೋಲಾಹಲ ಸೃಷ್ಟಿಯಾಗಿದೆ. ಕಳೆದ ಸಂಚಿಕೆಯಲ್ಲಿ ಬಿಗ್‌ಬಾಸ್‌ ಮನೆಯಲ್ಲಿ ಸ್ಪಂದನಾ ಹಾಗೂ ಧ್ರುವಂತ್ ಮಧ್ಯೆ ಗಲಾಟೆ ನಡೆದಿತ್ತು.

ADVERTISEMENT

ಒಳ್ಳೆಯವನ ನಾಟಕ ಇವಾಗ ತೋರಿಸ್ತೀನಿ ಎಂದು ಏಕಾಏಕಿ ಸ್ಪಂದನಾ ಮೇಲೆ ಧ್ರುವಂತ್ ರೇಗಿದ್ದರು. ಇದೀಗ ತಮ್ಮ ಇಮ್ಯೂನಿಟಿಯನ್ನು ಉಪಯೋಗಿಸಿ ಧ್ರುವಂತ್‌ ಅವರನ್ನು ಇಡೀ ವಾರದ ಟಾಸ್ಕ್‌ನಿಂದ ಹೊರಗೆ ಇಟ್ಟಿದ್ದಾರೆ.

ಈಗ ಕಲರ್ಸ್‌ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಬಿಡುಗಡೆಯಾದ ಪ್ರೊಮೋದಲ್ಲಿ ‘ಮೊದಲ ಫಿನಾಲೆಯ ಈ ವಾರ ತಾವು ಫೈನಲಿಸ್ಟ್‌ ಆಗಿ ಬಿಗ್‌ಬಾಸ್‌ ಮನೆಯಲ್ಲಿ ತಮ್ಮ ಪ್ರಯಾಣ ಮುಂದುವರೆಸಲು ಇದು ಕಟ್ಟಕಡೆಯ ಅವಕಾಶ’ ಎಂದು ಬಿಗ್‌ಬಾಸ್‌ ಹೇಳಿದ್ದಾರೆ. ಬಳಿಕ ನಾಮಿನೇಟ್‌ ಆಗಿರುವ ಎಲ್ಲಾ ಸ್ಪರ್ಧಿಗಳಿಗೆ ಟಾಸ್ಕ್‌ ಒಂದನ್ನು ನೀಡಿದ್ದಾರೆ.

ಟಾಸ್ಕ್‌ ಮುಕ್ತಾಯವಾಗುತ್ತಿದ್ದಂತೆ ಇಮ್ಯೂನಿಟಿಯನ್ನು ಉಪಯೋಗಿಸಿದ ಸ್ಪಂದನಾ ಧ್ರುವಂತ್‌ ಅವರನ್ನ ಇಡೀ ವಾರದ ಟಾಸ್ಕ್‌ನಿಂದ ಹೊರ ಇಟ್ಟಿದ್ದಾರೆ. ಸ್ಪಂದನಾ ಜೊತೆ ಮಾಡಿಕೊಂಡಿದ್ದ ಜಗಳವೇ ಧ್ರುವಂತ್‌ಗೆ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಈ ವಾರದ ಎಲ್ಲಾ ಟಾಸ್ಕ್‌ಗಳಿಂದ ಧ್ರುವಂತ್‌ ಅವರನ್ನು ಸ್ಪಂದನಾ ಹೊರಗೆ ಇರಿಸಿದ್ದಾರೆ. ಜನತೆಯಿಂದ ಬಂದ ವೋಟ್‌ನಿಂದ ಸ್ಪಂದನಾ ಮತ್ತು ಮಾಳು ಇಬ್ಬರು ಕೊನೆಯ ಕ್ಷಣದಲ್ಲಿ ಫೈನಲಿಸ್ಟ್ ಆಗಿ ಆಯ್ಕೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.