
ಬಿಗ್‌ಬಾಸ್ ಸೀಸನ್ 12ರ ಟಾಪ್ 6 ಫೈನಲಿಸ್ಟ್‌ಗಳು
ಚಿತ್ರ: ಜಿಯೋ ಹಾಟ್‌ಸ್ಟಾರ್
ಕನ್ನಡದ ಬಿಗ್‌ಬಾಸ್ 12ನೇ ಆವೃತ್ತಿ ಅಂತಿಮ ಘಟ್ಟಕ್ಕೆ ತಲುಪಿದೆ. ಜ.18 ಭಾನುವಾರದ ಸಂಚಿಕೆಯಲ್ಲಿ ಈ ಬಾರಿಯ ಬಿಗ್‌ಬಾಸ್ ಟ್ರೋಫಿ ಯಾರ ಕೈಗೆ ಸೇರಲಿದೆ ಎಂದು ಗೊತ್ತಾಗಲಿದೆ.
ಬಿಗ್‌ಬಾಸ್ ಮನೆಯಲ್ಲಿ ಟಾಪ್ 6 ಫೈನಲಿಸ್ಟ್‌ಗಳು ಉಳಿದುಕೊಂಡಿದ್ದಾರೆ. ಧನುಷ್ ಗೌಡ, ಕಾವ್ಯ, ರಘು, ಅಶ್ವಿನಿ ಗೌಡ, ಗಿಲ್ಲಿ ನಟ ಹಾಗೂ ರಕ್ಷಿತಾ ಉಳಿದುಕೊಂಡಿದ್ದಾರೆ. ಈ ಆರು ಮಂದಿಯಲ್ಲಿ ಒಬ್ಬ ಸ್ಪರ್ಧಿ ಮಾತ್ರ ಬಿಗ್‌ಬಾಸ್ ವಿಜೇತರಾಗಲಿದ್ದಾರೆ.
ಈಗಾಗಲೇ ಬಿಗ್‌ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ವೀಕ್ಷಕರು ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ವೋಟ್ ಹಾಕುತ್ತಿದ್ದಾರೆ. ಜೊತೆಗೆ ಸ್ಪರ್ಧಿಗಳ ಪರ ಚುನಾವಣೆ ರೀತಿಯಲ್ಲಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.
ಬಿಗ್‌ಬಾಸ್ ಸೀಸನ್ 12ರ ಟಾಪ್ 6 ಫೈನಲಿಸ್ಟ್‌ಗಳು
ಸ್ಪರ್ಧಿಗೆ ವೋಟ್ ಹಾಕಲು ಕೊನೆಯ ಅವಕಾಶ
ಈ ಬಾರಿಯ ಬಿಗ್‌ಬಾಸ್ ಸೀಸನ್ 12ರ ವಿನ್ನರ್ ಇವರೇ ಆಗಬೇಕು ಎಂದು ಬಯಸುವವರು ಜಿಯೋ ಹಾಟ್‌ಸ್ಟಾರ್ ಮೂಲಕ ವೋಟ್ ಹಾಕಬಹುದು. ಈ ವೋಟಿಂಗ್ ಲೈನ್ ಜನವರಿ 18ರ ಬೆಳಿಗ್ಗೆ 10 ಗಂಟೆಯವರೆಗೆ ಮತ ಹಾಕಲು ಅವಕಾಶ ಇದೆ. ಬಿಗ್‌ಬಾಸ್ ನಿಯಮದ ಪ್ರಕಾರ, ವೀಕ್ಷಕರು ಹಾಕುವ ಮತಗಳ ಮೇಲೆ ವಿಜೇತರ ನಿರ್ಧಾರವಾಗುತ್ತದೆ. ಇನ್ನು, ಯಾವ ಸ್ಪರ್ಧಿಗೆ ಅತಿ ಹೆಚ್ಚು ಮತಗಳು ಬಂದಿರುತ್ತದೆಯೇ ಅವರೇ ಈ ಬಾರಿಯ ಬಿಗ್‌ಬಾಸ್ ಸೀಸನ್ 12ರ ವಿಜೇತರಾಗಿ ಹೊರಹೊಮ್ಮಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.